ರಾಯಚೂರು:
ಶರಣು ವಿಶ್ವವಚನ ಫೌಂಡೇಶನ್ ರಾಯಚೂರು ಜಿಲ್ಲಾ ಘಟಕ, ದೇವದುರ್ಗ ತಾ. ಘಟಕ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಪ್ರಾಥಮಿಕ ಶಾಲೆ ಕರಡಿಗುಡ್ಡ ಇವರ ಸಂಯುಕ್ತಾಶ್ರಯದಲ್ಲಿ ತಿಂಗಳ ಕನಸು ಹಾಗೂ ವಚನಗಳ ನಡೆ ಶಾಲೆಗಳ ಕಡೆ ಎಂಬ ಕಾರ್ಯಕ್ರಮ ಕರಡಿಗುಡ್ಡ ಪ್ರಾ. ಶಾಲೆಯಲ್ಲಿ ಶನಿವಾರ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಂಕ್ರಯ್ಯ ಸ್ವಾಮಿ ಕರಡಿಗುಡ್ಡ ನೆರವೇರಿಸಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ದೇವದುರ್ಗ ತಾಲೂಕಿನ ಅಧ್ಯಕ್ಷರಾದ ಎಚ್.ಎಸ್. ಸ್ವಾಮಿ ಮಾತನಾಡಿ, ಮಕ್ಕಳ ಸಾಹಿತ್ಯ ಬೆಳೆದು ಬಂದ ದಾರಿ ಬಗ್ಗೆ ಹಾಗೂ ಮಕ್ಕಳು ಈಗಿನಿಂದಲೇ ಸಾಹಿತ್ಯ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳುವ ಬಗ್ಗೆ ತಿಳಿಹೇಳಿದರು.
ಶರಣು ವಿಶ್ವ ವಚನ ಫೌಂಡೇಶನ್ ರಾಯಚೂರು ಜಿಲ್ಲೆಯ ಅಧ್ಯಕ್ಷರಾದ ಬೆಟ್ಟಪ್ಪ ಕಸ್ತೂರಿ, ವಚನ ಸಾಹಿತ್ಯವನ್ನು 12ನೇ ಶತಮಾನದ ಶರಣರು ಕನ್ನಡ ಭಾಷೆಯಲ್ಲಿ ಬರೆದು, ಕನ್ನಡವನ್ನು ದೇವ ಭಾಷೆಯಾಗಿ ಮಾಡಿದರು ಎಂದರು.
ಶರಣು ವಿಶ್ವವಚನ ಫೌಂಡೇಶನ್ ಗೌರವ ಅಧ್ಯಕ್ಷರಾದ ಡಾ ದೇವೇಂದ್ರಮ್ಮ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಮಹಿಳೆಯರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದರು, ಅವರಿಗೆ ಸಮಾನ ಸ್ಥಾನಮಾನ ಕಲ್ಪಿಸಿ ಬಸವಣ್ಣನವರು ಸ್ತ್ರೀ ಕುಲೋದ್ದಾರಕರಾದರೆಂದರು.
ಫೌಂಡೇಶನ್ ತಾಲೂಕು ಅಧ್ಯಕ್ಷ ಚನ್ನಬಸವ ಶಿಕ್ಷಕರು ಮಕ್ಕಳ ಸಾಹಿತ್ಯ ಮತ್ತು ವಚನ ಸಾಹಿತ್ಯದ ಬಗ್ಗೆ ಉಪನ್ಯಾಸ
ನೀಡಿ, ಬಸವಾದಿ ಶರಣರು ಅಂದಿನ ಜಿಡ್ಡುಗಟ್ಟಿದ ಸಮಾಜದ ವಾತಾವರಣವನ್ನು ಬದಲಾಯಿಸಿದರು ಮತ್ತು ಅಂದಿನ ಮೌಡ್ಯಾಚರಣೆಗಳನ್ನು ತಿರಸ್ಕರಿಸಿ ಸುಂದರ ಸಮಾಜ ನಿರ್ಮಾಣ ಮಾಡಿದರೆಂದು ಹೇಳಿದರು.
ಫೌಂಡೇಶನ್ ದೇವದುರ್ಗ ಅಧ್ಯಕ್ಷ ಮಲ್ಲಿಕಾರ್ಜುನ ಬೂದಿನಾಳ ವಚನ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಎ.ಎಸ್. ಕೆ ಸ್ವಾಮಿ ಅಧ್ಯಕ್ಷರು ದೇವದುರ್ಗ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಇವರು ಸಂಘಟನೆಯಿಂದ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ತಿಪ್ಪೇಶಸ್ವಾಮಿ ವಹಿಸಿದ್ದರು.
ಕುಮಾರ ಆಕಾಶ ಎನ್. ಸ್ವಾಗತಿಸಿದರು, ಮಹಾಂತೇಶ ಗವಿಗಟ್ಟ ವಂದಿಸಿದರು.
ಶಾಲಾ ವಿದ್ಯಾರ್ಥಿಗಳು ವಚನ ವಾಚನ ಮಾಡಿದರು. ಶರಣು ವಿಶ್ವ ವಚನ ಫೌಂಡೇಶನ್ ರಾಯಚೂರು ವತಿಯಿಂದ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಶರಣು ವಿಶ್ವವಚನ ಫೌಂಡೇಶನ್ ಪದಾಧಿಕಾರಿಗಳು, ಎಸ್ಡಿಎಂಸಿ ಅಧ್ಯಕ್ಷರಾದ ಗಂಗಾಧರ ಹಾಗೂ ಊರಿನ ಹಿರಿಯರು ಶಾಲಾ ಶಿಕ್ಷಕವೃಂದ, ಬಿಸಿಯೂಟ ಸಿಬ್ಬಂದಿ ಉಪಸ್ಥಿತರಿದ್ದರು.