ತಿರುವನಂತಪುರ (ಕೇರಳ)
ಕೇರಳದ ರಾಜಧಾನಿ ತಿರುವನಂತಪುರದ ಸಮೀಪದ ಕೋವಲಮ್ ಗ್ರಾಮದಲ್ಲಿ ಶುಕ್ರವಾರ ಶರಣ ಕುಶಾಲನ್ ಹಾಗು ಶರಣೆ ಗಂಗಾದೇವಿ ಅವರ ಮಹಾ ಮನೆಯಲ್ಲಿ ಬಸವ ತತ್ವ ಸಮಾವೇಶ ನಡೆಯಿತು.

ಶರಣ ಜಗನ್ನಾಥಪ್ಪ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವ ಪ್ರಾರ್ಥನೆಯನ್ನು ನಡೆಸಿಕೊಟ್ಟರು.

ಕೇರಳ ರಾಜ್ಯದಲ್ಲಿ ಬಸವ ತತ್ವ ಪ್ರಚಾರ ಮಾಡುತ್ತಿರುವ ಶರಣ ರಾಧಾಕೃಷ್ಣ ಕುರುಚಿ ಅವರು ಇಷ್ಟಲಿಂಗ ನಿರೀಕ್ಷೆಯ ಮಹತ್ವವನ್ನು ತುಂಬಾ ಸರಳವಾಗಿ ಅಲ್ಲಿಯ ಮಲೆಯಾಳಂ ಭಾಷೆಯಲ್ಲಿ ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.
ಬಸವಾದಿ ಶರಣರ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದ ಲಿಂಗತತ್ವದ ಅನುಭಾವವನ್ನು ಪೂಜ್ಯ ಜನವಾಡದ ಜಗನ್ನಾಥಪ್ಪ ಪನಸಾಲೆ ಮಾಡಿದರು.

ಈ ಕಾರ್ಯಕ್ರಮಕ್ಕೆಂದು ಬಂದಿದ್ದ ಬೆಂಗಳೂರಿನ ಜಾಗತಿಕ ಲಿಂಗಾಯತ ಮಹಾಸಭಾದ ಶರಣೆಯರಾದ ಸುಮಿತ್ರಾ ರಾಯರೆಡ್ಡಿ, ಶಶಿಕಲಾ ದಿನ್ನೂರ ಹಾಗೂ ಶರಣ ವಿಶ್ವನಾಥ ದಿನ್ನೂರ ಹಾಗೂ ಶರಣೆ ಸುನಂದಾ ಪನಸಾಲೆ ಅವರುಗಳು ಮಕ್ಕಳಿಗೆ ವಚನಗಳ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮ ಮಂಗಲಗೊಂಡು, ಮಹಾಪ್ರಸಾದದೊಂದಿಗೆ ಸಂಪನ್ನಗೊಂಡಿತು. ಹಲವಾರು ಜನ ಶರಣ-ಶರಣೆಯರು ಉಪಸ್ಥಿತರಿದ್ದರು.
ಕೇರಳದಲ್ಲಿ ಪ್ರಚಾರ ಯಶಸ್ವಿಯಾಗಲಿ.
ಮಹತ್ತರವಾದ ಕೆಲಸ .ಬಸವ ಜ್ಯೋತಿ ವಿಶ್ವಾದ್ಯಂತ ಪಸರಿಸುತ್ತಿದೆ .ಈ ಕಲ್ಯಾಣ ಕಾರ್ಯ ಮಾಡಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು..ಮತ್ತೊಂದು ಸಂಗತಿ ಎಂದರೆ ಕೇರಳದಲ್ಲಿ 30 ಲಕ್ಷ ಲಿಂಗಾಯತರಿದ್ದಾರೆಂದು ಅಂದಾಜಿಸಲಾಗಿದೆ. ಇದು ನಿಜವೋ ಸತ್ಯವೋ ತಿಳಿಯದು
ನಾವು ಲಿಂಗಾಯತರು ಉದಾರವಾಗಿ ನಮ್ಮ ಧರ್ಮ ಸಂಸ್ಕೃತಿಯನ್ನು ಎಲ್ಲಾ ಕಡೆಗೂ ಹರಡಬೇಕು ಜನರಲ್ಲಿ ಮೌಢ್ಯತೆಯಬಗ್ಗೆ ಅರಿವು ಮೂಡಿಸಿ ವೖಗ್ನಾನಿಕ ಜಾಗ್ರತೆಯನು ಬೆಳೆಸಬೇಕು.
ರಂಗನಾಥ್ ಶ್ರೀರಾಂಪುರ
ಕೇರಳದಲ್ಲಿ ಬಸವತತ್ವ ಪ್ರಚಾರಕ್ಕೆ ಹೊದ ಶರಣರಿಗೆ ನಮನಗಳು