ಲಿಂಗಸಗೂರು
ಇಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಅನುಭವ ಮಂಟಪದಲ್ಲಿ ಶಿವರಾತ್ರಿ ನಿಮಿತ್ತ, ಇಷ್ಟಲಿಂಗ ಸಹಜ ಯೋಗ ಶಿಬಿರ ಏರ್ಪಡಿಸಲಾಗಿತ್ತು.
ಚಿತ್ತರಗಿ ಸಂಸ್ಥಾನ ಮಠದ ಇಲಕಲ್ಲ ಪೂಜ್ಯರು ಇಷ್ಟಲಿಂಗ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು, ಹಾಗೂ ಶಿವರಾತ್ರಿ ಬಗ್ಗೆ ಸವಿಸ್ತಾರವಾಗಿ ಅನುಭಾವ ನೀಡಿದರು .
ಡಾ. ಬಸವಲಿಂಗ ಸ್ವಾಮೀಜಿ, ಶಿರೂರು ಹಾಗೂ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಲಿಂಗಸಗೂರು ಉಪಸ್ಥಿತರಿದ್ದರು.

ನೂರಾರು ಜನ ಭಾಗವಹಿಸಿ ಇಷ್ಟಲಿಂಗ ಶಿವಯೋಗ ಮಾಡಿಕೊಂಡು ಪೂಜ್ಯರಿಂದ ಆಶೀರ್ವಾದ ಪಡೆದುಕೊಂಡರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಜಾಗತಿಕ ಲಿಂಗಾಯತ ಮಹಾಸಭಾ ಲಿಂಗಸುಗೂರು ಘಟಕದ ಅಧ್ಯಕ್ಷ ಶರಣ ಶಿವಾನಂದ ಐದನಾಳ, ಮಲ್ಲಣ್ಣ ನರಕಲದಿನ್ನಿ , ಶಿವಪ್ರ ಸಕ್ರಿ, ದೊಡ್ಡಪ್ಪ ಸಾಹುಕಾರ್, ಅಂಬಣ್ಣ ಹುರಕಡ್ಲಿ, ವಿಶ್ವನಾಥ ಸಕ್ರಿ, ಕೆ. ನಾಗಭೂಷಣ, ಭೂಪನಗೌಡ ಬಿ ಪಾಟೀಲ, ಗಿರಿ ಮಲ್ಲನಗೌಡ, ಎನ್. ಸಿದ್ದಣ್ಣ, ಲಿಂಬೆಣ್ಣ ಕುಂಬಾರ, ಡಾ. ಶಶಿಕಾಂತ ಕಾಡ್ಲೂರ , ಶರಣಬಸವ ಸಜ್ಜನ, ಶಿವಾನಂದ ಪಾಟೀಲ, ಮುರುಗೇಂದ್ರಪ್ಪ ಪ್ರಾಚಾರ್ಯರು, ಕದಳಿ ವೇದಿಕೆ ಅಧ್ಯಕ್ಷೆ ಜ್ಯೋತಿ ಶಿವಾನಂದ ಐದನಾಳ, ಡಾ. ಲತಾ ಶಿವಬಸಪ್ಪ ಹೆಸರೂರ, ಜಯಶ್ರೀ ವಿಶ್ವನಾಥ್ ಸಕ್ರಿ, ಬಸವರಾಜೇಶ್ವರಿ ಶಿವಪ್ಪ ಸಕ್ರಿ, ಅಶ್ವಿನಿ ಶಿವಶಂಕರ ಇನ್ನಿತರರು ಉಪಸ್ಥಿತರಿದ್ದರು.
ಸೋಮಶೇಖರ್ ಬಳಗನೂರ ವಂದಿಸಿದರು. ವೀರೇಶ ಚಕ್ರಸಾಲಿ ವಚನ ಮಂಗಲ ಹಾಡಿದರು.
