ಬೆಳಗಾವಿ
ನಗರದ ಹಳಕಟ್ಟಿ ಭವನದಲ್ಲಿ ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ ಜರುಗಿತು.
ಕಾರ್ಯಕ್ರಮದಲ್ಲಿ ಶರಣ ಶಂಕರ ಗುಡಸ ಮಾತನಾಡಿ ನಮ್ಮ ದೇಹವೇ ಒಂದು ಹೊಲವಿದ್ದಂತೆ ಅದನ್ನೇ ನಿಜವಾಗಿ ಕೃಷಿ ಮಾಡಿದರೆ ಎಲ್ಲವನ್ನು ಸಾಧಿಸಬಹುದು. ಮನಸ್ಸೆಂಬುದನ್ನು ನಿಯಂತ್ರಣದಲ್ಲಿಟ್ಟು ಕೃಷಿ ಮಾಡಿದರೆ ಬೇಕಾದನ್ನು ಸಾಧಿಸಬಹುದು, ಸನ್ನಡತೆಯೇ ಶರಣರ ಪಥವಾಗಿತ್ತು ಎಂದು ವಿವಿಧ ವಿಚಾರಗಳನ್ನು ವಿಶ್ಲೇಷಣೆ ಮಾಡುತ್ತ ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಫಕಿರಪ್ಪ ಕರಿಕಟ್ಟಿ ಅವರ 75 ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಯೋಗ ಗುರುಗಳಾದ ಶರಣ ಸಿದ್ದಪ್ಪ ಸಾರಾಪೂರೆ ಬಿಗಿಯಾದ ನರಗಳನ್ನು ಸಡಿಲಗೊಳಿಸುವ ಕಾರ್ಯ ತಂತ್ರವನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಪಡಿಸಿದರು.

ಶರಣ ಸುನೀಲ ಸಾಣಿಕೊಪ್ಪ ಅವರು, ನಾವು ಆಡುವ ನುಡಿಯಿಂದ ಆಗುವ ಒಳ್ಳೆಯತನ ಮತ್ತು ಕೆಡಕುಗಳ ವಿಶ್ಲೇಷಣೆ ಮಾಡಿ ನಡೆ ನುಡಿ ಕುರಿತಾದ ವಚನಗಳನ್ನು ವಿವರಿಸುತ್ತಾ ಹೇಳಿದರು.
ಅಕ್ಕಮಹಾದೇವಿ ತೆಗ್ಗಿ, ಬಿ.ಪಿ. ಜೇವಣಿ, ವಿ.ಕೆ. ಪಾಟೀಲ, ಮಹಾದೇವಿ ಅರಳಿ, ಬಸವರಾಜ ಬಿಜ್ಜರಗಿ, ಕುಮಾರಿ ಕರಿಕಟ್ಟಿ , ಮಹಾದೇವ ಕೆಂಪಿಗೌಡರ ಸೇರಿದಂತೆ ಹಲವರು ಶರಣರ ವಚನಗಳ ವಿಶ್ಲೇಷಣೆ ಮಾಡಿದರು.
ಸದಾಶಿವ ದೇವರಮನಿ, ಶಂಕ್ರಣ್ಣ ಮೆಣಸಗಿ, ಗುರುಸಿದ್ದಪ್ಪ ರೇವಣ್ಣವರ, ಆನಂದ ಕರ್ಕಿ, ಬಸವರಾಜ ಪೂಜೇರಿ, ಮಹಾಂತೇಶ ಇಂಚಲ, ಎಫ್.ಬಿ. ಕರಿಕಟ್ಟಿ,
ಪ್ರಸಾದ ಹಿರೇಮಠ, ಮಹಾಂತೇಶ ಮೆಣಸಿನಕಾಯಿ, ದೊಡಗೌಡ ಪಾಟೀಲ, ರುದ್ರಗೌಡ ಪಾಟೀಲ, ಗಂಗಪ್ಪ ಉಣಕಲ್, ಶಿವಾನಂದ ನಾಯಕ, ಬಸವರಾಜ ಕರಡಿಮಠ, ಶಂಕರ ರಾವಳ, ಕೆಂಪಣ್ಣಾ ರಾಮಾಪೂರೆ, ಶೇಖರ ವಾಲಿಇಟಗಿ ದಂಪತಿ, ಶಿವಾನಂದ ನಾಯಕ, ಎಸ್. ಎಸ್. ಪೂಜೇರ, ಗಂಗಾಧರ ಹಿತ್ತಲಮನಿ, ಶಿವಾನಂದ ತಲ್ಲೂರ, ಸುದೀಪ ಪಾಟೀಲ ಸೇರಿದಂತೆ ಶರಣ ಶರಣೆಯರು ಉಪಸ್ಥಿತರಿದ್ದರು.
ಸುರೇಶ ನರಗುಂದ ಸ್ವಾಗತಿಸಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸಂಗಮೇಶ ಅರಳಿ ನಿರೂಪಿಸಿ ವಂದಿಸಿದರು.