ಬೆಂಗಳೂರು
ದೇಶದ ಐಕ್ಯತೆ, ವಿಶ್ವದಲ್ಲಿ ಶಾಂತಿ ಮತ್ತು ದೇಶದ ಸೈನಿಕರ ಆತ್ಮಬಲ ಹೆಚ್ಚಿಸುವ ಸಂಕಲ್ಪದೊಂದಿಗೆ ಪೂಜ್ಯ ಶ್ರೀ ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ರವಿವಾರ ಕುಂಬಳಗೋಡುವಿನಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯು ನಡೆಯಿತು.
ಕಾರ್ಯಕ್ರಮದಲ್ಲಿ ನೂರಾರು ಬಸವ ಭಕ್ತರು ಇಷ್ಟಲಿಂಗ ಪೂಜೆಯಲ್ಲಿ ಭಕ್ತಿ ಭಾವದೊಂದಿಗೆ ಪಾಲ್ಗೊಂಡರು.

ಇಷ್ಟಲಿಂಗ ಪೂಜೆಯ ನಂತರ ಸ್ವಾಮೀಜಿ ಸಂಕಲ್ಪ ಶಕ್ತಿಯ ಮಹತ್ವದ ಬಗ್ಗೆ ತಿಳಿಸುತ್ತ ಇಂದು ಭಾರತ ದೇಶ ಯುದ್ದದಂತಹ ವಿಷಮ ಪರಸ್ಥಿತಿಯಲ್ಲಿ ಹಾದುಹೋಗುತ್ತಿದೆ, ನಮ್ಮ ದೇಶದ ಸೈನಿಕರು ವೀರಾವೇಶದಿಂದ ಶತೃಸೈನ್ಯದೊಂದಿಗೆ ಹೋರಾಡುತ್ತಿದ್ದಾರೆ. ಸೈನಿಕರ ಆತ್ಮಬಲ ಹೆಚ್ಚಾಗಲಿ, ದೇಶದ ಸುರಕ್ಷತೆಗೆ ಹೆಚ್ಚು ಧಕ್ಕೆಯಾಗದಿರಲಿ ಎನ್ನುವ ಸಂಕಲ್ಪ ವಚನವನ್ನು ಸ್ವಾಮೀಜಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಈಶ್ವರ ಲಿಂಗಾಯತ, ಪ್ರವೀಣ ಕೊಚ್ಚಾಕಿ, ಪ್ರಕಾಶ ಜೀರಗೆ, ಶಿವಪ್ರಸಾದ ಪಟ್ನೆ , ಡಾ ಶಿವಯ್ಯ, ಪಂಚಾಕ್ಷರಿ ಹಿರೇಮಠ, ವಿವೇಕ ಸರ್, ಶಿವಣ್ಣ ಅಧ್ಯಕ್ಷ, ಸೃಜನ ದಾವಣಗೆರೆ, ಪೃಥ್ವಿ ದಂಪತಿಗಳು, ನಾಗರಾಜ, ಅಶೋಕ, ಚನ್ನು ಬೀದರ, ವಿಜಯಲಕ್ಷ್ಮಿ ಲಿಂಗಾಯತ, ಮಮತಾ ಪ್ರವೀಣ, ವರ್ಷಾ ಜೀರಗೆ, ಚೈತ್ರಾ ಕೊರ್ಲಹಳ್ಳಿ, ಗೋಪಾಲ ಹೊನ್ನಾಳಿ ಹಾಗೂ ಆಶ್ರಮದ ಎಲ್ಲಾ ಮಕ್ಕಳು ಭಾವಹಿಸಿದ್ದರು.

ಇದೇ ಸಂದರ್ಭದಲ್ಲಿ ನಾಗರಾಜ ದಂಪತಿಗಳು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ನೂತನ್ ಮತ್ತು ನಿಶ್ಚಿತಾ ಮಕ್ಕಳಿಬ್ಬರೂ ಇಷ್ಟಲಿಂಗ ದೀಕ್ಷೆಯನ್ನು ಪೂಜ್ಯರಿಂದ ಪಡೆದರು. ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಳಗೊಂಡಿತು.