ಸಾಣೇಹಳ್ಳಿ:
ಇಲ್ಲಿನ ತರಳಬಾಳು ಜಗದ್ಗುರು ಶಾಖಾಮಠದಲ್ಲಿ ಕಲೆ, ಸಾಹಿತ್ಯ, ಧರ್ಮ, ಸಂಸ್ಕೃತಿ, ಸಂಸ್ಕಾರಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತ ಬಂದಿವೆ.
ಲಿಂಗಾಯತ ಧರ್ಮ ಮತ್ತು ಅದರ ನಿಜಾಚರಣೆಗಳಿಗೆ ಸಂಬಂಧಿಸಿದಂತೆ 2025 ಡಿಸೆಂಬರ್ 27, 28, 29ರಂದು ವಿಶೇಷ ತರಬೇತಿ ಕಮ್ಮಟ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ.

35 ವರ್ಷದೊಳಗಿನ ಸ್ತ್ರೀ-ಪುರುಷರು 200=00 ರೂ. ಪ್ರವೇಶ ಶುಲ್ಕದೊಂದಿಗೆ ತಮ್ಮ ಅರ್ಜಿಯನ್ನು ಕೆಳಕಂಡ ವಿಳಾಸಕ್ಕೆ ಕಳಿಸುವುದು. ನೂರು ಜನರಿಗೆ ಮಾತ್ರ ಅವಕಾಶವಿದೆ. ಸಿಂಧನೂರಿನ ಪಿ. ರುದ್ರಪ್ಪ, ವಿಜಯಪುರದ ಜೆ.ಎಸ್. ಪಾಟೀಲ ಮತ್ತಿತರರು ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ:
ಶ್ರೀ ಮರುಳಸಿದ್ದಯ್ಯ
ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ- 577515
ಹೊಸದುರ್ಗ-ತಾಲ್ಲೂಕು ಚಿತ್ರದುರ್ಗ-ಜಿಲ್ಲೆ
ಮೊ ನಂ: 9663177254
