ಕೂಡಲಸಂಗಮದಲ್ಲಿ ಅಡ್ಡಪಲ್ಲಕಿ ಉತ್ಸವ ಬೇಡ: ಕಾಶಪ್ಪನವರಿಗೆ ಒಕ್ಕೂಟದ ಎಚ್ಚರಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ

ಕೂಡಲಸಂಗಮದಲ್ಲಿ ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನಡೆಸಲು ಮುಂದಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಲಿಂಗಾಯತ ಮಠಾಧೀಶರ ಒಕ್ಕೂಟ ಎಚ್ಚರಿಕೆ ನೀಡಿದೆ.

ಇಂದು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ:

“ಪಂಚಪೀಠಾಧಿಶರರು ಕೂಡಲಸಂಗಮಕ್ಕೆ ಬಂದು ಆ ಭೂಮಿ ಪಾವನ ಮಾಡಬೇಕು, ಅಲ್ಲಿ ಅಡ್ಡಪಲ್ಲಕಿ ಉತ್ಸವ ಮಾಡಲಿದ್ದೇವೆ’ ಎಂಬ ವಿಜಯಾನಂದ ಕಾಶಪ್ಪನವರು ಹೇಳಿಕೆ ಖಂಡನೀಯವಾಗಿದೆ.

ಬಸವಣ್ಣನವರ ನೆಲದಲ್ಲಿ ಬಸವತತ್ವದ ಚಿಂತನೆಗಳನ್ನೆ ಜಾರಿಯಾಗಬೇಕೆ ವಿನಃ ಬಸವತತ್ವ ವಿರೋಧಿ ಅಡ್ಡಪಲ್ಲಕಿಗಳಂತಹ ಅಮಾನವೀಯ ಕಾರ್ಯಗಳು ನಡೆಯಬಾರದು.

ಒಂದು ವೇಳೆ ವಿಜಯಾನಂದ ಕಾಶಪ್ಪನವರು ಈ ರೀತಿ ಮಾಡಿದರೆ ನಾಡಿನ ಸಮಸ್ತ ಬಸವಭಕ್ತರು, ಪ್ರಗತಿಪರ ಚಿಂತಕರು, ಸಂವಿಧಾನ ಪ್ರೇಮಿಗಳು ಇದನ್ನು ಒಗ್ಗಟ್ಟಿನಿಂದ ಪ್ರತಿಭಟಿಸುತ್ತೇವೆ. ಪಂಚಪೀಠದ ಆಚಾರ್ಯರು ಬಸವಾದಿ ಶರಣರ ಸ್ಥಳಗಳನ್ನು ಕಲುಷಿತಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ರಂಭಾಪುರಿ ಶ್ರೀಗಳು ಈ ವರ್ಷದ ದಸರಾ ದರ್ಬಾರ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿದ್ದಾರೆ.

ಪಂಚಪೀಠಗಳು ಅವರ ಸಮ್ಮೇಳನಗಳು, ದರ್ಬಾರಗಳು ಎಲ್ಲಾದರೂ ನಡೆಸಲಿ ಆದರೆ ಅವರು ಬಸವಾದಿ ಶರಣರ ಕುರಿತು ಅಗೌರವವಾಗಿ ಮಾತನಾಡಿದರೆ ಅದನ್ನು ಬಸವಭಕ್ತರು ಎಂದೂ ಸಹಿಸಿಕೊಳ್ಳುವುದಿಲ್ಲ ಎಂಬ ಎಚ್ಚರಿಕೆ ಅವರಿಗೆ ಇರಬೇಕು,” ಎಂದು ಹೇಳಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
6 Comments
  • ಜೈ ಬಸವಣ್ಣ. ಕೂಡಲಸಂಗಮದೇವ. ಬಸವ ಭಕ್ತರಿಗೆ ಸಲ್ಲಬೇಕು. ಮೊದಲು ಬಸವಣ್ಣನವರ ಚಿಂತನೆಗಳು ಇಲ್ಲ

  • ಅಡ್ಡ ಪಲ್ಲಕ್ಕಿ ಒಂದು ಸ್ವಯಂ ಪ್ರೇರಿತ ಧಾರ್ಮಿಕ ಆಚರಣೆ ಯಾವ ಮಾತಾದೀಶರು ಒತ್ತಾಯ ಪೂರ್ವಕ ಕೇಳುವದಿಲ್ಲ. ಹಾಗೆ ಕೇಳಿದರೆ ಯಾರು ಮಾಡುವದಿಲ್ಲ. ಇದನ್ನೇ ಒಂದು ದೊಡ್ಡ ವಿಷಯ ಮಾಡಿ ಕಂದಕ ಸೃಷ್ಟಿ ಸುವದು ಸರಿಯಲ್ಲ.

  • ಇವರ ರಾಜಕೀಯ ಮೇಲಾಟಕ್ಜೆ, ಬಸವ ಅಸ್ಮಿತೆ ವಿರುದ್ಸ ಹೋದರೆ ವಿರೋಧ ಎದುರಿಸಬೇಕಾಗುತ್ತೆ. ಕೂಡಲಸಂಗಮದಲ್ಲಿ ಅಡ್ಡಪಲ್ಲಕ್ಕಿ ಏಕೆ ? ಇವರಿಗೆ ಬೇಕಾಗಿದ್ದರೆ ತಮ್ಮ ಮನೆಯ ಮುಂದೆ ಸ್ವಾಮಿಗಳದೋ ಇಲ್ಲವೋ ಶ್ವಾನಗಳದ್ದೋ ಅಡ್ಡಪಲ್ಲಕ್ಕಿ ಮಾಡಲಿ ಅದಕ್ಕೆ ನಮ್ಮ ತಕರಾರಿಲ್ಲ, ಶರಣರ ಐಕ್ಯ ಸ್ಥಳಗಳು ಅವು ನಮ್ಮ ಅಸ್ಮಿತೆ , ಅವುಗಳ ರಕ್ಷಣೆಗೆ ಬಸವ ತತ್ವ ಪ್ರೇಮಿಗಳು ಇಂತಹ ಸಾವಿರ ಹುಂಬರನ್ನು ಎದುರಿಸಲು ಸಿಧ್ದವಿದ್ದೇವೆ.

  • ಕೂಡಲಸಂಗಮ ಅದು ಬಸವಣ್ಣನವರ ಐಕ್ಯ ಕ್ಷೇತ್ರ, ಸಮಸ್ತ ಲಿಂಗಾಯತ ರಿಗೆ ಪವಿತ್ರ ಕ್ಷೇತ್ರ, ಅಲ್ಲಿ ಏಕೆ ಪಂಚಾಚಾರ್ಯರ ಅಡ್ಡಪಲ್ಲಕ್ಕಿ ? ಇವರ ರಾಜಕೀಯ ತೆವಲಿಗೆ ಕೂಡಲಸಂಗಮ ಕ್ಷೇತ್ರಕ್ಕೆ ಏಕೆ ಅಪಚಾರ ಮಾಡುತ್ತಾರೆ ? ಇವರಿಗೆ ಬೇಕಿದ್ದರೆ ಇವರ ಮನೆ‌ಮುಂದೆ ಸ್ವಾಮಿಗಳ ಅಡ್ಡಪಲ್ಲಕ್ಕಿಯಾದರೂ ಮಾಡಿಕೊಳ್ಳಲಿ ಅಥವಾ ಶ್ವಾನದ ಅಡ್ಡ ಪಲ್ಲಕ್ಕಿ ಯಾದರೂ ಮಾಡಿಕೊಳ್ಳಲಿ, ಕೂಡಲಸಂಗಮ ಕ್ಷೇತ್ರದಲ್ಲಿ ಬಸವಣ್ಣನವರ ವಿಚಾರಗಳಿಗೆ ವಿರುಧ್ದ ಇರುವ ಆಚರಣೆ ನಡೆದರೆ ಅದನ್ನು ಖಂಡಿತ ವಿರೋಧಿಸುತ್ತೇವೆ, ಲಿಂಗಾಯತ ಬಸವ ತತ್ವ ನಿಷ್ಟರ ವೈಚಾರಿಕ ಪ್ಬರಗತಿಪರರ ಬಹು ದೊಡ್ಡ ಪಡೆ ಇದೆ ಖಂಡಿತ ಇಂತಹ ನಡೆಯನ್ನು ಉಗ್ರವಾಗಿ ವಿರೋಧಿಸುತ್ತೇವೆ.

  • ಬಸವ ಕಲ್ಯಾಣದಲ್ಲಿ ನಡೆಯುವ ರಂಭಪುರಿಯವರ ದಸರಾ ದರ್ಬಾರಿನ ವಿಷಯದಲ್ಲಿ ನಾವು ಜಾಗೃತರಾಗಿ ಇರಬೇಕು ಅಲ್ಲಿ ವೇದಿಕೆಯಲ್ಲಿ ಬಸವಣ್ಣನವರ ಭಾವಚಿತ್ರವಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಾವು ಬಸವಭಕ್ತರು ವಹಿಸಿಕೊಳ್ಳಬೇಕು. ಇದಕ್ಕೆ ಯಾರೂ ಹಿಂಜರಿಯಬಾರದು. ಧೈರ್ಯದಿಂದ ಮುನ್ನುಗ್ಗಬೇಕು.

    • ನೀಲಕಂಠ ಗೌಡ ಪಾಟೀಲ ,ಗಡ್ಡಿಕರವಿನಕೊಪ್ಪ, ಬೈಲಹೊಂಗಲ ತಾಲೂಕ್. says:

      ಮನುಷ್ಯ ನನ್ನು ಹೆಗಲ ಮೇಲೆ ಹೊರುವದು ಅದು ಪ್ರಾಣ ವಾಯು ಹೋದಮೇಲೆ ಅಂದರೆ ಉಶಿರ್ ಇರುವವರೆಗೆ ಶಿವ ನಿಂತರೆ ಶವ ನಮ್ಮ ರೂಡಿ ಪದ ಅದು ನಮ್ಮ ಸಂಪ್ರದಾಯವು ಹೌದು ಆಗ ನಾವು ಹೆಗಲ ಮೇಲೆ ಹೊರುತ್ತೇವೆ ಇವರೇನು ಜೀವವಿದ್ದಂತೆ ಕಾಣುವ ಶವ ಗಳೇ ನನಗಂತೂ ಹಾಗೆ ಅನ್ನಿಸುತ್ತಿದೆ , ಇವುಗಳ ಕೆಲಸ ನೋಡಿದ್ರೆ ಸಂಗಮದಲ್ಲಿ ಬಂದು ಹೆಗಲೇರಿ ಮೆರೆದು ಇಲ್ಲಿರುವ ಅಸ್ಮಿತೆಯನ್ನು ಹಾಳು ಮಾಡುವ ಗುರಿಯಲ್ಲಿ ಇದ್ದಂತೆಯೇ ಸರಿ, ಈ ವಂದು ವ್ಯವಸ್ಥಿತ ಸ್ಯಾಡ್ಯೇಂತ್ರ ವನ್ನು ನಡೆಯಲು ಬಿಡಬಾರದೆಂದು ನನ್ನ ಕಳಕಳಿ.
      ಜೈ ಗುರು ಬಸವ 🙏

Leave a Reply

Your email address will not be published. Required fields are marked *