ಗೂಂಡಾ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಮಾನ್ವಿಯಲ್ಲಿ ಆಗ್ರಹ

ಮಾನ್ವಿ

ಕಾಡಸಿದ್ದೇಶ್ವರ ಮಠದ ಕನ್ನೇರಿ ಸ್ವಾಮಿ ಲಿಂಗಾಯತ ಮಠಾಧೀಶರಿಗೆ ಅವಾಚ್ಯ ಶಬ್ದ ಬಳಕೆ ಮಾಡಿ ನಿಂದಿಸಿರುವುದನ್ನು ಖಂಡಿಸಿ, ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಬಸವ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕಗಳಿಂದ ತಹಸೀಲ್ದಾರ್ ಅಬ್ದುಲ್ ವಾಹೀದ್‌ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರಿಂದ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಬಸವ ಸಂಸ್ಕೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು.

ಈ ಹಿನ್ನಲೆಯಲ್ಲಿ ಅಭಿಯಾನವನ್ನು, ಲಿಂಗಾಯತ ಮಠಾಧೀಶರನ್ನು ಕನ್ನೇರಿ ಸ್ವಾಮಿ ಅವಾಚ್ಯ ಪದಗಳಿಂದ ನಿಂದಿಸಿ, ಅಸಂವಿಧಾನಿಕವಾಗಿ ಮಾತನಾಡಿರುತ್ತಾರೆ. ಈ ಗೂಂಡಾ ವರ್ತನೆ ಲಿಂಗಾಯತ ಧರ್ಮದ ಪೂಜ್ಯರಿಗೆ ಮತ್ತು ಬಸವಭಕ್ತರ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಈ ರೀತಿಯ ಹೇಳಿಕೆ ನೀಡಿರುವ ಕನ್ನೇರಿ ಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಪಗಡದಿನ್ನಿ, ಬಸವಕೇಂದ್ರದ ಗೌರವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ, ಹರವಿ ನಾಗನಗೌಡ, ಮಲ್ಲಿಕಾರ್ಜುನ ಗುಡಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಚಿಮ್ಲಾಪುರ, ಬಸವಕೇಂದ್ರ ತಾಲೂಕು ಅಧ್ಯಕ್ಷ ರಂಗಪ್ಪ ಜಿ.ಎಮ್, ಪದಾಧಿಕಾರಿಗಳಾದ ಶೇಖರಪ್ಪ ಪಾಟೀಲ, ದೊಡ್ಡಬಸನಗೌಡ ಚಿಮ್ಲಾಪುರ, ದೇವೆಂದ್ರ ದುರ್ಗದ, ಶಂಬನಗೌಡ, ಅಮರೇಶ ಗವಿಗಟ್ಟು, ಉದಯಕುಮಾರ, ಸಂತೋಷಕುಮಾರ, ಮಹಾಂತೇಶ ಗವಿಗಟ್ಟು ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *