ಕನ್ನೇರಿ ಸ್ವಾಮಿ ಮತ್ತವರ ಬೆಂಬಲಿಗರು ಅವಹೇಳನಕಾರಿ ಹೇಳಿಕೆ ನೀಡದಂತೆ ನಿರ್ಬಂಧ
ಬೆಂಗಳೂರು
ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟ ಒಂದು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದೆ.
ಇಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ ನ್ಯಾಯಾಧೀಶರು ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಕನ್ನೇರಿ ಸ್ವಾಮಿಗೆ ನಿರ್ಬಂಧಕಾಜ್ಞೆ ವಿಧಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದ ಕನ್ನೇರಿ ಸ್ವಾಮಿಯ ವಿರುದ್ಧ ನಾಲ್ಕು ದಿನಗಳ ಹಿಂದೆ ಬೆಂಗಳೂರಿನ 31ನೇ ಸಿಸಿಹೆಚ್ ಕೋರ್ಟಿನಲ್ಲಿ 1 ಕೋಟಿ ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು.
ಗುರುವಾರ ನಡೆದ ವಿಚಾರಣೆಯಲ್ಲಿ ಒಕ್ಕೊಟದ ಪರವಾಗಿ ವಕೀಲೆ ವಿಜೇತಾ ಆರ್. ನಾಯ್ಕ್ ಕನ್ನೇರಿ ಸ್ವಾಮಿ ಅಶ್ಲೀಲ ಪದ ಪ್ರಯೋಗಿಸಿ ಲಿಂಗಾಯತ ಪೂಜ್ಯರನ್ನು ತೆಗಳಿದ್ದಾರೆ ಎಂದು ವಾದಿಸಿದ್ದರು. ಕನ್ನೇರಿ ಸ್ವಾಮಿಯ ಹೇಳಿಕೆಯಿಂದ ಲಿಂಗಾಯತ ಮಠಗಳ ಒಕ್ಕೂಟದ ಗೌರವಕ್ಕೆ ಧಕ್ಕೆಯಾಗಿದೆ. ಇಂತಹ ಹೇಳಿಕೆ ನೀಡದಂತೆ ಸ್ವಾಮೀಜಿಗೆ ನಿರ್ಬಂಧ ವಿಧಿಸುವಂತೆ ಮನವಿ ಮಾಡಿದ್ದರು.
ಅದರಂತೆ ಇಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಆದೇಶದಲ್ಲಿ ಕನ್ನೇರಿ ಸ್ವಾಮಿ ಮತ್ತವರ ಪರವಾಗಿ ಯಾರೂ ಲಿಂಗಾಯತ ಮಠಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಲಾಗಿದೆ. ಯಾವುದೇ ಸಾರ್ವಜನಿಕ ವೇದಿಕೆ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಲಿಂಗಾಯತ ಮಠಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಲಾಗಿದೆ.
ಈ ಬಗ್ಗೆ ಕನ್ನೇರಿ ಸ್ವಾಮಿಗೆ ನೋಟಿಸ್ ಜಾರಿ ಮಾಡಿ ನ್ಯಾಯಾಧೀಶರು ಡಿಸೆಂಬರ್ 5ರಂದು ಮುಂದಿನ ವಿಚಾರಣೆ ನಡೆಯುವಂತೆ ದಿನ ಗೊತ್ತು ಪಡಿಸಿದ್ದರೆ.
ಇದರ ಬಗ್ಗೆ ಬಸವ ಮೀಡಿಯಾದೊಂದಿಗೆ ಮಾತನಾಡಿದ ಒಕ್ಕೂಟದ ಹಿರಿಯ ಪೂಜ್ಯರೊಬ್ಬರು ಕನ್ನೇರಿ ಸ್ವಾಮಿಯ ವಿರುದ್ಧ ಕಾನೂನು ಸಮರ ಶುರುವಾಗಿದೆ. ಯಾರಾದರೂ ಈಗ ಲಿಂಗಾಯತ ಮಠಾಧಿಪತಿಗಳನ್ನು ನಿಂದಿಸಿದರೆ ಅದು ನ್ಯಾಯಾಲಯದ ನಿಂದನೆಯಾಗುತ್ತದೆ ಎಂದು ಹೇಳಿದರು.
** ಮಕ್ಕಳು, **ನಿಂದ ಹೊಡೆಯಬೇಕು ಮುಂತಾದ ಪದಗಳನ್ನು ಬಳಸಿದ ಕನ್ನೇರಿ ಸ್ವಾಮಿಯ ವಿರುದ್ಧ ಲಿಂಗಾಯತ ಸಮಾಜ ಸಿಡಿದೆದ್ದ ಹಿನ್ನಲೆಯಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಅವರನ್ನು ನಿರ್ಬಂಧಿಸಲಾಗಿದೆ.
ಇದನ್ನು ಪ್ರಶ್ನಿಸಿ ಸ್ವಾಮೀಜಿ ಕಲಬುರಗಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ, ಸಾಮಾನ್ಯ ಜನರೂ ಕೂಡ ಸ್ವಾಮೀಜಿ ಬಳಸಿದ ಭಾಷೆಯನ್ನು ಬಳಸುವುದಿಲ್ಲ ಎಂದು ಹೇಳಿದ್ದ ಕೋರ್ಟ್, ಜಿಲ್ಲಾಡಳಿತದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ಸ್ವಾಮೀಜಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಸಹ ಸ್ವಾಮೀಜಿ ಮೇಲ್ಮನವಿಯನ್ನು ವಜಾಗೊಳಿಸಿದೆ.
ಆದರೆ ಅವರ ಪರವಾಗಿ ಬೆಳಗಾವಿಯಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಸಭೆ ನಡೆಸಿದ ಹಿಂದುತ್ವ ಹಾಗೂ ಬಿಜೆಪಿ ನಾಯಕರು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ.

Super ಪೂಜ್ಯರಿಗೆ ಶರಣಾರ್ಥಿ
ಸರಿಯಾದ ಕ್ರಮ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬ ಲಿಂಗಾಯತನೂ ಒಬ್ಬ ಗಣಾಚಾರಿಯೆಂದು ಗೊತ್ತಾಗಲಿ
ಒಳ್ಳೆಯ ನಡೆ. ಸ್ವಲ್ಪ.ತಡವಾಯಿತು, ಈಗಲಾದರೂ ಮಾಡಿದ್ದು ಉತ್ತಮ ನಡೆ.
ಧರ್ಮ ರಕ್ಷಣೆಗೆ ಹಿಂದೂ ಲಿಂಗಾಯತ ಯುವಪಡೆ ಕಟ್ತಾರಂತೆ. ಪ್ರತೀ ಗ್ರಾಮದಲ್ಲಿ ಕನಿಷ್ಠ 10-15 ಜನ ಯುವಕರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗುತ್ತಂತೆ….
ಅತ್ಯಂತ ತಡವಾಗಿಯಾದರೂ ಅತ್ಯಂತ ಒಳ್ಳೆಯ ಕೆಲಸಕ್ಕೆ ಮುಂದಾದ ಒಕ್ಕೂಟದ ಕಾರ್ಯಕ್ಕೆ ಶರಣಾರ್ಥಿಗಳು. ಆದರೆ ಪರಹಾರದ ಮೊತ್ತ ೧ ಕೋಟಿ ಬದಲಾಗಿ ೧೦೦ ಕೋಟಿ ಆಗಿದ್ದರೆ ಒಳ್ಳೆಯದಾಗುತ್ತಿತ್ತು.
ಅತ್ಯಂತ ಶ್ರೇಷ್ಠ ಕಾರ್ಯ ಮಾಡಿದ್ದಾರೆ. ಇದು ಹೀಗೆ ಮುಂದುವರಿಯಬೇಕು.ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಎಲ್ಲಾ ಲಿಂಗಾಯತ ಧರ್ಮದ ಮಠಾಧೀಶರು ಕಾರ್ಯಪ್ರವೃತ್ತರಾಗಬೇಕು .ಶರಣಯಶರಣಾರ್ಥಿಗಳು.
ಲಿಂಗಾಯತ ಮಠಾಧೀಶರ ಒಕ್ಕೂಟದ ಈ ನಿರ್ಣಯ ಒಳ್ಳೆಯ ನಡೆಯಾಗಿದೆ ಸಕಾಲಕ್ಕೆ ನಿಮ್ಮ ಬಸವ ಪ್ರಜ್ಞೆಯ ಗಟ್ಟಿತನ ನಿಮ್ಮನ್ನು ಕಾನೂನ ಸಮರದಲ್ಲಿ ಹಾಗೂ ಬಹಿರಂಗ ಸೈದ್ಧಾಂತಿಕ ಹೋರಾಟದಲ್ಲಿ ನಿಮಗೆ ಜಯ ಕಟ್ಟಿಟ್ಟ ಬುತ್ತಿ. ನಿಮ್ಮೊಂದಿಗೆ ನಾಡಿನ ಎಲ್ಲಾ ಬಸವ ಪ್ರಜ್ಞೆಯ ಬಸವ ಪರ ಸಂಘಟನೆಗಳು ಇವೆ. ನಿಮ್ಮೊಂದಿಗೆ ನಾವುಗಳು ವಿರಕ್ತರು ವೀರಗಣಾಚಾರಿಗಳು ಆಗುವುದು ಇಂದಿನ ಕಾಲಘಟ್ಟಕ್ಕೆ ಅತ್ಯವಶ್ಯಕವಾಗಿದೆ.
ಲಿಂಗಾಯತ ಮಠ ಆಧೀಷರು ತೋರಿಸಿದ ಸಹನೆ, ತಾಳ್ಮೆ ಮೆಚ್ಚುವಂತಹದು. ಯಾರಾದರೂ ಕೆಟ್ಟ ಶಬ್ದ ಬಳಸಿ ತೇಗಳಿದ್ದಾರೆ ಎಂದು ನಾನು ಆ ರೀತಿ ವರ್ತಿಸದೆ ಸಹನೆ ತೋರಿ ತಮ್ಮ ಘನತೆಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಕಾನೂನಾತ್ಮಕ ನಡೆ ಯೋಗ್ಯವಾಗಿದೆ… ಅಭಿನಂದನೆಗಳೊಂದಿಗೆ ಅನಂತ ಶರಣುಗಳು
ಜೈ ಲಿಂಗಾಯತ ಧರ್ಮ
ಜೈ ಬಸವ
ಈ ಕಾರ್ಯ ಮಾಡಬೇಕಾದರೂ ನಮ್ಮ ಗುರು ಬಳಗ, ಬಹಳ ತಾಳ್ಮೆಯಿಂದ, ಲಿಂಗಾಯತ ಧರ್ಮ ವಿರೋಧಿಗಳಿಗೆ ಸಾಕಷ್ಟು ಸುಧಾರಣೆಗೆ ಅವಕಾಶ ಕೊಟ್ಟರು, ಸುಧಾರಣೆ ಆಗದ ಕಾರಣ ಪ್ರಕರಣ ದಾಖಲು ಮಾಡಿದ್ದಾರೆ.
ಅದರ ಬಹಳ ತಡ ಆಗಿದೆ. ಪ್ರಕರಣಕ್ಕೆ ಬೆನ್ನು ಹತ್ತಿ ನಡೆಸಬೇಕು.
ಕನ್ಹೇರಿ ಬಹಿರಂಗ ಕ್ಷಮೆ ಕೇಳುವ ದಿನ ಬರುತ್ತೆ, ಅವರದು ಕ್ಷಮಾಪಣೆ ಪತ್ರ ಬರೆಯುವ ಸಂಘಟನೆಯಿಂದ ಪ್ರೇರಿತರಾದವರು, ಈ ನಕಲಿ ದೇಶಭಕ್ತ ಚಕ್ರವರ್ತಿ ಸೂಲಿಬೆಲೆಯೂ ಕ್ಷಮಾಪಣೆ ಕೇಳುತ್ತಾನೆ , ಹೀಗೆ ಕೋರ್ಟಿನಿಂದಲೂ ಚಾಟಿ ಏಟು ಬೀಸುತ್ತಾ ಇರಬೇಕು
ಕನ್ನೇರಿ ಬೆಂಬಲಕ್ಕೆ ನಿಂತು, ನಮ್ಮ ಧರ್ಮಗುರು ಬಸವಣ್ಣನವರಬಗ್ಗೆ & ಲಿಂಗಾಯತ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುವ ಯತ್ನಾಳನಂಥಹ ಕೊಳಕುಭಾಷೇಯವರಿಗೆ ಕಾನೂನನಿಂದ ಶಿಕ್ಷೇಯಾಗುವಂತೆ ಮಾಡಬೆಕು.ಅಂದಾಗಮಾತ್ರ ಲಿಂಗಾಯತ ಧರ್ಮದ ವಿರುದ್ದ ಹಗುರವಾಗಿ ಮಾತನಾಡುವವರು ಯಚ್ಚರಿಕೆಯಿಂದ ಮಾತನಾಡುವಂತಾಗುತ್ತದೆ.
ಇಂಥವರಿಗೆ ಕಠಿಣ ಶಿಕ್ಷೆ ಆಗಲೇಬೇಕು, ಯಾರೂ ಹಿಂದೆ ಸರಿಯುವ ಮಾತೆ ಇಲ್ಲ. ಜಯ ಗುರು ಬಸವ, ಶರಣು ಶರಣಾರ್ಥಿ 🙏🙏
ಕಾನೂನಾತ್ಮ ಕ. ಹೋರಾಟ ದ ಮೂಲಕ ಸಂಘಟನೆ ಮೂಲಕ ಮುನ್ನಡೆಯೋಣ. ಶರಣರ ಇತಿಹಾಸ ವನ್ನು ನಾವು ನೆನಪಿಸಿಕೊಂಡು ಕೆಲಸ ಮಾಡೋಣ.