ಕೊಪ್ಪಳದಲ್ಲಿ ಚೆನ್ನಬಸವಣ್ಣನವರ ಜಯಂತಿ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪಲ್ಲೇದವರ ಓಣಿಯ ಗುರು ಹಿರಿಯರಿಂದ ಬುಧವಾರ ನಗರದ ಚೆನ್ನಬಸವೇಶ್ವರ ವೃತ್ತದಲ್ಲಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಆಚರಿಸಲಾಯಿತು.

ಅಂಗವಿಡಿದು, ಅಂಗ ಅನಂಗ ಎಂಬೆರಡನೂ ಹೊದ್ದದೆ ಮಹಿಮನು ನೋಡ, ಅಂಗವೇ ಆಚಾರವಾಗಿರಬಲ್ಲ ಆಚಾರವೇ ಅಂಗವಾಗಿರಬಲ್ಲನಾಗಿ ಅಂಗವಿಲ್ಲದ ಪ್ರತಿಮ ನೋಡ
ಆಚಾರವೇ ಸ್ವಾಯತ, ಆಚಾರವೇ ಪ್ರಾಣ, ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ ಎಂದು ವ್ಯೋಮಕಾಯ ಸಿದ್ದ ಅಲ್ಲಮಪ್ರಭುದೇವರು ಚೆನ್ನಬಸವಣ್ಣನವರ ಕುರಿತು ಹೇಳುತ್ತಾರೆ.

ಅವರಿಗೆ ಅಂಗವಿತ್ತು ಆದರೆ ಅಂಗಕ್ಕೆ ಇರುವ ಯಾವ ಬಾಧೆಗಳು ಇರಲಿಲ್ಲ, ಆಚಾರವನ್ನು ಸ್ವಾಯತ ಮಾಡಿಕೊಂಡು ಆಚಾರವೇ ಪ್ರಾಣವಾದವರು ಚೆನ್ನಬಸವಣ್ಣನವರು ಎಂದು ಬಣ್ಣಿಸುತ್ತ, ನನಗೆ ಆಚಾರ ಭಿಕ್ಷೆ ನೀಡು ಎಂದು ಪ್ರಭುದೇವರೇ ಕೊಂಡಾಡಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ರಾಜೇಶ ಸಸಿಮಠ ಜಯಂತಿ ಕುರಿತು ಮಾತನಾಡಿದರು.

ಚೆನ್ನಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪವೃಷ್ಠಿ ಮಾಡಿ, ಮಾತನಾಡಿದ ಬಸವೇಶ್ವರ ದೇವಸ್ಥಾನದ ಗೌರವಾಧ್ಯಕ್ಷರಾದ ಸಿದ್ದಪ್ಪ ಹಂಚಿನಾಳ ಅವರು, ಶರಣರಂತೆ ಬದುಕನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ನಿತ್ಯ ವಚನಗಳನ್ನು ಓದುವುದನ್ನು ನಾವು ರೂಡಿಸಿಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟಿನ ವೀರಭದ್ರಪ್ಪ ನಂದ್ಯಾಳ, ವಿರೂಪಾಕ್ಷಪ್ಪ ಜಗಳೂರು, ದೇವೀಶ ಗಬ್ಬೂರ, ಮುತ್ತಣ್ಣ ಬಿರಲದಿನ್ನಿ, ಶೇಖರ ಇಂಗಳದಾಳ, ಗವೀಶ ಸಸಿಮಠ, ಪಲ್ಲೆದವರ ಓಣಿ ನಿವಾಸಿಗಳಾದ ಪಂಪಣ್ಣ ಪಲ್ಲೇದ, ಮಲ್ಲಪ್ಪ ಪಲ್ಲೇದ, ನಗರಸಭಾ ಸದಸ್ಯ ಚೆನ್ನಪ್ಪ ಕೋಟ್ಯಾಳ, ಗವಿಸಿದ್ದಪ್ಪ, ಮಾಟಲದಿನ್ನಿ, ಮಂಜುನಾಥ ಹಳ್ಳಿಗುಡಿ, ಮಹಿಳಾ ಮುಖಂಡರಾದ ಬಾಳಮ್ಮ ಮಾಳೆಕೊಪ್ಪ, ವಿಶಾಲಾಕ್ಷಿ, ವಚನ ಶ್ರೀ, ಅರ್ಚನಾ ಸಸಿಮಠ, ಶಿಲ್ಪಾ, ಸುನಂದಾ ಇತರರು ಇದ್ದರು.

ಬೆಸ್ಟ್ ಆಫ್ ಬಸವ ಮೀಡಿಯಾ ಪುಸ್ತಕ – ಈಗ ಆನ್ಲೈನ್ ಖರೀದಿಸಿ
https://basavamedia.com/buy-basavamedia-book/

Share This Article
Leave a comment

Leave a Reply

Your email address will not be published. Required fields are marked *