ಹಿಂದೂ ಬರೆಸಲು ಮಠಾಧೀಶರಿಗೆ ಆರ್‌ಎಸ್‌ಎಸ್‌ನಿಂದ ಒತ್ತಡ: ಕಾಶಪ್ಪನವರ

ಬಸವ ಮೀಡಿಯಾ
ಬಸವ ಮೀಡಿಯಾ

ಇಲಕಲ್ಲ

ಜಾತಿಗಣತಿ ಸಮೀಕ್ಷೆಯ ವಿಷಯದಲ್ಲಿ ಹಿಂದೂ ಎಂದು ಬರೆಸಬೇಕೆಂದು ಕೆಲವು ಮಠಾಧೀಶರುಗಳಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದಲೇ ಫಂಡಿಂಗ್ ಆಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

ಇಲಕಲ್ಲ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ಸ್ವಾಮೀಜಿಗಳಿಗೆ ಫಂಡಿಂಗ್ ಮಾಡಿ ಹಿಂದೂ ಅಂತ ಬರೆಸಲು ಒತ್ತಡ ಹಾಕಿದ್ದಾರೆ ಎನ್ನುವ ಮಾಹಿತಿಯಿದೆ. ಯಾವ ಯಾವ ಮಠಾಧೀಶರು ಅಂತ ಹೇಳೋದಿಲ್ಲ. ಕೆಲವರು ವಿರೋಧ ಮಾಡಿದ್ದಾರೆ.

ನಮ್ಮ ರಾಷ್ಟ್ರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು. ಅದು ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ, ಎಂದು ಕಾಶಪ್ಪನವರ ಹೇಳಿದರು.

ಕೂಡಲಸಂಗಮದಲ್ಲೇ ಮತ್ತೇ ಪೀಠ ಕಟ್ಟಿ ಬೆಳೆಸ್ತೇವೆ ಎಂದು ಉಚ್ಚಾಟಿತ ಪೂಜ್ಯ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು ಹಣ ಹಾಕಿ ಯಾವ ನದಿ ದಂಡೆಯಲ್ಲಾದ್ರೂ ಮಠ ಕಟ್ಟಿಕೊಳ್ಳಲಿ. ಅವರ ಹಿಂದುತ್ವವನ್ನೇ ಪಾಲನೆಮಾಡಲಿ. ನಮ್ಮದು ಬಸವ ತತ್ವ, ಅದರಲ್ಲಿ ನಂಬಿಕೆಯಿಟ್ಟು ಕೆಲಸ ಮಾಡುವವರು ಮಾತ್ರ ನಮ್ಮ ಗುರುಗಳು, ಎಂದರು.

ತಾವು ಮೃತ್ಯುಂಜಯ ಶ್ರೀಗಳ ಮೇಲೆ ಮಾಡಿರುವ ಎಲ್ಲಾ ಆರೋಪಕ್ಕೂ ದಾಖಲೆಗಳಿವೆ ಎಂದು ಸ್ಪಷ್ಟನೆ ನೀಡಿದರು.

ಕೆಲವೊಂದು ವಿಷಯಗಳನ್ನು ಮಾಧ್ಯಮಗಳ ಮು೦ದೆ ಹಂಚಿಕೊಳ್ಳಲು ಆಗೋದಿಲ್ಲ. ಸಂದರ್ಭ ಬಂದ್ರೆ ಯಾವುದನ್ನು ಹೇಳೋದಕ್ಕೂ ಹೇಸೋದಿಲ್ಲ, ಅದನ್ನ ಅವರು ಅರ್ಥ ಮಾಡಿಕೊಳ್ಳಬೇಕು. ಇವರ ಅಕ್ರಮಗಳನ್ನೆಲ್ಲ ಒಂದು ಸಿಡಿಯಲ್ಲಿ ಹಾಕಿಟ್ಟಿದ್ದೇವೆ ಮಾಡಿದ್ದೇವೆ. ಸಮಯ ಬಂದಾಗ ಬಹಿರಂಗ ಪಡಿಸ್ತೀವಿ, ಎಂದು ಎಚ್ಚರಿಸಿದರು.

“ನಾನು ಹೇಳಿದ್ದು ಆ ಸಿಡಿ ವಿಚಾರವಲ್ಲ. ಆ ಸಿಡಿಯನ್ನ ಯಾರ್ಯಾರೋ ಖರೀದಿ ಮಾಡಿ ಹಂಚಿಕೊಂಡಿದ್ದಾರೆ,” ಎಂದು ನಿಗೂಢವಾಗಿಯೇ ಕಾಶಪ್ಪನವರ ಹೇಳಿದರು.

“ಸಿಡಿ ವಿಚಾರದಲ್ಲಿ ಭಯ ಯಾಕೆ ಇದೆ ಅವರಿಗೆ. ಎಲ್ಲವನ್ನು ತಂತ್ರಜ್ಞಾನದಿಂದ ಮಾಡೋಕೆ ಆಗುತ್ತಾ, ಅಷ್ಟು ನಿಷ್ಠಾವಂತರಾಗಿದ್ದರೆ ಭಯ ಯಾಕೆ,” ಎಂದು ಪ್ರಶ್ನಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
9 Comments
  • ನಾನು ಬಸವ ತತ್ವ ಪಾಲನೆ ಮಾಡುವವ ಮತ್ತು ನಮ್ಮ ಧರ್ಮ ಲಿಂಗಾಯತ ಎಂದು ಹೇಳಿರುವ ಶಾಸಕರಾದ ಮಾನ್ಯ ಶ್ರೀ ವಿಜಯಾನಂದ ಕಾಶಪ್ಪನವರಿಗೆ ಅಭಿನಂದನೆಗಳು ಮತ್ತು ಅಭಿವಂದನೆಗಳು 🌹🙏🙏

    • ರಾಜಕೀಯ ದಾಳವೀದ ಧರ್ಮ
      ಭಂಡಾರಿ ಬಸವ ಸ್ಥಾಪಿಸಿದ ಲಿಂಗಾಯತ ಧರ್ಮ
      ಮುಕ್ಕಗೊಳ್ಳಬೇಕಿದೆ ಕಳಚಿ ವೀರಶೈವ ಕರ್ಮ
      ಹಾಗಾದಾಗ ಲಿಂಗಾಯತ ಧರ್ಮವಾದೀತು ಸಾಮಾನ್ಯರ ಸರಳ ಧರ್ಮ
      ರಾಶಿ ಮೈ
      ಶುಭವಾಗಲಿ ಜಗಕೆ.
      🌳🌲🌴🌿🍀☘️🌱🌷🙏

  • ಸಂಘ ಪರಿವಾರ ದೇಶಭಕ್ತಿಯ ಹೆಸರಿನಲ್ಲಿ ಹಿಂದುಳಿದ ಶೂದ್ರ ವರ್ಗದ ಹಟಗಾರ,ಕುರುಬ ಮಡಿವಾಳ,ಬಣಗಾರ ಪಂಚಮಸಾಲಿ, ಬಣಜಿಗ, ಗಾಣಿಗ,ರೆಡ್ಡಿ,ಹಡಪದ ,ದಲಿತ ಇತ್ಯಾದಿ ಹಿಂದುಳಿದ ವರ್ಗದ ಯುವಕರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಬಿಚ್ಚಿಟ್ಟ ವಿಷಯ
    ಅದರಂತೆ ಸ್ವತಂತ್ರವಾಗಿ ಹುಟ್ಟಿದ್ದ ಲಿಂಗಾಯತ ಧರ್ಮಕ್ಕೆ
    ಸಾಂವಿಧಾನಿಕ ಮಾನ್ಯತೆ ನೀಡುವುದಕ್ಕೆ ಅಡ್ಡಿಮಾಡಲು
    ಮಠಾಧೀಶರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ.
    ಲಿಂಗಾಯತರು ಹಿಂದೂ ಎಂದು ಹೇಳಿಕೊಂಡರೆ ನೀವು ಶೂದ್ರ ರೆಂದು ಶೂದ್ರ ಸ್ಥಾನದಲ್ಲಿ ನಿಮ್ಮನ್ನು ನೋಡುತ್ತಾನೆ.
    ಇಲ್ಲಿ ಶೂದ್ರ ಎಂದರೆ ಗುಲಾಮರು ಎಂದರ್ಥ
    ಲಿಂಗಾಯತರೇ ಬಸವಾದಿ ಶರಣರು ನಾವುಗಳು ಸ್ವತಂತ್ರ ಧೀರರು ಎಂದು ಹೇಳಿದ್ದಾರೆ. ಇಲ್ಲಿ ಸ್ವತಂತ್ರ ಎಂದರೆ ಯಾರ ನಿಯಂತ್ರಣದಲ್ಲಿ ನಾವು ಇಲ್ಲ ಎಂದರ್ಥ ನಾವು ಸ್ವತಂತ್ರರರು
    ಅದಕ್ಕೆ ಅರ್ಥರ ಮೈಲ್ ಎಂಬ ಯೂರೋಪ್ ದೇಶದ
    ತತ್ವಜ್ಞಾನಿ ಬಸವಣ್ಣನವರ ಬಗ್ಗೆ ಪುರಾಣಗಳು,ಶಾಸ್ತ್ರಗಳು, ರಗಳೆಗಳು ಏನೇ ಹೇಳಲಿ ಬಸವಣ್ಣನವರು ಭಾರತ ದೇಶದ
    ಮೊದಲು ಸ್ವತಂತ್ರ ವಿಚಾರವಾದಿ ಎಂದು ಹೇಳಿದ್ದಾರೆ.

      • ಶ್ರೀ ಕಾಶಪ್ಪನವರಿಗೆ ತುಂಬು ಹೃದಯ ಧನ್ಯವಾದಗಳು ಬಸವ ತತ್ವದ ಪರಿಪಾಲಕರಾಗಿರುವುದಕ್ಕೆ ತುಂಬಾ ಖುಷಿಯಾಗುವುದು

    • ವಿಜಯಾನಂದ ಕಾಶಪ್ಪ ನವರಿಗೆ ಲಿಂಗಾಯತ ಧರ್ಮದ ಪರವಾಗಿ ನಿಲ್ಲುವ ಎದೆಗಾರಿಕೆಗೆ ಶರಣು ಶರಣಾರ್ಥಿ

  • ಈ ಮೊದಲುಆರ್ ಎಸ್ ಎಸ್ ಸಂಘಿಗಳಿಗೆ ಪತ್ತೆ ಹಚ್ಚಿ ಅವರ ನಾಚಿಕೆ ಕೆಲಸಕ್ಕೆ ಉಗಿದು ಬಹಿರಂಗವಾಗಿ ಎಚ್ಚರಿಕೆ ಕೊಡಬೇಕು. ಸಾವ೯ಜನಿಕರಂಗದ ಮೇಲೆ ಇನ್ನೊಂದು ಕಡೆ ಇಂಥ ಕೆಲಸಗಳಲ್ಲಿ ತೊಡಗಿರುವುದನ್ನು ಉಗಿದು ಹಾಕಬೇಕು. ‌‌‌‌‌

  • *ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ವಿಶ್ವಗುರು ಬಸವಣ್ಣನವರೇ ಧರ್ಮ ಸಂಸ್ಥಾಪಕರು. ಬಸವಣ್ಣವರು ಆದಿಯಾಗಿ 770 ಶರಣರು ಬರೆದ ವಚನ ಸಾಹಿತ್ಯವೇ ಲಿಂಗಾಯತ ಧರ್ಮ ಗ್ರಂಥ.*

    *ಹಿಂದೂ ಸಮಾಜವೆಂದು ನಾವೆಲ್ಲರೂ ಒಂದೇ.*

    *ಹಿಂದೂ* ಒಂದು ಮಹಾನ *ಸಂಸ್ಕೃತಿ* ಎಂಬ *ತಾಯಿ.* ಆ ಸಂಸ್ಕೃತಿಯನ್ನು ಅಡಕವಾಗಿಟ್ಟುಕೊಂಡು ಹುಟ್ಟಿರುವ ಧರ್ಮಗಳೇ ಅದರ ಮಕ್ಕಳು.
    ಆ *ಹಿಂದೂ* ಸಂಸ್ಕೃತಿರೂಪಿ *ತಾಯಿಯ* ಜೊತೆ ಭಾರತೀಯ ಜನ್ಶ ಧರ್ಮಗಳು. *”ಓಂ”ಕಾರವೆಂಬ ಕರುಳಿನ* ಮುಖಾಂತರ *ಜೋಡಿಸಲ್ಪಟ್ಟಿವೆ.*
    ಅದು ಯಾವಾಗಲೂ ಹಾಗೆ ಇರುತ್ತದೆ.
    ಜಗತ್ತಿನ ಸಂಸ್ಕೃತಿಯಲ್ಲಿ ಒಂದೆರಡು ವಿದೇಶಿ ಧರ್ಮಗಳಷ್ಟೇ ಜಗತ್ತನ್ನು ವ್ಯಾಪಿಸಿವೆ.
    ಆದರೆ ಹಿಂದೂ ಸಂಸ್ಕೃತಿಯು ಒಂದು ವಟವ್ರಕ್ಷ್ಯವಿದ್ದಂತೆ. ಅದನ್ನು ಯಾರು ಅಲ್ಲಾಡಿಸಲು ಆಗುವುದಿಲ್ಲ.
    ಹಿಂದೂವನ್ನು ನೀವು ಸ್ವತಂತ್ರ ಧರ್ಮ ಎಂದು ಪರಿಗಣಿಸಿದರೆ, ಅದರ ಮಕ್ಕಳಾದ ಮತ್ತು ಈಗಾಗಲೇ ಭಾರತ ಸರ್ಕಾರದಿಂದ ಧರ್ಮವೆಂದು ಮಾನ್ಯತೆ ಪಡೆದ ಜೈನ್, ಶಿಖ, ಬೌದ್ಧ, ಮುಂತಾದವು ಹೊರಗೆ ಹೋಗುತ್ತವೆ.
    ಆಗ ಹಿಂದೂ ಧರ್ಮದ ಸಂಖ್ಯೆ ಕಡಿಮೆಯಾಗುವುದಿಲ್ಲವೆ.
    ಅದಕ್ಕಾಗಿ ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವೆಂದು ಮಾನ್ಯತೆ ಪಡೆದರು ಯಾವುದೇ ಬದಲಾವಣೆ ಆಗುವುದಿಲ್ಲ. ಹಿಂದೂ ಧರ್ಮ ಸಂಸ್ಕೃತಿ ಒಡೆಯುವುದಿಲ್ಲ.
    ಅದಕ್ಕಾಗಿ ಸರಿಯಾಗಿ ತಿಳಿದುಕೊಳ್ಳಿ. ಸುಪ್ರೀಂ ಕೋರ್ಟ್, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ, ಅವರು ಹಿಂದೂ ಸಂಸ್ಕೃತಿಯ ಬಗ್ಗೆ ಏನು ಹೇಳಿದ್ದಾರೆ ನೋಡಿ. ಲಿಂಕ್ ಕೊಡುತ್ತಿದ್ದೇನೆ.
    https://youtube.com/clip/UgkxOiJ_h6OFEdF0jQdpozWPQHcrLojEgpzf?feature=shared. माननीय पंतप्रधान नरेंद्र मोदींचे वक्तव्य हिंदू एक वे ऑफ लाईफ.

Leave a Reply

Your email address will not be published. Required fields are marked *