ಕುಂಭಮೇಳ ಭಾಗ್ಯ: ಮರುಳ ಲಿಂಗಾಯತರಿಗೆ ಬೀಸಿರುವ ಬಲೆ (ಹಿರೇಸಕ್ಕರಗೌಡರ)

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ನಿಂಗನಗೌಡ ಹ. ಹಿರೇಸಕ್ಕರಗೌಡರ ಅವರ ಪ್ರತಿಕ್ರಿಯೆ.

193
RSSನವರು ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಅಹ್ವಾನ ನೀಡಿರುವುದರ ಉದ್ದೇಶ

1) ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು ?

ಫೋಟೋದಲ್ಲಿಯ ಬಸವಣ್ಣನವರನ್ನು ನೋಡಿ ಕೈಮುಗಿಯುವ, ಬಸವಾದಿ ಶರಣರ ವಚನಗಳನ್ನೇ ಅರಿಯದ ಲಿಂಗಾಯತರೆಂಬ ಮರುಳರಿಗೆ ವೈದಿಕರು ಬೀಸಿರುವ ಬಲೆಯೇ ಕುಂಭಮೇಳ. ಈ ಆಹ್ವಾನ ಒಪ್ಪಿ ಬರುವ ಜನರಿಗೆ ವೈದಿಕವನ್ನು ಉಪಾಯವಾಗಿ ಹೇರುವ ರಣ ತಂತ್ರ.

ಕರ್ನಾಟಕದಲ್ಲಿ ವೈದಿಕರನ್ನು ಮುರಿಯಬಲ್ಲವರು ಪ್ರಾಜ್ಞರಾದ ಲಿಂಗಾಯತರು ಮಾತ್ರ. ಎದುರಿಗೆ ಇರಿಯದೇ, ಮರೆಯಿಂದ ಇರಿಯುವ ಕುತಂತ್ರವೇ ಕುಂಭಮೇಳಕ್ಕೆ ಕೊಟ್ಟಿರುವ ಆಹ್ವಾನ. ಪ್ರಜ್ಞಾವಂತರಾದ ಲಿಂಗಾಯತರು ಎಚ್ಚರಗೊಳ್ಳಬೇಕು.

2) ಯಾವ ಲಿಂಗಾಯತರಿಗೆ ವಿಶೇಷ ಆಹ್ವಾನ ಬರುತ್ತದೆ?

ವೇದ, ಉಪನಿಷತ್, ಅರಣ್ಯಕಗಳು, ಬ್ರಹ್ಮ ಸೂತ್ರಗಳು, ಅವುಗಳ ಭಾಷ್ಯಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ ಮಂತಾದವುಗಳನ್ನು ಮೂರ್ಖರಂತೆ ಒಪ್ಪುವ ಲಿಂಗಾಯತರಿಗೆ.

3) ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?

ದಿಟ ಲಿಂಗಾಯತರು ದಿಟ್ಟರಾಗಬೇಕು. ಸಾರಾಸಗಟಾಗಿ ಯಾವ ಆಸೆ-ಆಮಿಷಕ್ಕೆ ಒಳಗಾಗಬಾರದು. ಈಗಾಗಲೇ ಬಸವಾದಿ ಶರಣರನ್ನು, ಅವರ ವಚನಗಳನ್ನು ಪಚನಮಾಡಿಕೊಂಡವರು, ವಚನ ಮೂರ್ತಿಗಳಾದವರು, ನಡೆ-ನುಡಿ ಸಿದ್ಧಾಂತಿಗಳು, ಲಿಂಗಾಚಾರವುಳ್ಳವರು ಮುಂದಾಳಾಗಿ, ಗಣಾಚಾರಿಗಳಾಗಿ ಸಾಮಾನ್ಯ ಲಿಂಗಾಯತರಲ್ಲಿ ಜಾಗ್ರತಿ ಉಂಟು ಮಾಡುವುದು ಮುಖ್ಯವಾಗಬೇಕು.

4) ನಿಮ್ಮ ವೈಯುಕ್ತಿಕ ಪ್ರತಿಕ್ರಿಯೆ ಏನು? ನೀವು ಏನು ಮಾಡುತ್ತೀರಿ?

ನನ್ನ ಪರಿಮಿತಿಯಲ್ಲಿ ಈ ವಿಚಾರವನ್ನು ಸದೃಢವಾಗಿ ಪಸರಿಸುತ್ತೇನೆ. ಸಹಾಯಕ್ಕಾಗಿ ‘ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಜಾಗತಿಕ ಲಿಂಗಾಯತ ಮಹಾ ಸಭಾ’ ಇವುಗಳಲ್ಲಿ ಈ ಕುರಿತು ಅಂತರ್ ಚರ್ಚೆ ಮಾಡಬೇಕಾಗಿದೆ. ಮೊದಲಿಗಿಂತಲೂ ಈಗ ಬಸವಪರ ಸಂಘಟಣೆಗಳು ಹೆಚ್ಚಾಗಿವೆ. ಈ ರೀತಿಯಲ್ಲಿಯೂ ಕೂಡಾ ಬಸವ ಸೇವೆಯನ್ನು ಮಾಡಬಹುದೆಂಬುದು ನನ್ನ ನಮ್ರ ಅನಿಸಿಕೆ.

ಮತ್ತಷ್ಟು ಓದು

Share This Article
Leave a comment

Leave a Reply

Your email address will not be published. Required fields are marked *