ಸಿಂಧನೂರು
ಬಸವ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ, ಶರಣೆ ನೀಲಾಂಬಿಕೆ ಪ್ರಸಾದ ಮತ್ತು ವಸತಿ ನಿಲಯದ 80 ವಿದ್ಯಾರ್ಥಿನಿಯರು ರವಿವಾರ ಲಿಂಗದೀಕ್ಷೆಯನ್ನು ಪಡೆದುಕೊಂಡರು.


ಅನುಭಾವಿ ಅಶೋಕ ಬರಗುಂಡಿ ಲಿಂಗದೀಕ್ಷೆ ನೀಡಿ, ಲಿಂಗಾನುಸಂಧಾನವನ್ನು ಬಸವಾದಿ ಶರಣರ ವಚನಗಳ ಮೂಲಕ ತಿಳಿಸಿಕೊಟ್ಟರು.


ಕಾರ್ಯಕ್ರಮದಲ್ಲಿ ಬಸವ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು, ಸಹನ ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ. ಕೆ. ಶಿವರಾಜ್, ಅಧ್ಯಕ್ಷರಾದ ಮುದ್ದನಗೌಡ ಪಾಟೀಲ, ಕಾರ್ಯಧ್ಯಕ್ಷರಾದ ಗುಂಡಪ್ಪ ಬಳಿಗಾರ, ಕಾರ್ಯದರ್ಶಿಗಳಾದ ಡಾ. ಶಂಭನಗೌಡ ಎನ್., ಕೆ. ಶರಣಪ್ಪ ತೆಂಗಿನಕಾಯಿ, ಸಿದ್ದರಾಮಪ್ಪ ಕಾನಿಹಾಳ, ಸಂಗಪ್ಪ ಕಳಕಣ್ಣನವರ, ಸುಮಂಗಲಕ್ಕ ಚಿಂಚರಕಿ, ಪಿ. ಮಲ್ಲಿಕಾರ್ಜುನ ಹಾಗೂ ಇತರ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.