ಬಾಗಲಕೋಟೆ
ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಹಿನ್ನಲೆಯಲ್ಲಿ ಬೀಳಗಿ ತಾಲ್ಲೂಕಿನ ಚಿಕ್ಕಾಲಗುಂಡಿಯಲ್ಲಿ ಇರುವ ಕನೇರಿ ಶಾಖಾ ಮಠಕ್ಕೆ ಶುಕ್ರವಾರ ಬಂದು ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿ ಉಳಿದುಕೊಂಡಿದ್ದಾರೆ.
ವಿಷಯ ತಿಳಿದ ಜಿಲ್ಲಾಧಿಕಾರಿ ಸಂಗಪ್ಪ, ‘ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಒಂದು ಗಂಟೆಯಲ್ಲಿ ಮಠದಿಂದ ಹೊರಡಬೇಕು’ ಎಂದು ಆದೇಶ ಜಾರಿಗೊಳಿಸಿದ್ದಾರೆ. ಡಿವೈಎಸ್‌ಪಿ ಗಜಾನನ ಸುತಾರ, ಬೀಳಗಿ ತಹಶೀಲ್ದಾರ್ ವಿನೋದ ಹತ್ತಳ್ಳಿ, ‘ಜಿಲ್ಲಾಧಿಕಾರಿ ಆದೇಶದ ತೆಗೆದುಕೊಂಡು ಹೋಗಿ ಸ್ವಾಮೀಜಿ ಗಂಟೆಯೊಳಗೆ ಜಿಲ್ಲೆ ಬಿಟ್ಟು ಹೋಗಬೇಕು’ ಎಂದರು.
ನೋಟಿಸ್ ತೆಗೆದುಕೊಂಡ ನಂತರ ‘ಯಾವುದೇ ಕಾರಣಕ್ಕೂ ಇಲ್ಲಿಂದ ತೆರಳುವುದಿಲ್ಲ. ನೀವು ಬಂಧಿಸುವಂತಿದ್ದರೆ, ಬಂಧಿಸಿ. ಮುಂದಿನ ಕ್ರಮ ತೆಗೆದುಕೊಳ್ಳಿ. ಸಮಾಧಾನ ಆಗುವವರೆಗೆ ಜೈಲಿನಲ್ಲಿಡಿ. ಆ ನಂತರ ಆಗುವ ಪರಿಣಾಮಕ್ಕೆ ನೀವು ಜವಾಬ್ದಾರರು’ ಎಂದರು.
ಆಗ ತಹಶೀಲ್ದಾರ್ ವಿನೋದ, ‘ಕಾನೂನು ಪ್ರಕಾರ ಹೊರಡಬೇಕು. ಇಲ್ಲಿ ಇರುವಂತೆ ಇಲ್ಲ’ ಎಂದರು. ಆಗ ಸ್ವಾಮೀಜಿ, ನಮ್ಮ ವಕೀಲರ ಜತೆಗೆ ಚರ್ಚೆ ಮಾಡಿ ನಿರ್ಧರಿಸುತ್ತೇನೆ’ ಎಂದು ತಿಳಿಸಿದರು ಎಂದು ಗೊತ್ತಾಗಿದೆ.
ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಯವರೊಂದಿಗೆ ಚರ್ಚಿಸಿದರು.
ದೇಶದ ಕಾನೂನಿಗೆ ಬೆಲೆ ಕೊಡದವರಿಗೆ ದೇಶ ದ್ರೋಹಿ ಎಂದರೆ ಹೇಗೆ?
ಕೊಲೆಗಾರ ಅನ್ನುತ್ತಾರೆ. ವಿವರ ಏನು?
ಭಾರತ ಸಂವಿಧಾನದ ಅಡಿಯಲ್ಲಿ ಮುನ್ನೆಡೆಯಬೇಕು, ಆದರೆ ಈ ಕನ್ನೇರಿ ಸ್ವಾಮಿ ನಿನ್ನೆ ನಡೆದ ಸುವರ್ಣ tv ಕಾಲ ಸಂಧರ್ಶನದಲ್ಲಿ ಭಾರತ ಉಳಿಯಬೇಕಾದರೆ ತನ್ನ ಧರ್ಮ ಉಳಿಯಬೆಕೆಂದಿರೋದು ಸಂವಿಧಾನದ ವಿರೋಧಿ ಯಂಬುದನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೆಕು.