ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಕೊಪ್ಪಳದ ಶರಣತತ್ವ ಚಿಂತಕ ಡಾ ಸಂಗಮೇಶ ಕಲಹಾಳರ ಪ್ರತಿಕ್ರಿಯೆ.
ನಿಮ್ಮ ಮತ
ಇಲ್ಲಿಯ ತನಕ ಬಂದಿರುವ ಎಲ್ಲಾ ಪ್ರತಿಕ್ರಿಯೆಗಳು
RSSನಿಂದ ಕುಂಭಮೇಳ ಭಾಗ್ಯ: ಬಸವ ಮೀಡಿಯಾಗೆ ಬರುತ್ತಿರುವ ಪ್ರತಿಕ್ರಿಯೆಗಳು
1) ಕುಂಭಮೇಳಕ್ಕೆ ಹೋಗಲು ಲಿಂಗಾಯತರಿಗೆ ವಿಶೇಷ ಆಹ್ವಾನ. ಇದರ ಉದ್ದೇಶವೇನು?
ಕಡಿಮೆ ಜನಸಂಖ್ಯೆಯಲ್ಲಿರುವ, ಪ್ರಾದೇಶಿಕವಾಗಿ ಕಡಿಮೆ ವ್ಯಾಪ್ತಿ ಹೊಂದಿರುವ, ಪ್ರಸಾರ ಮತ್ತು ವಿಸ್ತರಿಸಿಕೊಳ್ಳುವ ಪ್ರಮಾಣ ಕಡಿಮೆ ಇರುವಂತಹ ಎಲ್ಲ ತತ್ವಗಳನ್ನು ಮತ್ತು ಧರ್ಮಗಳನ್ನು ಮರೆಮಾಸಿ, ಇಲ್ಲದಂತೆ ಮಾಡುವ ಉದ್ದೇಶವಾಗಿದೆ.
ಕಡಿಮೆ ಸಂಖ್ಯೆ, ಪ್ರದೇಶ ಮತ್ತು ಪ್ರಮಾಣವಿದ್ದರೂ ಅತ್ಯಂತ ಗಟ್ಟಿಯಾದ ಮೂಲಭೂತ ಸಿದ್ಧಾಂತ ಮತ್ತು ಸತ್ಯ-ನಿತ್ಯ ತತ್ವಗಳನ್ನು ಒಳಗೊಂಡಿರುವ “ಲಿಂಗಾಯತ ಧರ್ಮ”ದಂತಹವರೇ ಅಥವಾ ಸಮುದಾಯವೇ ಅವರ ಮೊಟ್ಟಮೊದಲ ಗುರಿಯಾಗಿದೆ.
2) ಯಾವ ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ ಬರುತ್ತದೆ ?
ವಾಸ್ತವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಒಟ್ಟಾರೆ 2.5 ಕೋಟಿ ಜನಸಂಖ್ಯೆ ಇದೆ.
ಇದರಲ್ಲಿ ಪಕ್ಕಾ ಬಸವತತ್ವ ಲಿಂಗಾಯತರು ಅಂದಾಜು ಶೇ. 10% ಇದ್ದಾರೆ. ಶೇ. 90% ರಲ್ಲಿ ವೀರಶೈವರು, ವೀರಶೈವ ಲಿಂಗಾಯತರು, ಲಿಂಗಾಯತರಿದ್ದು ವೈದಿಕ ಆಚರಿಸುವವರು ಇದ್ದಾರೆ. ಇದೇ ಅನುಪಾತದಲ್ಲಿ ಮಠಮಾನ್ಯ ಸ್ವಾಮೀಜಿಗಳೂ ಇದ್ದಾರೆ.
ಶೇ. 90% ರಷ್ಟು ಪ್ರಮಾಣದಲ್ಲಿ ಇರುವ ಲಿಂಗಾಯತರನ್ನು ಸಹಜವಾಗಿ ಆಹ್ವಾನಿಸಿದರೆ; ಪಕ್ಕಾ ಲಿಂಗಾಯತವಾದಿ ಸ್ವಾಮೀಜಿಗಳನ್ನು, ರಾಜಕೀಯ ಇನ್ನಿತರ ಮುಖಂಡರನ್ನು ಹೆಚ್ಚು ಒತ್ತುಕೊಟ್ಟು ಆಹ್ವಾನಿಸುತ್ತಾರೆ. ಶೇ. 10% ರ ಲಿಂಗಾಯತರೇ ಅವರ ವಿಶೇಷ ಆದ್ಯತೆಯಾಗಿದೆ.
3) ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು
ಪಕ್ಕಾ ಲಿಂಗಾಯತವಾದಿ ಸ್ವಾಮೀಜಿಗಳು, ರಾಜಕೀಯ ಇನ್ನಿತರ ಮುಖಂಡರು ಹೋಗಬಾರದು. ಆದರೆ ಇವರೆಲ್ಲರೂ ಸೇರಿ ಒಂದು ತಂತ್ರಯುಕ್ತಿ ಬಳಸಬೇಕು.
ಆಹ್ವಾನ ಬಂದಿರುವ ಪಕ್ಕಾ ಲಿಂಗಾಯತವಾದಿ ಸ್ವಾಮೀಜಿಗಳಲ್ಲಿ ಮತ್ತು ರಾಜಕೀಯ ಇನ್ನಿತರ ಮುಖಂಡರಲ್ಲಿ 4-5 ಜನರು ಹೋಗಬೇಕು. ಅವರ ಕುಯುಕ್ತಿಗಳೇನು ಎಂಬುದನ್ನು ಅಧ್ಯಯನ ಮಾಡಿಕೊಂಡು ಬರಬೇಕು.
ಕುಂಭಮೇಳಕ್ಕೆ ಹೋಗಿಬಂದ ಮೇಲೆ ಸ್ವಾಮೀಜಿಗಳು, ಮುಖಂಡರು, ಸಭೆ ಮಾಡಿ ಮುಂದಿನ ನಮ್ಮ ಪ್ರತಿತಂತ್ರಗಳನ್ನು ತಯಾರಿಸಿ ನಮ್ಮಲ್ಲಿ ಒಗ್ಗಟ್ಟು, ತತ್ವಪ್ರಸಾರ ಕುರಿತು ಏನೆಲ್ಲಾ ಕ್ರಮಗಳನ್ನು ಮಾಡಬೇಕೆಂದು ನಿರ್ಧರಿಸಿ ಮುನ್ನಡೆಯಬೇಕು.
4) ನಿಮ್ಮ ವೈಯಕ್ತಿಕ ಪ್ರತಿಕ್ರಿಯೆ ಏನು ಮಾಡುತ್ತೀರಿ ?
- ಅವರು ಏನು ಮಾಡುತ್ತಿದ್ದಾರೆ ಎಂಬುದಕ್ಕಿಂತ ನಾವು ಏನು ಮಾಡಬೇಕಾಗಿದೆ ಎಂಬುದರತ್ತ ಹೆಚ್ಚು ಗಮನ ಕೊಡಬೇಕು.
- ಸಮಾಜ ಕಟ್ಟುವ ಕಾರ್ಯ ಸಾಂದರ್ಭಿಕವಾಗಿರದೇ ದಿನನಿತ್ಯದ ನಡೆಯುವಂತಾಗಬೇಕು.
- ಎಲ್ಲ ಲಿಂಗಾಯತ ಸ್ವಾಮೀಜಿಗಳು ಒಂದಾಗಿ ಕೂಡಿ ತಂಡರೂಪವಾಗಿ ಕಾರ್ಯ ಮಾಡಬೇಕು.
- ಎಲ್ಲ ಲಿಂಗಾಯತಪರ ಸಂಘಟನೆಗಳು ತೆರೆದ ಮನೋಭಾವದಿಂದ, ಉದ್ದೇಶಕ್ಕಾಗಿ ಒಂದಾಗಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಕಾರ್ಯ ಮಾಡಬೇಕು.
- ಸಮಾನ ನಿಜಾಚರಣೆಗಳು, ಶಿವಯೋಗ ವಿಧಾನ, ಸಂಘಟನಾತ್ಮಕ ಕಾರ್ಯ, ನಿರಂತರ ತತ್ವಪ್ರಸಾರಗಳು ವ್ಯವಸ್ಥಿತವಾಗಿ ನಡೆಯಬೇಕು.
- ದೃಶ್ಯ, ಶ್ರವಣ, ಪತ್ರಿಕೆ, ಸಾಮಾಜಿಕ ಜಾಲತಾಣ ಹೀಗೆ ಎಲ್ಲ ವಿಧದ ಮಾಧ್ಯಮಗಳನ್ನು ಸಮರ್ಪಕ ಬಳಸಿಕೊಳ್ಳಬೇಕು.
- ನಮ್ಮ ತತ್ವ ಸಿದ್ಧಾಂತಗಳ ವಿರೋಧಿ ಜನರೊಂದಿಗೆ ಸಂಘರ್ಷ ಕಡಿಮೆ ಪ್ರಮಾಣದಲ್ಲಿರಬೇಕು. ನಮ್ಮ ತತ್ವ ಸಿದ್ಧಾಂತಗಳ ಆಚರಣೆಗೆ ಹೆಚ್ಚು ಆದ್ಯತೆ ಕೊಡಬೇಕು.
- ಲಿಂಗಾಯತರಲ್ಲಿಯೇ ಶ್ರೇಷ್ಠ ಉಪಪಂಗಡದವರೆನ್ನುವವರು, ಉಳಿದ ಉಪಪಂಗಡದವರನ್ನು ಸಮಾನದೃಷ್ಡಿ, ಸಮಾನ ಕರೆದುಕೊಳ್ಳುವಿಕೆ, ಸಮಾನ ಭಾಗವಹಿಸುವಿಕೆ, ಸಮಾನ ಕಾರ್ಯ-ಅಧಿಕಾರ-ಜವಾಬ್ದಾರಿಗಳನ್ನು ಹಂಚಿಕೊಳ್ಳುವದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಇದುವೇ ಎಲ್ಲರನ್ನು ಒಳಗೊಳ್ಳುವ, ಎಲ್ಲದರಲ್ಲೂ ಯಶಸ್ಸು ಹೊಂದುವ ಮಹತ್ವದ ನಡೆಯಾಗಬೇಕು.
- ಲಿಂಗಾಯತ ಒಳಪಂಗಡಗಳ ಕೂಡಿಸುವಿಕೆ ಹೆಚ್ಚು ಹೆಚ್ಚು ಪ್ರಾತ್ಯಕ್ಷಿಕ, ಪ್ರಯೋಗಾತ್ಮಕ, ಪ್ರಾಮಾಣಿಕವಾಗಿ ನಡೆಯಬೇಕು.
ಲಿಂಗಾಯತರ ಸಂಖ್ಯೆ ೧೦% ಎಂದು ಹೇಳಿರುವುದು ಸರಿಯಲ್ಲ. ಇದು ಬಸವಾನುಯಾಯಿ ಲಿಂಗಾಯತರಲ್ಲದವರು ಲಿಂಗಾಯತರೇ ಅಲ್ಲ. ಮೊದಲು ಸಂಖ್ಯೆಯಲ್ಲಿ ಯಾರು ಮುಂದು ಎನ್ನುವುದನ್ನು ಅದಾರದ ಮುಖೇನ ತಿಳಿಯಿರಿ. ದಯಮಾಡಿ ಲಿಂಗಾಯತರು ಮತ್ತು ಅವರ ಸಂಖ್ಯೆಯನ್ನು ಕಡೆಗಣಿಸುವ ಮತ್ತು ಬದಲಿಸುವ ಪ್ರಯತ್ನ ಮಾಡಬೇಡಿ.
ವ್ಯಾಸ ಪರಂಪರೆ ಹುಟ್ಟಿದಾಗಿನಿಂದಲೂ ಆರ್ ಎಸ್ ಎಸ್ ಐಡಿಯಾಲಜಿ ಇದೆ. ವ್ಯಾಸ ಪರಂಪರೆ ಸಮರ್ಥವಾಗಿ ಶೈವರ ಶುದ್ಧೀಕರಣ ಬೌದ್ಧರ ದಲಿತೀಕರಣ ಮಾಡಿತು. ತನ್ನ ಐಡಿಯಾಲಜಿಯೊಳಕ್ಕೆ ತೆಗೆದುಕೊಳ್ಳಲಾಗದ ಬೌದ್ಧರನ್ನು ದಲಿತೀಕರಿಸಿತು. ಜೈನ ಧರ್ಮಕ್ಕೆ ಧರ್ಮ ಗುರುವಿದ್ದು ತನ್ನದೇ ಧರ್ಮ ಗ್ರಂಥ ಧರ್ಮ ಭಾಷೆ ಇದ್ದು ಅದನ್ನು ಸಂಪೂರ್ಣ ಶೂದ್ರೀಕರಣ ಮಾಡಲಾಗಲಿಲ್ಲ ಅವರು ಸ್ವತಂತ್ರ ಧರ್ಮ ಮಾನ್ಯತೆ ಹೊಂದಿರುವ ಕಾರಣ ಈಗ ಅವರು ಆರ್ ಎಸ್ ಎಸ್ ನೊಂದಿಗೆ ಕೈ ಜೋಡಿಸಿದರೂ ಅವರ ಅಸ್ಮಿತೆಗೆ ಧಕ್ಕೆ ಇಲ್ಲ.
ಬೌದ್ಧ ಧರ್ಮ ಪರದೇಶದಲ್ಲಿ ವ್ಯಾಪಕವಾಗಿ ಬೆಳೆದು ಉಳಿದು ಬಂದು ಈಗ ಮತ್ತೊಮ್ಮೆ ಭಾರತದಲ್ಲಿ ಕಾನೂನಾತ್ಮಕವಾಗಿ ಮಾನ್ಯತೆ ಪಡೆದಿದೆ. ಆದುದರಿಂದ ಆ ಧರ್ಮವೂ ಸೇಫ್.
ದ್ರಾವಿಡ ಶೈವರ ಮತ್ತು ವೈದಿಕ ಆರ್ಯರ ಸಂಘರ್ಷವೇ ಸನಾತನ ಧರ್ಮದ ಸಂಸ್ಕೃತಿಯ ಬೇರು ಮತ್ತು ಆಧಾರ.
ಶೈವರನ್ನು ಮಟ್ಟ ಹಾಕಲು ದ್ರಾವಿಡ ಗುಂಪಿನ ನಾಯಕರುಗಳಾದ ರಾಮ ಮತ್ತು ಕೃಷ್ಣರನ್ನು ಶೈವರ ಶಿವನ ಜೊತೆ ಪೈಪೋಟಿಗೆ ಇಟ್ಟು ದ್ರಾವಿಡರ ಒಗ್ಗಟ್ಟನ್ನು ಒಡೆದರು. ದಾವಿಡರಲ್ಲಿ ಅಯೋನಿಜನಾದ ಶಿವಮಾತ್ರ ಏಕೈಕ ದೈವನಾಗಿದ್ದ. ಶಿವ ಪರಂಪರೆಯ ನಾಯಕರು ಆರ್ಯರೊಂದಿಗೆ ವಿವಾಹ ಸಂಬಂಧ ಬೆಳೆಸಿ. ಆರ್ಯ ದ್ರಾವಿಡ ಸಾಮರಸ್ಯಕ್ಕೆ ಕಾರಣರಾದರೂ ದ್ರಾವಿಡರು ಬಹು ಬೆಲೆಯನ್ನು ತೆರಬೇಕಾಯಿತು.. ಅವರನ್ನು ಶೂದ್ರೀಕರಣಕ್ಕೆ ಒಳಪಡಿಸಲಾಯಿತು.
ರಾಮ ಮತ್ತು ಕೃಷ್ಣ ಮನುಷ್ಯರಾಗಿದ್ದು ದ್ರಾವಿಡ ಪಂಗಡದ ನಾಯಕರುಗಳಾಗಿದ್ದು ಅವರನ್ನು ದೈವೀಕರಿಸಲಾಯಿತು. ಅವರನ್ನು ದಶಾವತಾರ ಪರಿಕಲ್ಪನೆಯಲ್ಲಿ ಬೆಳೆಸಿ ವಿಷ್ಣುವಿನ ಸಮಕ್ಕೆ ನಿಲ್ಲಿಸಿ ಹಿಂದೂ ಧರ್ಮದ ಪರಮೋಚ್ಚ ದೇವರಾಗಿಸಲಾಯಿತು. ಈ ಎಲ್ಲ ಪ್ರಕ್ರಿಯೆಗಳನ್ನು ರಾಮಾಯಣ ಮತ್ತು ಭಾರತ ಕಾವ್ಯಗಳನ್ನು ರಚಿಸಿ ಭಗವದ್ಗೀತೆಯನ್ನು ರಚಿಸಿ ವೈದಿಕ ವಿಷ್ಣು ಪಾರಮ್ಯವನ್ನು ಸ್ಥಾಪಿಸಲಾಯಿತು. ಶೈವರನ್ನು ಶೂದ್ರರಾಗಿಸಲಾಯಿತು.
ಬಸವಣ್ಣನವರು ಈ ಪ್ರಕ್ರಿಯೆಗೆ ದೊಡ್ಡ ತಡೆಯೊಡ್ಡಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು.ಈ ಪ್ರಜ್ಞೆ ನಮ್ಮ ರಾಜಕಾರಣಿಗಳಿಗೆ ಧರ್ಮ ಗುರುಗಳಿಗೆ ವಿದ್ಯಾವಂತ ಲಿಂಗಾಯಿತರಿಗೆ ಇಲ್ಲದವರಿಂದ ಅಸ್ಮಿತಿಯನ್ನು ಕಳೆದುಕೊಂಡು ವೈದಿಕ ಆಚರಣೆಗಳನ್ನು ಒಪ್ಪಿಕೊಂಡು ಲಿಂಗಾಯತ ಧರ್ಮವನ್ನು ಅಳಿಲಿನಂಚಿಗೆ ದೂಡಿದ್ದಾರೆ. ಆರ್ ಎಸ್ ಎಸ್ ಲಿಂಗಾಯತ ಶವಕ್ಕೆ ಕೊನೆ ಮೊಡೆ ಒಡೆಯಲು ಸಿದ್ಧತೆ ಮಾಡಿಕೊಂಡಿದೆ.