ದೇವದುರ್ಗ
ಮಹಾರಾಷ್ಟ್ರ ಮೂಲದ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮೀಗೆ ಬುದ್ಧಿ ಭ್ರಮಣೆಯಾಗಿದ್ದು, ಕೂಡಲೇ ರಾಜ್ಯ ಸರಕಾರ ಗೃಹ ಇಲಾಖೆ ಮೂಲಕ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಗ್ರಹಿಸಿದೆ.
ಘಟಕದ ಅಧ್ಯಕ್ಷ ಬಸವರಾಜ ನಾಯಕ, ಕಾರ್ಯದರ್ಶಿ ಬಸವರಾಜ ಪಾಟೀಲ ಅವರು ಪಟ್ಟಣದಲ್ಲಿ ಬುಧವಾರ ಪತ್ರಿಕಾ ಹೇಳಿಕೆ ನೀಡಿ, ಕನ್ನೇರಿ ಸ್ವಾಮೀಜಿ ಅನಾವಶ್ಯಕವಾಗಿ, ವಿನಾಕಾರಣ ಹೇಳಿಕೆಗಳನ್ನು ನೀಡುತ್ತಾ ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದಾರೆ.
ಬಾಯಿಚಪಲವೋ ಏನೋ ಬಸವಧರ್ಮ ಶ್ರೀಗಳನ್ನು ಬಸವ ತಾಲೀಬಾನಿಗಳು ಎನ್ನುವ ಮೂಲಕ ಬಸವ ಅನುಯಾಯಿಗಳಿಗೆ ತೀವ್ರ ನೋವು ಉಂಟು ಮಾಡಿದ್ದಾರೆ. ಇದು ಖಂಡನಾರ್ಹವಾಗಿದೆ.
ಕಾಯಕ, ದಾಸೋಹದಂತಹ ಅಮೂಲ್ಯ ತತ್ವಗಳ ಮೂಲಕ ರಾಷ್ಟ್ರದಲ್ಲಿ
ಜನಪ್ರಿಯವಾಗಿರುವ ಬಸವ ಧರ್ಮ, ಲಿಂಗಾಯತ ಸಂಘಟನೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿರುವುದನ್ನು ಸಹಿಸದ ಕನ್ನೇರಿ ಮಠದ ಸ್ವಾಮೀಜಿ ಅವಾಚ್ಯ ಶಬ್ದಗಳ ಬಳಕೆ ಮಾಡುತ್ತ, ತಮ್ಮ ಸ್ಥಾನದ ಗಂಭೀರತೆಯನ್ನು , ಪಾವಿತ್ರತೆಯನ್ನು ನಾಶ ಮಾಡುತ್ತಿದ್ದಾರೆ.
ಅಗ್ಗದ ಜನಪ್ರಿಯತೆ ಪಡೆಯುವ ಉದ್ದೇಶ ಮತ್ತು ಬಸವಧರ್ಮದ ಏಳಿಗೆಯನ್ನು ಸಹಿಸದ ಈ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ, ನಾಡಿನಲ್ಲಿ ಅಶಾಂತಿ, ಅಸಹಿಷ್ಣುತೆಗೆ ಕಾರಣರಾಗುತ್ತಿದ್ದಾರೆ.
ಹಾಗಾಗಿ ಬುದ್ಧಿಭ್ರಮಣೆಯ ರೋಗದಿಂದ ಬಳಲುತ್ತಿರುವ ಕನ್ನೇರಿ ಮಠದ ಸ್ವಾಮೀಜಿಗೆ ರಾಜ್ಯ ಸರಕಾರ ಗೃಹ ಇಲಾಖೆ ಮೂಲಕ ಈ ಕೂಡಲೇ ಸೂಕ್ತ ಚಿಕಿತ್ಸೆಗೆ ಕ್ರಮಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ.
