ಆಗಸ್ಟ್ 25 ಬೆಂಗಳೂರಿನಲ್ಲಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ವಿಚಾರ ಸಂಕಿರಣ

ಬಸವ ಮೀಡಿಯಾ
ಬಸವ ಮೀಡಿಯಾ

ಹಲವು ವರ್ಷಗಳ ಬಳಿಕವೂ ಪ್ರಾದೇಶಿಕ ಪಕ್ಷದ ಅನುಪಸ್ಥಿತಿಯಿಂದ ಕರ್ನಾಟಕದ ರಾಜಕೀಯ ಭಾರತದ ಇತರ ರಾಜ್ಯಗಳ ಪೈಕಿ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತದೆ.

ದಕ್ಷಿಣ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲವಾಗಿದ್ದರೆ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳೇ ಇಲ್ಲಿಯವರೆಗೂ ಆಡಳಿತ ಮಾಡಿವೆ. ಕರ್ನಾಟಕದ ಈ ವಿಶಿಷ್ಟ ರಾಜಕೀಯ ಸನ್ನಿವೇಶವನ್ನು ಕೂಲಂಕುಷವಾಗಿ ವಿಚಾರ ಮಾಡಲು, ಕನ್ನಡ ಸಂಘಟನೆಗಳು ಆಗಸ್ಟ್ 25 ಬೆಂಗಳೂರಿನಲ್ಲಿ “ನಮ್ಮ ನಾಡು ನಮ್ಮ ಆಳ್ವಿಕೆ” ಸಾರ್ವಜನಿಕ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದಾರೆ.

ನಾಡಿನ ಹೆಸರಾಂತ ಲೇಖಕರಾದ ಕುಂ. ವೀರಭದ್ರಪ್ಪನವರು, ಹಿರಿಯ ಪತ್ರಕರ್ತರಾದ ಬಿಎಮ್ ಹನೀಫ್ ಅವರು, ಕನ್ನಡಪರ ಚಿಂತಕರಾದ ಆನಂದ್ ಗುರು ಅವರು ಹಾಗು ಖ್ಯಾತ ಚಿತ್ರನಟಿ ಪೂಜಾ ಗಾಂಧಿಯವರು ಪಾಲ್ಗೊಳ್ಳಲಿದ್ದಾರೆ. ಅವರ ವಿಷಯ ಮಂಡನೆ ನಂತರ, ಸಾರ್ವಜನಿಕರೊಂದಿಗೆ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರಗಳು :
ದಿನಾಂಕ : 25 ಆಗಸ್ಟ್, ಭಾನುವಾರ
ಸಮಯ : ಬೆಳಗ್ಗೆ 10 ಗಂಟೆ
ಸ್ಥಳ : ಬಸವ ಸಮಿತಿ ಸಭಾಂಗಣ, ಚಾಲುಕ್ಯ ವೃತ್ತ
ವಿಧಾನ ಸೌಧದ ಹಿಂಭಾಗ, ಬೆಂಗಳೂರು

ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ :
ಶಿವಣ್ಣ ಗುಂಡನವರ್ : 88677 34326
ರವಿ ಆಲದಮರ : 90086 05637
ಸಜಿತ್ : 99003 58358
ಸಾರಿಕ : 99029 95116

Share This Article
Leave a comment

Leave a Reply

Your email address will not be published. Required fields are marked *