ದಾವಣಗೆರೆ
ಬಸವಣ್ಣನವರ ಹೆಸರಿನಲ್ಲಿ ಕೆಲಸ ಮಾಡುತ್ತಿರುವ ಕೆಲವು ಮಠಾಧೀಶರು ಸಮಾಜದಲ್ಲಿ ಕಂದಕ ಸೃಷ್ಟಿಸುತ್ತಿದ್ದಾರೆ. ವೀರಶೈವರೇ ಬೇರೆ ಲಿಂಗಾಯತರೇ ಬೇರೆ ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ
ಎನ್ನುತ್ತಾ ಭೇದಭಾವ ಹುಟ್ಟು ಹಾಕುತ್ತಿದ್ದಾರೆ, ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸೋಮವಾರ ಆರೋಪಿಸಿದರು.
ನಗರದಲ್ಲಿ ಇಂದಿನಿಂದ ಆರಂಭವಾದ ವೀರಶೈವ ಶಿವಾಚಾರ್ಯರ ಎರಡು ದಿನದ ಶೃಂಗಸಭೆಯಲ್ಲಿ ಮಾತನಾಡುತ್ತಾ ರಂಭಾಪುರಿ ಶ್ರೀಗಳು ಬಸವಣ್ಣನವರ ಪ್ರಸಿದ್ಧ ‘ಇವ ನಮ್ಮವ’ ವಚನವನ್ನು ಹೇಳಿ ಸಮಾಜದಲ್ಲಿ ‘ಭೇದಭಾವ’ ಮಾಡುತ್ತಿರುವವರನ್ನು ಖಂಡಿಸಿದರು.
“ಇನ್ನೊಂದು ವರ್ಗದ ಜನ ಎಂದೂ ರೇಣುಕಾದಿ ಪಂಚಾಚಾರ್ಯರ ಹೆಸರನ್ನು ಹೇಳದೆ ಕೇವಲ ಬಸವಾದಿ ಶರಣರ ಚಿಂತನೆಗಳನ್ನು ಮಾತ್ರ ಹೇಳುತ್ತಾರೆ. ಇದು ಬಹಳ ತಪ್ಪು. ನಮ್ಮ ಶಾಸ್ತ್ರದ, ಬೆಳೆದು ಬಂದ ಪರಂಪರೆಯ ಅರಿವಿಲ್ಲದೆ ನಡೆಯುತ್ತಿರುವ ಘಟನೆಗಳು. ಅವರಿಗೆ ಬೆಲೆ ಕೊಡೊ ಅವಶ್ಯಕತೆಯಿಲ್ಲ.
ಬಸವಾದಿ ಶರಣರ ಸಾಮಾಜಿಕ ಚಿಂತನೆಯನ್ನ ಎಲ್ಲಾ ಪಂಚಾಚಾರ್ಯರು ತಮ್ಮ ಅನೇಕ ಆಶೀರ್ವಚನದಲ್ಲಿ ಹೇಳುತ್ತಾರೆ,” ಎಂದು ಶ್ರೀಗಳು ಹೇಳಿದರು.
“ರೇಣುಕಾದಿ ಆಚಾರ್ಯರು ಕಟ್ಟಿದ ವೀರಶೈವವನ್ನು ದೊಡ್ಡದಾಗಿ ಬೆಳೆಸುವಂತಹ ಕಾರ್ಯವನ್ನು ಬಸವಣ್ಣನವರು ಮಾಡಿದರು. ವೀರಶೈವ ಸಿದ್ದಾಂತ, ಆಚರಣೆಗಳನ್ನು 12ನೇ ಶತಮಾನದ ಬಸವಾದಿ ಶರಣರು ಉಳಿಸಿ ಬೆಳೆಸಿದರೆ ಹೊರತು ಹೊಸದಾದ ಯಾವುದೇ ಪಂಥವನ್ನಾಗಲಿ ಪಂಗಡವಾಗಲಿ ಮಾಡಲಿಲ್ಲ. ಈ ಸತ್ಯವನ್ನು ಎಲ್ಲರು ಅರಿಯಬೇಕು,” ಎಂದು ಹೇಳಿದರು.
ಶ್ರೀಗಳಿಗಿಂತ ಮುಂಚೆ ಉಜ್ಜಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ, ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತಾಡಿದರು.
ಎಲ್ಲಾ ಶ್ರೀಗಳು ಸಮುದಾಯದ ಸಂಖ್ಯೆ ಕ್ಷೀಣಿಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿ ಮುಂಬರುವ ಜಾತಿಗಣತಿಯಲ್ಲಿ ಎಲ್ಲಾರೂ ವೀರಶೈವ ಲಿಂಗಾಯತರೆಂದು ಬರೆಸಲು ಕರೆ ಕೊಟ್ಟರು.
ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಬಲದಿಂದ ನಡೆದ ಸಮಾವೇಶದಲ್ಲಿ ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ, ಎಸ್ ಮಲ್ಲಿಕಾರ್ಜುನ, ಈಶ್ವರ ಖಂಡ್ರೆ, ವಿಜಯೇಂದ್ರ, ಶಂಕರ ಬಿದರಿ ಮುಂತಾದ ಧುರೀಣರು ಭಾಗವಹಿಸಿದ್ದರು.
16 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಎಲ್ಲಾ ಪಂಚಾಚಾರ್ಯರು ಕಾಣಿಸಿಕೊಂಡಿದ್ದಾರೆ.
ಬಸವಣ್ಣನವರ ಸಾಮಾಜಿಕ ಕ್ರಾಂತಿಗೂ ತಾವು ಹೇಳುತ್ತಿರುವ ವೀರಶವಕ್ಕೂ ಯಾವುದೇ ಸಂಬಂಧವಿಲ್ಲ. ತಾವು ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ಕೊಡುಗೆಗಳನ್ನು ಪ್ರಶಂಸಿಸುತ್ತಿದ್ದೀರ. ಬಸವಣ್ಣನವರು ನೀವು ಹೇಳುವ ವೀರಶೈವ ಸಿದ್ಧಾಂತದಿಂದ ತುಂಬಾ ದೂರ ಹೋಗಿ ಮಾನವ ಧರ್ಮದ ಬದಲಾಗಿ “ಸಕಲ ಜೀವಾತ್ಮರಿಗೆ ಲೇಸನ್ನು” ಬಯಸುವ ಧರ್ಮವನ್ನು ವಚನ ಕ್ರಾಂತಿಯ ಮೂಲಕ ಸ್ಥಾಪಿಸಿದ್ದಾರೆ. ಬಸವಣ್ಣನವರನ್ನು ದಯಮಾಡಿ ಅವರನ್ನು ಮತ್ತು ಅವರ ಅನುಯಾಯಿಗಳಾದ ಲಿಂಗಾಯತರನ್ನು ಅವರಿಷಕ್ಕೆ ಬಿಟ್ಟುಬಿಡಿ.
ನೀವು ನಿಜವಾಗಿಯೂ ವೀರಶೈವರಾಗಿದ್ದರೆ, ಜಾಗತಿಕ ಲಿಂಗಾಯತ ಮಹಾಸಭಾ ಜೊತೆ ಚರ್ಚೆಗೆ ಬನ್ನಿ. ಚರ್ಚೆಯಲ್ಲಿ ಸಾಬೀತು ಮಾಡಿ ವೀರಶೈವ ಲಿಂಗಾಯತ ಒಂದೇ ಅಂತ. ಅವಾಗ ಸತ್ಯ ಗೊತ್ತಾಗುತ್ತೆ.
ಹುಸಿ ಮಾತಾಡಿ ಕೆಡ ಬೇಡಿ, ಬಸವಣ್ಣ ನವರನ್ನು ಮತ್ತೆ. ಸತ್ಯ ಶರಣರನ್ನು ಎದುರು ಹಾಕಿಕೊಂಡು ಉದ್ದಾರ ಯಾರು ಆಗಿಲ್ಲ. ಬೆಂಕಿ ಜೊತೆ ಸರಸ ಆಡಿದರೆ ಸುಟ್ಟುಹೋಗೋದು ನಾವೇ. ಇದೆ ತರ ಮೊಂಡು ವಾದ ಮುಂದುವರುಸಿದರೆ ನಿಮ್ಮ ಸಮಾಧಿ ನೀವೇ ತೋಡಿಕೊಂಡಂತೆ.
ಬ್ರಮೆ ಯಲ್ಲಿ ಭದುಕಬೇಡಿ ವಾಸ್ತವದಲ್ಲಿ ಭದುಕಿ, ಯಾರು ಯಾರನ್ನು ಏನು ಮಾಡೋಕೆ ಆಗಲ್ಲ, ಯಾವುದನ್ನು ಬದಲಾಯಿಸಲೂ ಆಗೋದಿಲ್ಲ ಮೊದಲು ನೀವು ಸತ್ಯ ವನ್ನು ತಿಳಿರಿ ಆಮೇಲೆ ಚರ್ಚೆಯ ಮಾತಾಡಿ
ರಂಭಾಪುರಿಶ್ರೀಗಳು ಕಳ್ಳಬೆಕ್ಕಿನ ಆಟದ ರೀತಿ ಮಾತನಾಡುತಿದ್ದಾರೆ ಅದು ಹೆಚ್ಚು ದಿನ ನಡೆಯುವುದಿಲ್ಲ ನಿಜವಾಗಿ ಸತ್ಯವನ್ನ ಮರೆಮಾಚುತ್ತಿರುವವರು ಈ ಶ್ರೀಗಳು ಅದು ಜನತೆಗೆ ಹಾಗು ಅದ್ಯಯನಕಾರರಿಗೆ ತಿಳಿದಿದೆ ಆದ್ದರಿಂದ ರಂಭೆಶ್ರೀಗಳು ಈಗಲಾದರೂ ಸತ್ಯವನ್ನ ಹೇಳಿದರೆ ಅವರಿಗೆ ಮುಂದಿನ ದಿನಮಾನಗಳಲ್ಲಿ ಅಸ್ಥಿತ್ವ ಉಳಿಸಬಹುದು ಇಲ್ಲವಾದಲ್ಲಿ ಜನಸಾಮಾನ್ಯರ ಪ್ರಶ್ನೆಗೆ ಉತ್ತರಿಸಬೇಕಾದ ಕಾಲ ದೂರವಿಲ್ಲ. ಇವರ ಜಾಣಪೆದ್ದಾಟದ ಅವಿವೇಕತನದಿಂದ ಲಿಂಗಾಯತ ಧರ್ಮದ ಜನರಿಗೆ ರಾಜಕೀಯ ಆರ್ಥಿಕ ಸಾಮಾಜಿಕ ನ್ಯಾಯಗಳಿಗೆ ತೊಂದರೆಯಾಗಿ ಆರ್ಥಿಕ ಅಭಿವೃದ್ಧಿಯು ಕುಂಠಿತವಾಗುತ್ತಿದೆ. ಬಸವಣ್ಣನವರ ಸಿದ್ದಾಂತವನ್ನ ಒಪ್ಪಿ ಬಂದ ವೀರಶೈವರು ಲಿಂಗವಂತರಾಗಿದ್ದಾರೆ ಅದು ಗೋತ್ತಿದ್ದು ಈ ಕುತಂತ್ರ ನಡೆ ಮತ್ತು ಈ ರೀತಿಯ ಹೇಳಿಕೆಗಳನ್ನ ಹೇಳುತ್ತಿರುವುದು ಖಂಡನೀಯ
ವೀರಶೈವರ ಸಮಾವೇಶದ ಪೋಸ್ಟರ್ಗಳಲ್ಲಿ ಲಿಂಗಾಯತ ಶಬ್ದವೆ ಇಲ್ಲ, ಲಿಂಗಾಯತ ಶಬ್ದವನ್ನು ವಿರೋಧ ಮಾಡುವದಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಾರೆ. ಸಮಯ ಸಾಧಕ ಪೀಡಾಚಾರ್ಯರು
ವೀರಶೈವ ಮಹಾಸಭಾದ ದಾವಣಗೇರಿ ಅಜ್ಜ ಲಿಂಗಾಯತ ಸಾದರ ಪಂಗಡಕ್ಕೆ ಸೇರಿದವ… ನಮ್ಮದು ಬಸವಣ್ಣನ ಧರ್ಮ ಎಂದು ಹೇಳುತ್ತಿರುವವ. . . ಆದರೂ ಈ ಪಂಚ ಪೀಡೆಗಳು ಈತನ ಬೆನ್ನಿಗೆ ಹತ್ತಿದ ಬೇತಾಳಗಳಂತೆ ಲಿಂಗಾಯತದ ಜೊತೆ ವೀರಶೈವವನ್ನೂ ಬಿಡದೇ ಸೇರಿಸು… ಸೇರಿಸು ಎಂದು ಗಂಟು ಬಿದ್ದಿವೆ ಆತನ ಅರಳು ಮರಳುತನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ!
ಹಾಡಿದ್ದೇ ಹಾಡೋ ಕಿಸ್ಬಾಯಿ ದಾಸ ಎಂಬಂತೆ ಮೊದಲಿನಿಂದಲೂ ಹೇಳುತ್ತಾ ಇರುವ ಸುಳ್ಳು ಸುದ್ದಿಗಳನ್ನು ಮತ್ತೊಮ್ಮೆ ದಾವಣಗೆರೆ ವೀರಶೈವ ಶೃಂಗ ಸಭೆಯಲ್ಲಿ ಹೇಳಿದ್ದಾರೆ. ಬಸವ ತತ್ವಗಳನ್ನು ಶುದ್ದಾತ್ಮ ಅಂತಃಕರಣದಿಂದ ಜಾರಿಗೆ ತಂದು ಬಸವ ತತ್ವಗಳಿಗೆ ಅವರಿಗೆ ಇರುವ ಬದ್ಧತೆ ಸಾಬೀತು ಪಡಿಸಲಿ.
ಇಷ್ಟೆಲ್ಲ ಹೇಳುವ ರಂಭಾಪುರಿ ಶ್ರೀಗಳು ಅವರು ನಡೆಸುವ ಕಾರ್ಯಕ್ರಮದ ಬ್ಯಾನರ್ ನಡಿ ಅಣ್ಣ ಬಸವಣ್ಣನವರ ಭಾವಚಿತ್ರವನ್ನು ಮುದ್ರಿಸುವುದಿಲ್ಲ ಯಾಕೆ
ಲಿಂಗದ ಮೇಲೆ ಕಾಲಿಟ್ಟು ಪೂಜಿಸುವವರು ಇವರೊಬ್ಬ…………………
ಈಗ ನಿಮ್ಮ ಸಮಾವೇಶದಲ್ಲಿ ಬಸವಣ್ಣನವರ ಭಾವಚಿತ್ರ ಏಕೆ ಇಲ್ಲಾ ಮೊದಲು ಹೇಳಿ.
ಪಂಚಾಚಾರ್ಯರು ಲಿಂಗಾಯತರ ಗುರುಗಳು ಅಲ್ಲವೇ ಅಲ್ಲ, ಬಸವಣ್ಣನವರೇ ಲಿಂಗಾಯತ ಧರ್ಮದ ಸ್ಥಾಪಕರು, ಗುರುಗಳು.
ರಂಬಾಪುರಿ ಸ್ವಾಮಿಗಳ ಪುಂಗಿ ಲಿಂಗಾಯತರು ಕೇಳಬೇಕಾಗಿಲ್ಲ..
ಬಹುಶಃ ಸಾರ್ವಜನಿಕರು ಪಂಚಾಚಾರ್ಯರವರನ್ನು ಹೊತ್ತುಕೊಂಡು ಮೆರವಣಿಗೆ ಮಾಡುವ ದಿನಗಳು ದೂರವಾಗಿವೆ. ಜನರು ತಮ್ಮನ್ನು ಮರೆತು ಬಸವಣ್ಣನವರನ್ನು ನಂಬಿದ್ದಾರೆ. ಆದಕಾರಣ ವೀರಶೈವ ಮತ್ತು ಲಿಂಗಾಯತರು ಒಂದೇ ಎನ್ನುತ್ತಾರೆ. ತಮ್ಮ ಗಳ ಪೀಠದ ಮೂಲಕ ಲಿಂಗಾಯತ ಸಮಾಜದ ವ್ಯಕ್ತಿಗಳಿಗೆ ಯಾವರೀತಿಯ ಸಹಾಯ ಮಾಡಿದ್ದೀರಾ
ದಾವಣಗೆರೆ ಅಜ್ಜನವರೇನು ದಡ್ಡಶಿಖಾಮಣಿಯೆಂದು ಈ ಪಂಚಾಚಾರ್ಯರು ತಿಳಿದಂತಿದೆ. ಇವರನ್ನು ಬಿಟ್ಟರೆ ಈ ಪಂಚಪೀಠಗಳಿಗೆ ಕರ್ನಾಟಕದಲ್ಲಿ ಯಾರೂ ಕೇಳುವವರಿಲ್ಲ ಎಂಬುದನ್ನು ಇವರಿಗೆ ಮನವರಿಕೆಯಾಗುತ್ತಿದೆ. ಈ ದಸರೆಗೆ ಬಸವಕಲ್ಯಾಣದಲ್ಲಿ ದಸರಾ ದರಾಬಾರು ನಡೆಸುವವರಿದ್ದಾರೆ.ಜಾಗೃತರಾಗಿ ಜಾಣರಾಗಿರಿ.