ರಬಕವಿ ಬನಹಟ್ಟಿ
ಇಂದಿನ ದಿನಗಳಲ್ಲಿ ಯುವಕರು ಕೇವಲ ಹಿರಿಯರ ಆಸ್ತಿಗಳಿಗೆ ವಾರಸುದಾರರಾಗದೆ ಅವರು ನಡೆಸಿಕೊಂಡ ಬಂದ ಶರಣ ಸಂಸ್ಕಾರ, ಆಚರಣೆ ಮತ್ತು ಧರ್ಮ ಶ್ರದ್ಧೆಗಳನ್ನು ಅಳವಡಿಸಿಕೊಳ್ಳುಬೇಕು. ಸಂಸ್ಕಾರ ಮತ್ತು ಕಾಯಕ ಬದ್ಧತೆಯು ಬಣಜಿಗರ ಜೀವಾಳವಾಗಿದೆ ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಬಕವಿ ಬನಹಟ್ಟಿ ತಾಲ್ಲೂಕು ಘಟಕದ ಬಣಜಿಗರ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ರುದ್ರಾಕ್ಷಿ, ಭಸ್ಮ ಮೊದಲಾದ ಆಚರಣೆಗಳನ್ನು ಆಧುನಿಕ ಬದುಕಿನಲ್ಲಿಯೂ ಪಾಲಿಸುವುದು ನಮ್ಮ ಧ್ಯೇಯ ಎಂಬಂತೆ ಸಮಾಜ ನಡೆದುಕೊಂಡು ಬಂದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲ ರೀತಿಯ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಎಲ್ಲರೂ ಗಮನ ನೀಡುವುದರ ಮೂಲಕ ಸಮಾಜ ಗಟ್ಟಿಯಾಗಿಸಬೇಕು ಎಂದರು.
ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ರೂಡಗಿ, ಹುಬ್ಬಳ್ಳಿಯ ರಾಮಕೃಷ್ಣ ಆಶ್ರಮದ ರಾಮಕೃಷ್ಣ ದೇವರು, ರಬಕವಿ ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಗದಗ ಜಿಲ್ಲೆಯ ನ್ಯಾಯಾಧೀಶ ಜಿ.ಆರ್. ಶೆಟ್ಟರ, ಗಿರೀಶ ಮುತ್ತೂರ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರ ಬಿದರಿ, ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಗುಳೇದ, ಡಾ. ವಿಜಯ ಹಂಚಿನಾಳ, ಚಂದ್ರಶೇಖರ ಹುಲಗಬಾಳಿ, ಸೋಮಶೇಖರ ಕೊಟ್ರಶೆಟ್ಟಿ, ಬಸವರಾಜ ತೆಗ್ಗಿ, ನೀಲಕಂಠ ಮುತ್ತೂರ, ಮಹಾಲಿಂಗಪ್ಪ ಕುಳ್ಳೊಳ್ಳಿ, ವೀರಭದ್ರ ಜಿಗಜಿನ್ನಿ, ಪ್ರಕಾಶ ಟೆಂಗಿನಕಾಯಿ, ಬಶೆಟ್ಟೆಪ್ಪ ಕುಂಚನೂರ, ಮಹಾಶಂತ ಶೆಟ್ಟಿ, ಮಲ್ಲಿಕಾರ್ಜುನ ಗಡೆನ್ನವರ, ವಿಜಯಕುಮಾರ ಹಲಕುರ್ಕಿ, ರವೀಂದ್ರ ಅಷ್ಟಗಿ, ಶಂಕರ ಬಟಕುರ್ಕಿ, ಆದಿತ್ಯಾ ಬಿದರಿ, ರಜನಿ ಶೇಠೆ, ಕಲಾವತಿ ಪಟ್ಟಣಶೆಟ್ಟಿ, ಶಶಿಕಲಾ ಜಿಗಜಿನ್ನಿ, ಶಾರದಾ ಕೊಟ್ರಶೆಟ್ಟಿ ಇದ್ದರು.