ಶರಣ ತತ್ವ ಈ ಕಾಲಘಟ್ಟದ ಅನಿವಾರ್ಯತೆ, ಎಂದು ಚಂದನ್ ಕುಮಾರ್ ಹೇಳಿದರು
ಮೈಸೂರು
ನಗರದ ಜೆಎಸ್ಎಸ್ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಚಂದನ್ ಕುಮಾರ್ ಅವರು ಇತ್ತೀಚೆಗೆ ಬಸವತತ್ವದಿಂದ ಪ್ರೇರೇಪಿತರಾಗಿ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.
ನಮ್ಮ ದೇಶದಲ್ಲಿ ಹರಡಿಕೊಂಡು ಸಮಾಜದ ಸ್ವಾಸ್ತ್ಯ ಕೆಡಸುತ್ತಿರುವ ಕೋಮುವಾದಕ್ಕೆ ಬಸವ ಧರ್ಮದಲ್ಲಿ ಪರಿಹಾರವಿದೆ ಎಂದು ಅರಿವಾದ ಮೇಲೆ ಇಷ್ಟಲಿಂಗ ದೀಕ್ಷೆ ಪಡೆದೆ, ಎಂದು ಚಾಮರಾಜನಗರದ ಚಂದನ್ ಹೇಳಿದರು.
ಈ ರೀತಿಯಾಗಿ ವಿಚಾರ ಮಾಡಿದಾಗ ಬಸವ ಧರ್ಮವನ್ನು ಪಾಲಿಸಬೇಕು, ಶರಣ ತತ್ವದ ಅನುಸಾರವಾಗಿ ನನ್ನ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ, ಎಂದು ಹೇಳಿದರು.
ವಿಜ್ಞಾನದ ವಿದ್ಯಾರ್ಥಿಯಾದ ಅವರು ವಚನಗಳನ್ನು ಓದುತ್ತಾ ಹೋದಂತೆ ಅವುಗಳು ವೈಚಾರಿಕತೆ, ವಿಜ್ಞಾನಿಕ ನೆಲೆಗಟ್ಟಿನ ಮೇಲೆ ರಚನೆಯಾಗಿರುವುದನ್ನೂ ಕಂಡುಕೊಂಡರು.

ಮಂಡ್ಯ ನಗರದ ಸಮೀಪ ಇರುವ ಲಾಳನಕೇರಿ ಗ್ರಾಮದ ಬಸವ ಮಂಟಪದಲ್ಲಿ ವಚನ ಕ್ರಿಯಾಮೂರ್ತಿ ಶ್ರೀಶೈಲ ಜಿ. ಮಸೂತೆ ಚಂದನಕುಮಾರ ಅವರಿಗೆ ಇಷ್ಟಲಿಂಗ ದೀಕ್ಷೆ ನೀಡಿದರು. ಲಿಂಗದೀಕ್ಷೆ ಪಡೆದುಕೊಳ್ಳುವ ಮುಂಚೆ ಮಸೂತೆ ಅವರೊಂದಿಗೆ ವಿವರವಾಗಿ ಚರ್ಚೆ ನಡೆಸಿದರು.
ಯುವಕರು ವಚನಗಳನ್ನು ಓದಿ ಅರ್ಥ ಮಾಡಿಕೊಂಡು ಪಾಲಿಸಿದರೆ ಅವರ ಅಂತರಂಗದಲ್ಲಿ ಅರಿವು ಮೂಡುತ್ತದೆ. ಶರಣ ತತ್ವ ಈ ಕಾಲಘಟ್ಟದ ಅನಿವಾರ್ಯತೆ, ಎಂದು ಚಂದನ್ ಹೇಳಿದರು.
ಯುವ ವಿಧ್ಯಾರ್ಥಿ ಚಂದನಕುಮಾರ ಅವರ ನಿರ್ಧಾರ ಉಳಿದ ಎಲ್ಲಾ ವಿಧ್ಯಾರ್ಥಿಗಳಿಗೆ
ಪ್ರೇರಕ ಶಕ್ತಿಯಾಗಿದೆ ಎನ್ನುತ್ತಾರೆ ಮಸೂತೆ ಅವರು.
ಅನುಕರಣೀಯ ಕಾರ್ಯ.
ಧನ್ಯವಾದಗಳು ಸರ್ 🙏ಹಾಗೆಯೇ ನಿಮ್ಮ ಸಂಪರ್ಕದಲ್ಲಿರುವರಿಗೆ ನೀವು ಬಸವಧರ್ಮದ ಅರಿವು ಬಿತ್ತರಿಸಿ ಎಂದು ಕೇಳಿಕೊಳ್ಳುತೇನೆ…
ಶರಣಾಥಿ೯🌹🙏🙏