ಕೊಪ್ಪಳ
ಶುಕ್ರವಾರ ಸಂಜೆ ಇಲ್ಲಿನ ಗವಿಮಠದ ಹಿಂದುಗಡೆ ಇರುವ ಅಶೋಕ ಶಿಲಾಶಾಸನದ ಬಳಿ ಕೊಪ್ಪಳದ ಯುವಜನರು ದೀಪ ಮತ್ತು ಮೇಣದ ಬತ್ತಿಯನ್ನು ಹಚ್ಚುವುದರ ಮೂಲಕ ದಮ್ಮ ದೀಪ ದಾನ ಉತ್ಸವವನ್ನು ಆಚರಿಸಿದರು.

ಬುದ್ಧನ ತಂದೆ ರಾಜ ಶುದ್ಧೋಧನನ ಅರಮನೆಯಾಗಿದ್ದ ಕಪಿಲವಸ್ತುವಿಗೆ ಜ್ಞಾನೋದಯ ಸಾಧಿಸಿದ ನಂತರ ಬುದ್ಧನು ಮೊದಲ ಬಾರಿಗೆ ಬಂದಾಗ, ಇಡೀ ರಾಜ್ಯವನ್ನು ಇಡೀ ಅರಮನೆಯೊಂದಿಗೆ ದೀಪದಿಂದ ಅಲಂಕರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನವರೆಗು ದೀಪ ದಾನ ಉತ್ಸವ ಆಚರಣೆಯಲ್ಲಿದೆ.
ಈ ಸಂಧರ್ಬದಲ್ಲಿ ರಾಘು ಚಾಕ್ರಿ, ಮಂಜು ದೊಡ್ಡಮನಿ, ಗೌತಮ ಬಳಗಾನೂರ, ಕಾಶಪ್ಪ ಚಲವಾದಿ, ಸತೀಶ ಬನ್ನಿಕೊಪ್ಪ, ಮಾರ್ಕಂಡೇಯ ಬೆಲ್ಲದ, ಮಲ್ಲು ಬಡಿಗೇರಿ, ನಾಗರಾಜ, ಪ್ರವೀಣ, ಸತೀಶ, ಪ್ರಮೋದ, ರಾಹುಲ್, ವಿನಯ, ಗಣೇಶ, ಮನೋಜ, ಪ್ರೇಮ್, ಶ್ರೀನಾಥ, ಬಸವರಾಜ, ಮಂಜುನಾಥ, ಅಜಯ್, ಜೀವನ್, ನವೀನ, ವಿಶ್ವನಾಥ್, ಕೃಷ್ಣ, ಭರತ್, ಕಿರಣ್, ಮಂಜು, ಪ್ರದಿಪ್, ತರುಣ್ ಕಿಶೋರ್, ಪ್ರೇಮ್ ಬೆಲ್ಲದ ಮತ್ತೀತರ ಬುದ್ಧನ ಅನುಯಾಯಿಗಳು ಉಪಸ್ಥಿತರಿದ್ದರು
