ಏಪ್ರಿಲ್ ೩೦ಕ್ಕೆ ಬೆಂಗಳೂರು ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆ ಆಯೋಜನೆ:
ಬೆಂಗಳೂರು
ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕಾಗಿ ೧೨ನೇ ಶತಮಾನದ ಬಸವಾದಿ ಶರಣರ (ಬೆಂಗಳೂರು ನಗರ ಮತ್ತು ಗ್ರಾಮಾಂತರ) ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯನ್ನು ಏಪ್ರಿಲ್ ೩೦ರಂದು ಬೆಳಿಗ್ಗೆ ೮ ಘಂಟೆಗೆ ಬಸವನಗರ ( ಎಚ್.ಏ.ಎಲ್. ಹತ್ತಿರ) ಬಸ್ ನಿಲ್ದಾಣದಲ್ಲಿರುವ ಬಸವೇಶ್ವರ ಮೂರ್ತಿಯ ಹತ್ತಿರ ಆಯೋಜಿಸಲಾಗಿದೆ.
ಬಸವ ಸೇವಾ ಸಮಿತಿ ಬಸವನಗರ ಇವರ ಪ್ರಾಯೋಜಕತ್ವದಲ್ಲಿ ನಡೆಯುವ ವಚನ ಕಂಠಪಾಠ ಸ್ಪರ್ಧೆಯಲ್ಲಿ ೫೦೦ ವಚನಗಳನ್ನು ಹೇಳಿ ಪ್ರಥಮ ಸ್ಥಾನ ವಿಜೇತರಿಗೆ ₹ ೨೫೦೦೦ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದವರಿಗೆ ₹ ೧೫೦೦೦ ನಗದು, ತೃತೀಯ ಸ್ಥಾನ, ₹ ೧೦೦೦೦ ನಗದು ಹಾಗೂ ನಂತರದ ಸ್ಥಾನ ಪಡೆಯುವ ಸ್ಪರ್ಧಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ಆಯೋಜಕರು ನಿಗದಿ ಪಡಿಸಿದ್ದಾರೆ.
ಕಂಠಪಾಠ ಸ್ಪರ್ಧೆಗೆ ನಿಯಮಗಳು:
ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ದಿನಾಂಕ ೨೫.೦೪.೨೦೨೫ ಕ್ಕೇ ಮೊದಲು ಆಯೋಜಕರ ಹತ್ತಿರ ಖುದ್ದಾಗಿ ಅಥವಾ ದೂರವಾಣಿ ಮೂಲಕ ನೋಂದಾಯಿಸಿಕೊಳ್ಳಬೇಕು ಮತ್ತು ನಿಗದಿತ ಸಮಯದೊಳಗೆ ಹಾಜರಿರಬೇಕು.
ವಚನ ಹೇಳುವಾಗ ನಿರರ್ಗಳವಾಗಿ, ಸ್ಪಷ್ಟವಾಗಿ, ಯಾವದೇ ವ್ಯಾಕರಣ ದೋಷವಿಲ್ಲದೆ ಹೇಳಬೇಕು.ಸ್ಪರ್ಧಾರ್ಥಿಗಳು ಹೇಳುವ ವಚನಗಳನ್ನು ಸ್ಪಷ್ಟವಾಗಿ, ಮುದ್ರಿತ/ ಲಿಖಿತ ರೂಪದ ಪ್ರತಿಯನ್ನು ಕಡ್ಡಾಯವಾಗಿ ತೀರ್ಪುದಾರರಿಗೆ ಸಲ್ಲಿಸಬೇಕು. ವಚನ ಪ್ರತಿಯನ್ನು ಸಲ್ಲಿಸದಿದ್ದಲ್ಲಿ ಅಂಥವರನ್ನು ಸ್ಪರ್ಧೆಯಿಂದ ತಿರಸ್ಕರಿಸಲಾಗುವುದು.
ಬೆಂಗಳೂರು ನಗರ ಅಥವಾ ಗ್ರಾಮಾಂತರ ಜಿಲ್ಲೆಯ ನಿವಾಸಿಗಳು ಎನ್ನುವದಕ್ಕೆ ಆಧಾರ ಅಥವಾ ಇನ್ನಿತರ ದಾಖಲೆಗಳನ್ನು ಕಡ್ಡಾಯವಾಗಿ ತೀರ್ಪುದಾರರಿಗೆ ಕೊಡಬೇಕು. ಬೇರೆ ಜಿಲ್ಲೆಯವರಿಗೆ ಪ್ರವೇಶವಿರುವದಿಲ್ಲ. ಪ್ರಮುಖವಾಗಿ ಸ್ಪರ್ಧಾರ್ಥಿಗಳು ಹೇಳುವ ವಚನಗಳು ೧೨ ನೇ ಶತಮಾನದ ಬಸವಾದಿ ಶರಣರ ವಚನಗಳೇ ಆಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಮಲ್ಲಿಕಾರ್ಜುನ ಹಂಜಿ (೯೮೮೬೫೧೨೮೦೧) ಓಂಕಾರಪ್ಪ (೯೪೪೮೬೬೭೫೧೨) ಮಲ್ಲಿಕಾರ್ಜುನ ಕಲಹಾಳ (೯೬೩೨೧೧೯೭೪೫) ಇವರನ್ನು ಸಂಪರ್ಕಿಸಬಹುದು.
