ಬೆಂಗಳೂರು
ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಶಶಿಧರ ಬಿ.ಎಂ. ಅವರ ಪ್ರತಿಕ್ರಿಯೆ.
- ಇಂಥಾ ಮೇಳಗಳ ಮೂಲಕ ಜನರನ್ನು ಭ್ರಮಾಲೋಕದಲ್ಲಿ ತೇಲಿಸಿ ಕಾಲ್ಪನಿಕ ಕಥೆಗಳು, ದೇವರು ನಂಬಿಕೆಗಳನ್ನು ಹಿಡಿದಿಡುವ ಪ್ರಯತ್ನದ ಭಾಗ ಅಷ್ಟೇ.
- ಇಂಥಾ ಮೇಳಗಳು ಇತ್ತೀಚಿನ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆಗಿ ಉಳಿಯದೇ ರಾಜಕೀಯಕರಣಗೊಂಡು ಗುಪ್ತ ಕಾರ್ಯಸೂಚಿಯ ಭಾಗವೂ ಆಗಿದೆ.
- ಇಂಥಾ ಮೇಳಗಳು ಲಿಂಗಾಯತರಿಗೆ ಎಷ್ಟು ಸೂಕ್ತ? ಲಿಂಗಾಯತರ ಅಸ್ಮಿತೆ ಆಚರಣೆ ಸಂಪ್ರದಾಯಗಳು ನಂಬಿಕೆಗಳು ಕುಂಭಮೇಳದಂಥ ಸಮೂಹ ಸನ್ನಿಗೆ ತದ್ವಿರುದ್ಧ ಆದವುಗಳು.
- ಲಿಂಗಾಯತರು ಬಸವಾದಿ ಶರಣರ ತತ್ವಗಳನ್ನು, ವಚನ ಸಾಹಿತ್ಯವನ್ನು ಸಹಜ, ದಾಂಪತ್ಯ, ವಾಸ್ತವಿಕತೆ ಮತ್ತು ಪ್ರಕೃತಿಯ ನೈಜತೆಯೊಂದಿಗೆ ಮಿಳಿತವಾಗಿ ಬದುಕುವವರು. ಇಂಥಾ ಮೇಳಗಳ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಇರುವವರು.
- ಹಾಗಿದ್ದೂ ಲಿಂಗಾಯತರನ್ನು ಕುಂಭಮೇಳಕ್ಕೆ ಆಹ್ವಾನಿಸುವ ಪ್ರಯತ್ನ ಏಕೆ, ಕಾರಣ ಸ್ಪಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿ ಲಿಂಗಾಯತರಲ್ಲಿ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚು ಜಾಗೃತ ಆಗಿರುವುದು, ವೈದಿಕ ಆಚರಣೆಗಳು ಜನಮಾನಸದಿಂದ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಅದರ ಅಡ್ಡ ಪರಿಣಾಮ ವೈದಿಕ ಪ್ರಣೀತ ಸಂಘಟನೆಗಳ ಗುಪ್ತ ಕಾರ್ಯಸೂಚಿಗೆ ರಾಜ್ಯದಲ್ಲಿ ಒಂದು ಪ್ರಬಲ ಸಮುದಾಯದ ಬೆಂಬಲ ಕಳೆದುಕೊಳ್ಳುವ ಭಯ ಅವರನ್ನು ಕಾಡಿರಬಹುದು, ಆದರೆ ಬಸವಾದಿ ಲಿಂಗಾಯತರು ಇಂಥಾ ಯಾವುದೇ ತಂತ್ರಕ್ಕೆ ಬಲಿಯಾಗದೆ, ಸಂಘಟಿತವಾಗಿ ತಮ್ಮ ಅಸ್ತಿತ್ವ, ವಚನಸಾಹಿತ್ಯ ರಕ್ಷಣೆ ಮಾಡಬೇಕು.
Well said. Congratulations
ಕುಂಭಮೇಳಕ್ಕೆ ಲಿಂಗಾಯತರನ್ನ ಸ್ವಾಗತಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಿದು.
ಇಂತಹ ದರಿದ್ರ ಪ್ರಯತ್ನಕ್ಕೆ ಯಾರೂ ಒಳಗಾಗಬಾರದು
I welcome your comments. BMS Sir.