ದುಬೈ
ಕೂಡಲಸಂಗಮವನ್ನು ಈ ಹೈಜಾಕ್ ಆಚಾರ್ಯರಿಂದ ಶುದ್ಧಿ ಮಾಡಿಸಲು ಹೊರಟಿದ್ದಾನಂತೆ ಒಬ್ಬ ಹುಂಬ.
ಪಂಚಮಸಾಲಿ ಸಮಾಜ ಬಸವಣ್ಣನ ಕಟ್ಟಾ ಅನುಯಾಯಿಗಳು, ತತ್ವನಿಷ್ಠರು. ಆ ಸಮಾಜವನ್ನು ಯಾವ ಆಚಾರ್ಯರಿಗಾಗಲಿ, ರಾಜಕೀಯ ಪುಢಾರಿಗಳಿಗಾಗಲಿ ಗುತ್ತಿಗೆ ಕೊಟ್ಟಿಲ್ಲ. ಯಾವ ಪೀಠಗಳ ಹಂಗು ಅವರಿಗಿಲ್ಲ, ಈ ಹೈಜಾಕ್ ಆಚಾರ್ಯರ ಸಹವಾಸವೂ ಬೇಕಿಲ್ಲ. ಏನಿದ್ದರೂ ನಮಗೆ ವಿಶ್ವಗುರು ಬಸವಣ್ಣನೇ ಮೊದಲು ಬಸವಣ್ಣನೇ ಅಂತಿಮ.
ವೇದಕ್ಕೆ ಒರೆಯ ಕಟ್ಟಿ, ಶಾಸ್ತ್ರಕ್ಕೆ ನಿಗಳವನಿಕ್ಕಿ, ಆಗಮದ ಮೂಗು ಕೊಯ್ದ ಧರ್ಮದಲ್ಲಿ ಅಜ್ಞಾನಿ ಹುಂಬರು ಹುಟ್ಟಿ ಕ್ಷಣಿಕ ರಾಜಕೀಯ ಲಾಭಕ್ಕಾಗಿ ಬಸವಣ್ಣನವರನ್ನು ಮಡಿ-ಮೈಲಿಗೆ-ಶುದ್ಧಿ ಎಂಬ ಮೌಢ್ಯಕ್ಕೆ ದೂಡುತ್ತಿರುವುದು ನೋವಿನ ಸಂಗತಿ ಮತ್ತು ಖಂಡನೀಯ.
ಇಂತಹ ಅಜ್ಞಾನಿ ಹುಂಬರನ್ನಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಆಚಾರ್ಯರು ಭ್ರಮೆಯಲ್ಲಿ ಮುಳುಗಿದ್ದಾರೆ.
ಮೊದಲು ಇವರ ಕುತಂತ್ರಬುದ್ಧಿ ಶುದ್ಧಿ ಆಗಬೇಕು, ನಂತರ ಆತ್ಮಶುದ್ಧಿ. ಬಸವಣ್ಣನ ಎಡಪಾದ ಅರಿವು, ಬಲಪಾದ ಆಚಾರ ಹಿಡಿಯದ ಹೊರತು ಇವರಿಗೆ ಎರಡೂ ಆಗುವುದಿಲ್ಲ.
ಒಮ್ಮೆ ಕುಂಕುಮಧಾರಿಯಾಗಿ ಮತ್ತೆ ಅನುಕೂಲಕ್ಕೆ ತಕ್ಕಂತೆ ವಿಭೂತಿ ಬಳಿಯುವ ಈ ರಾಜಕೀಯ ಪುಡಾರಿಗಳು ಆಷಾಢಭೂತಿಗಳು, ಇದ್ದರೆಷ್ಟು ಶಿವ, ಹೋದರೆಷ್ಟು…