ಸೇಡಂ
ಬುಧವಾರ ಲಿಂಗೈಕ್ಯರಾಗಿದ್ದ ಕೂಡ್ಲ ಗ್ರಾಮದ ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ನಂಜುಂಡಸ್ವಾಮಿಗಳವರ ಅಂತ್ಯಕ್ರಿಯೆ ಗುರುವಾರ ಸಂಜೆ ಐದು ಗಂಟೆಗೆ ನೆರವೇರಿತು. ಲಿಂಗೈಕ್ಯ ಶ್ರೀಗಳ ಆಶಯದಂತೆ ಕೂಡ್ಲ ಮಠದ ಆವರಣದಲ್ಲಿ ಅವರ ಗುರುಗಳಾದ ಜಗದ್ಗುರು ಮಹಾದೇವಸ್ವಾಮಿಗಳ ಪಕ್ಕದಲ್ಲಿ ಸಮಾಧಿ ಮಾಡಲಾಯಿತು.
ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿಗಳ ಉಸ್ತುವಾರಿಯಲ್ಲಿ, ಲಿಂಗಾಯತ ಧರ್ಮ ತತ್ವದಂತೆ ಅಂತಿಮ ವಿಧಿ ವಿಧಾನಗಳು ನೆರವೇರಿದವು.
ಗುರುಮಿಟ್ಕಲ್ ಶಾಂತವೀರ ಮುರುಘರಾಜೇಂದ್ರ ಸ್ವಾಮಿ, ಸಿದ್ದರಾಮ ಚೈತನ್ಯಸ್ವಾಮಿ ಬೆಳಕವಾಡಿ, ಕಲ್ಬುರ್ಗಿ, ಯಾದಗಿರಿ ಜಿಲ್ಲೆಯ ಶಾಖಾಮಠದ ಶ್ರೀಗಳು, ಅನೇಕ ಪೂಜ್ಯರು, ಮುಖಂಡರು, ಸಹಸ್ರಾರು ಜನ ಭಕ್ತರು ಈ ಸಂದರ್ಭದಲ್ಲಿ ನೆರೆದಿದ್ದರು.
ಶರಣು ಶರಣಾಥಿ೯ಗಳು💐🙏🙏
OM SHREE GURU BASAV LINGAY NAMAH