ಹುಬ್ಬಳ್ಳಿ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕಾರ್ಯದರ್ಶಿ ಹಂದಿಗುಂದ ವಿರಕ್ತಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳನ್ನು ಹುಬ್ಬಳ್ಳಿಯ ಬಸವ ಸಂಘಟನೆಗಳ ಸದಸ್ಯರು ಗುರುವಾರ ಭೇಟಿ ಮಾಡಿ ಮನವಿ ಪತ್ರ ನೀಡಿದರು.
ಶುಕ್ರವಾರ ಧಾರವಾಡದಲ್ಲಿ ನಡೆಯಲಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆಯಲ್ಲಿ ಭಾಗವಹಿಸಲು ಶ್ರೀಗಳು ಹಂದಿಗೊಂದದಿಂದ ಬುಧವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿನ ಮೂರು ಸಾವಿರ ಮಠದಲ್ಲಿ ಉಳಿದುಕೊಂಡಿದ್ದರು.
ಇಂದು ಪೂಜ್ಯರನ್ನು ನೀಲಾಂಬಿಕೆ ಬಳಗ, ಗಂಗಾಂಬಿಕೆ ಬಳಗ ಮತ್ತು ಬಸವ ಬಳಗದ 20 ಸದಸ್ಯರು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸರಿಯಾದ ಮಾರ್ಗದರ್ಶನವಿಲ್ಲದೆ ಲಿಂಗಾಯತ ಯುವಕರು ಹಿಂದುತ್ವ ಸಂಘಟನೆಗಳ ಕಪಿಮುಷ್ಟಿಗೆ ಸಿಲುಕಿ ಕೊಂಡಿದ್ದಾರೆ ಎಂದು ಬಸವ ಸಂಘಟನೆಗಳ ಸದಸ್ಯರು ಕಳವಳ ವ್ಯಕ್ತಮಾಡಿಸಿದರು. ಅದಕ್ಕೆ ಶ್ರೀಗಳು ಇದಕ್ಕೆ ಭಕ್ತರು ಕಾರಣವಲ್ಲ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು. ಇದೇ ವಿಷಯದ ಮೇಲೆ ಸಭೆ ನಡೆಯುತ್ತಿದೆ ಎಂದರು.

ಮನವಿ ಪತ್ರವನ್ನು ಮತ್ತು ಅದರಲ್ಲಿರುವ ಸಲಹೆಗಳನ್ನು ಓದಿ, ಎಲ್ಲಾ ಸೇರಿ ಒಳ್ಳೆ ಕೆಲಸ ಮಾಡಿದ್ದೀರಿ, ನಾಳೆಯ ಸಭೆಯಲ್ಲಿ ಇದನ್ನು ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತೇವೆ, ಎಂದು ಹೇಳಿದರು.
ಶರಣ ಸಮಾಜದ ಮುಂದಿರುವ ಸಮಸ್ಯೆಗಳನ್ನು ಚರ್ಚಿಸಲು ಲಿಂಗಾಯತ ಮಠಾಧೀಶರ ಒಕ್ಕೊಟದ ಸದಸ್ಯರು ಜನವರಿ 17ರಂದು ಧಾರವಾಡದಲ್ಲಿ ಸಭೆ ಸೇರುತ್ತಿದ್ದಾರೆ.
ಇದರ ಬಗ್ಗೆ ಬಸವ ಮೀಡಿಯಾದಲ್ಲಿ ಕೆಲವು ದಿನಗಳಿಂದ ನಡೆದಿರುವ ಚರ್ಚೆಯಲ್ಲಿ ಮೂಡಿದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಧಾರವಾಡದಲ್ಲಿ ಸೇರುತ್ತಿರುವ ಮಠಾಧೀಶರಿಗೆ ತಲುಪಿಸಲಾಗುತ್ತಿದೆ.
ಈ ಸಂದರ್ಭದಲ್ಲಿ
ಶಾರದಾ ಪಾಟೀಲ,
ರೇಖಾ ನಾರಾ,
ಪಾರ್ವತೆವ್ವ ಮೆಣಸಿನಕಾಯಿ,
ಸಾವಿತ್ರಿ ಕಟಗಿ,
ಗೌರಾದೇವಿ ಬುರ್ಲಬಡ್ಡಿ,
ಶಾಂತವ್ವ ಪಟ್ಟಣಶೆಟ್ಟಿ,
ಮಹೇಶ್ವರಿ ಬ್ಯಾಳಿ,
ಲಲಿತಾ ಬ್ಯಾಳಿ,
ರತ್ನಮ್ಮ ಪಗಡಿ,
ಲಕ್ಷ್ಮಿ ಬಿರಾದಾರ,
ರತ್ನಾ ಬಸಾಪುರ,
ಶಾಂತಾ ಸಿಂದಗಿ,
ಈರಣ್ಣ ಉಮಚಗಿ,
ಎಫ್. ಕೆ. ಬಣಕಾರ,
ಗಂಗಾಧರ ಲಕ್ಷ್ಮೇಶ್ವರ,
ಮದನ್ ನಂದೆಪ್ಪನವರ,
ಶಶಿಧರ ನಾರಾ,
ಸುನೀಲ ಪಾಟೀಲ,
ಬಸವರಾಜ ಕುಬಸದ,
ಕುಮಾರಣ್ಣ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
