ವಿಜಯಪುರ:
ಬಸವಾದಿ ಶರಣ ಸಮಗಾರ ಹರಳಯ್ಯನವರನ್ನು ಅವಮಾನಿಸಿ, ಹರಳಯ್ಯ ಸಮಾಜದ ಜನರನ್ನು ನೋಯಿಸಿರುವ ಕನ್ನೇರಿ ಸ್ವಾಮಿ ಮೇಲೆ ಸರ್ಕಾರ ಕ್ರಮ ಜರುಗಿಸಲು ವಿಜಯಪುರದಲ್ಲಿ ಆಗ್ರಹಿಸಲಾಗಿದೆ.
ಈ ಬಗ್ಗೆ ಬಬಲೇಶ್ವರ ತಾಲ್ಲೂಕಿನ ಶೇಗುಣಸಿ ಶ್ರೀ ಶಿವಶರಣೆ ಹರಳಯ್ಯನವರ ಗುಂಡ ಅಭಿವೃದ್ದಿ ಸಂಘದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ.
ಶಿವಶರಣ ಹರಳಯ್ಯನವರ ಬಗ್ಗೆ ಸಾರ್ವಜನಿಕವಾಗಿ ತಪ್ಪಾಗಿ ಹೇಳಿ, ಕಾಯಕ ಶರಣರನ್ನು ಅವಮಾನಿಸಿದ ಕನ್ನೇರಿ ಸ್ವಾಮಿ ಜೊತೆ ಈ ಬಗ್ಗೆ ವಿಷಯ ಮಾತನಾಡಲಾಗಿದೆ. ಕ್ಷಮೆಯಾಚಿಸಿ, ಸರಿಯಾದ ಹೇಳಿಕೆಯನ್ನು ಕೊಡುವುದಾಗಿ ಅವರು ಹೇಳಿ ವಾರ ಕಳೆಯಿತು. ಆದರೆ ಇಲ್ಲಿಯವರೆಗೂ ಅವರು ಆ ಕುರಿತು ಮಾತನಾಡಲಿಲ್ಲ, ಎಂದು ಶ್ರೀ ಶಿವಶರಣ ಹರಳಯ್ಯನವರ ಗುಂಡ ಅಭಿವೃದ್ದಿ ಸಂಘದ ಕಾರ್ಯದರ್ಶಿ ಮುತ್ತಣ್ಣ ಕಬಾಡೆ ಮಾತನಾಡುತ್ತ ಹೇಳಿದರು.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಯಲ್ಲಪ್ಪ ಸಾಣಕ್ಯಾನವರ, ದತ್ತಾತ್ರೇಯ ಕಬಾಡೆ, ರಮೇಶ ಹೊನಮೊಡೆ, ಆನಂದ ಕಾಂಬಳೆ, ನಾಗರಾಜ ಕಬಾಡೆ, ಯಲ್ಲಪ್ಪ ಕಾಶೆ ಮತ್ತಿತರರು ಉಪಸ್ಥಿತರಿದ್ದರು.
ಚಿಕ್ಕೋಡಿ:
ಶಿವಶರಣ ಹರಳಯ್ಯ ಸಮಾಜದ ವತಿಯಿಂದ ತಹಶೀಲ್ದಾರರ ಮುಖಾಂತರ ಸರ್ಕಾರಕ್ಕೆ ಮಂಗಳವಾರ ಮನವಿಪತ್ರ ಸಲ್ಲಿಸಿ ಕನ್ನೇರಿ ಸ್ವಾಮಿ ಮೇಲೆ ಕ್ರಮಕ್ಕೆ ಆಗ್ರಹಿಸಲಾಯಿತು.

ಅಧ್ಯಕ್ಷ ಪರಶುರಾಮ ಭಂಡಾರೆ ನೇತೃತ್ವ ವಹಿಸಿದ್ದರು. ಮುಖಂಡರಾದ ದತ್ತಾ ಮಾನೆ, ತುಕಾರಾಂ ಭಂಡಾರೆ, ಸಂತೋಷ ಮಾನೆ, ಭರತ್ ನಿರ್ಮಳೆ, ರಾಜು ಹುಜರೆ, ಮಹಾದೇವ ರಾಯಮಾನೆ, ಜ್ಯೋತಿಬಾ ಹುಜರೆ, ಪರಶುರಾಮ ಹುಜರೆ, ಪರಗೌಡ ಹೊನಕಡೆ, ರವಿ ರಾಯಮಾನೆ ಮತ್ತಿತರರು ಉಪಸ್ಥಿತರಿದ್ದರು.

ಇವರನ್ನು ತಿದ್ದುವದು ನಾಯಿ ಬಾಲ್ ಸರಳ ಮಾಡುವದು ಒಂದೇ