ಕಲಬುರ್ಗಿ
ವಿಜಯಪುರ ಜಿಲ್ಲೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿರುವ ಸರಕಾರಿ ಆದೇಶ ಪ್ರಶ್ನಿಸಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿತು.
ಕಲಬುರ್ಗಿ ಪೀಠದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಮಧ್ಯಂತರ ತೀರ್ಪು ನೀಡಿದೆ.
ಇದರಿಂದ ಬಸವನ ಬಾಗೇವಾಡಿಯಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಲು ಇಂದು ಕೂಡ ಕನ್ನೇರಿ ಸ್ವಾಮಿಗೆ ಸಾಧ್ಯವಾಗುವುದಿಲ್ಲ.
ವಿಜಯಪುರ ಜಿಲ್ಲೆಗೆ ಭೇಟಿ ನೀಡುವುದನ್ನು ಪ್ರತಿಬಂಧಿಸಿ ವಿಜಯಪುರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕಾಡುಸಿದ್ದೇಶ್ವರ ಸ್ವಾಮೀಜಿ ಗುರುವಾರ ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ನೆನ್ನೆ ವಿಚಾರಣೆ ನಡೆಸಿ ಇಂದು ಬೆಳಿಗ್ಗೆ 10:30ಕ್ಕೆ ಮಧ್ಯಂತರ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕನ್ನೇರಿ ಮಠದ ಕಾಡುಸಿದ್ದೇಶ್ವರ ಸ್ವಾಮೀಜಿ ಬಳಸಿರುವ ನುಡಿಗಳು ಅವರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಸ್ವಾಮೀಜಿ ಸಾಮಾನ್ಯರಿಗಿಂತಲೂ ಕೆಳ ಹಂತದ ಭಾಷೆ ಬಳಕೆ ಮಾಡಿದ್ದಾರೆ’ ಎಂದು ಮಾನ್ಯ ನ್ಯಾಯಮೂರ್ತಿಗಳು ಕನ್ನೇರಿ ಸ್ವಾಮಿಗೆ ಛೀಮಾರಿ ಹಾಕಿದ್ದರು.
‘ಸ್ವಾಮೀಜಿ 17ಕ್ಕೇ ಏಕೆ ಅಲ್ಲಿಗೆ ತೆರಳಬೇಕು. ಬೇರೊಂದು ದಿನ ಹೋಗಬಹುದಲ್ಲವೇ’ ಎಂದು ಪ್ರಶ್ನಿಸಿ, ‘ಈಗಾಗಲೇ ಸಮಾಜದಲ್ಲಿ ಅಶಾಂತಿಯ ವಾತಾವರಣ ತಾಂಡವವಾಡುತ್ತಿದೆ. ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂಬುದು ತಿಳಿದು ಬಂದರೆ ಸ್ವಾಮೀಜಿ ಆದಂಥವರು ಅಂತಹ ಕಡೆ ನಾನು ಬರುವುದೇ ಇಲ್ಲ ಎಂದು ಹೇಳುವಲ್ಲಿ ಮೊದಲಿಗರಾಗಬೇಕು’ ಎಂದು ಹೇಳಿದ್ದರು.
ಮಾನ ಮರ್ಯಾದೆ ಇಲ್ಲದವ ಕಾಡು ಸಿದ್ದೇಶ್ವರ, ಸ್ವಾಮಿ ಎಂದು ಹೇಳುವುದಕ್ಕೂ ನಾಚಿಕೆ, ಇಂಥವರಿಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ.
Yes you are absolutely right
RSS BJP ಗೆ ಹಿನ್ನಡೆ ಮೇಲೆ ಹಿನ್ನೆಡೆ
ಕನ್ನೇರಿ ಸ್ವಾಮಿ ಅರ್ಜಿ ವಜಾ, ನಿರ್ಬಂಧ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಈ ಸ್ವಾಮಿಯ ಹಿಂದೆ ನೀಚ ಮನಸ್ಥಿತಿಯ RSS ಮತ್ತು BJP ಇವೆ ಅಂದರೆ, ಇವರೆಲ್ಲ ಲಿಂಗಾಯತರ ವಿರುದ್ಧ ಪ್ಲ್ಯಾನ್ ಮಾಡಿ ಈ ಸ್ವಾಮಿಯನ್ನು ಮುಂದುಮಾಡಿ ಆಟ ನಡೆಸಿದ್ದಾರೆ. ತಕ್ಕ ಪಾಠ ಕಲಿಸಬೇಕು.
ನ್ಯಾಯಕ್ಕೆ ಸಿಕ್ಕ ಜಯ
He must be punished for using such unparliamentary words against followers of Lord Basavanna
ಇಂತಹ ಮಾತಿನ ಪೆಟ್ಟು ಕನ್ನೇರಿ ಸೋಣಗನಿಗೆ ಪರಿಣಾಮ ಬಿರೋದಿಲ್ಲ. ಅವನ ಬಾಯಿಂದ ಬಂದ ಮಾತು ಅವನಿಗೆ ಪ್ರಾಯೋಗಿಕ ಆಗಬೇಕು..
ಇದು ನಿರೀಕ್ಷೆತ ನ್ಯಾಯಾಲಯ ಆದೇಶ ಜಿಲ್ಲಾ ಅಧಿಕಾರಿಗೆ ಪೊಲೀಸ್ ರಿಪೋರ್ಟ್ ಮೇಲೆ ಆದೇಶ ಮಾಡುವ ಅಧಿಕಾರ ಇದೆ. ಕೆನ್ನೆರಿ ಸ್ವಾಮಿ ಅರ್ಜಿ ಹಾಕಬಾರದಿತ್ತು