ಬೀದರ:
ಬೀದರ ಲಿಂಗಾಯತ ಮಹಾಮಠ ”ಮರಣವೇ ಮಹಾನವಮಿ ಮಹೋತ್ಸವ” ಮತ್ತು “ಕಲ್ಯಾಣ ಕ್ರಾಂತಿ ವಿಜಯೋತ್ಸವ”ವನ್ನು 2024, ಅಕ್ಟೋಬರ್ 03ರಿಂದ 11ರವರೆಗೆ ಆಯೋಜಿಸಿದೆ.
ಪ್ರತಿದಿನ ಸಂಜೆ 6 ಗಂಟೆಗೆ ಬಸವಗಿರಿಯಲ್ಲಿ ಪೂಜ್ಯ ಪ್ರಭುದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಲಿಂಗಾಯತ ಸೇವಾದಳ ಹಾಗೂ ನೀಲಮ್ಮನ ಬಳಗ ಸಹಯೋಗದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
03ರಂದು ಉದ್ಘಾಟನಾ ಸಮಾರಂಭ
04ರಂದು ಬಸವ ಮಹಿಮೆ
05ರಂದು ವಚನ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು
06ರಂದು ಮರಣವೇ ಮಹಾನವಮಿ
07ರಂದು ವಚನಗಳಲ್ಲಿ ಆರೋಗ್ಯ
08ರಂದು ಅನುಭವ ಮಂಟಪದ ಅನುಭಾವಿಗಳು
09ರಂದು ಜನಪದರ ದೃಷ್ಟಿಯಲ್ಲಿ ಶರಣರು
10ರಂದು ಕಲ್ಯಾಣ ಕ್ರಾಂತಿ
11ರಂದು ಕಲ್ಯಾಣ ಕ್ರಾಂತಿ ವಿಜಯೋತ್ಸವ
ಈ ರೀತಿಯ ಕಾರ್ಯಕ್ರಮ, ಗೋಷ್ಠಿಗಳು ನಡೆಯಲಿವೆ.
ಪ್ರತಿದಿನ ಬೇರೆ ಬೇರೆ ಅನುಭಾವಿಗಳು, ಮುಖ್ಯ ಅತಿಥಿಗಳು, ವಿಶೇಷ ಆಮಂತ್ರಿತರು ಭಾಗವಹಿಸುತ್ತಾರೆ. ಪ್ರತಿದಿನ ವಚನಗಳ ಪಠಣ ಇರುತ್ತದೆ.
ಕನ್ನಡದ ಮೊದಲ ಧರ್ಮ-ಲಿಂಗಾಯತ ಧರ್ಮ,
ಲಿಂಗಾಯತ ಧರ್ಮ-ಸ್ವತಂತ್ರ ಧರ್ಮ,
ಲಿಂಗಾಯತ ಧರ್ಮ-ವಿಶ್ವ ಮಾನವ ಧರ್ಮ,
ಲಿಂಗಾಯತ ಧರ್ಮ ಸಂಸ್ಥಾಪಕರು-ವಿಶ್ವಗುರು ಬಸವಣ್ಣನವರು,
ಲಿಂಗಾಯತ ಧರ್ಮ ಗ್ರಂಥ-‘ಗುರುವಚನ’,
ಲಿಂಗಾಯತ ಧರ್ಮ ಕ್ಷೇತ್ರ-ಕೂಡಲಸಂಗಮ-ಬಸವ ಕಲ್ಯಾಣ,
ಲಿಂಗಾಯತ ಧರ್ಮಧ್ವಜ-ಷಟ್ಕೋನ ಸಹಿತ ಬಸವಧ್ವಜ,
ಲಿಂಗಾಯತ ಧರ್ಮ ಲಾಂಛನ: ವಿಶ್ವಾತ್ಮನ ಕುರುಹಾದ ಇಷ್ಟಲಿಂಗ,
ಲಿಂಗಾಯತ ಧರ್ಮದ ಧ್ಯೇಯ-ಕಲ್ಯಾಣ ರಾಜ್ಯ ನಿರ್ಮಾಣ ಘೋಷಣೆಗಳು ಸಮಾರಂಭದಲ್ಲಿ ಮೊಳಗಲಿವೆ.
Good