ಲಿಂಗಾಯತ ಸಮಾಜವನ್ನು ಒಡೆಯಲು ನಡೆಯುತ್ತಿರುವ ಕುತಂತ್ರ

ಬಿ. ಚನ್ನಪ್ಪ
ಬಿ. ಚನ್ನಪ್ಪ

ನಂಜನಗೂಡು

ಇತ್ತೀಚೆಗಿನ ದಿನಗಳಲ್ಲಿ ಹಲವಾರು ಒಳಪಂಗಡದವರು ಜೇವನೋಪಾಯದ ಸವಲತ್ತಿಗಾಗಿ ಲಿಂಗಾಯತದಿಂದ ದೂರ ಸರಿಯುತಿದ್ದಾರೆ. ಇದನ್ನು ಕೆಲವು ರಾಜಕೀಯ ಶಕ್ತಿಗಳು ಬಳಸಿಕೊಳ್ಳುತ್ತಿವೆ.

ವಿಶ್ವಕರ್ಮ ನಿಗಮ ಮಾಡಿದ ನಂತರ ಸವಲತ್ತುಗಳಿಗಾಗಿ ಲಿಂಗಾಯತ ಆಚಾರ್ ರವರು ಇಷ್ಟಲಿಂಗ ತೆಗೆದು ಜನಿವಾರ ಧರಿಸಿ ಲಿಂಗಾಯತ ಧರ್ಮದಿಂದ ಹೊರಗೆ ಹೊರಗೆ ಹೋಗುತ್ತಾ ಇದ್ದಾರೆ. ಇವರಂತೆಯೇ ಮಠದ ಮನೆತನದವರು ಸವಲತ್ತುಗಳನ್ನು ಪಡೆಯಲು ಬೇಡ ಜಂಗಮರಾಗಿ ಲಿಂಗಾಯತ ಧರ್ಮದ ಆಚೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಪಂಚಮಸಾಲಿ ಲಿಂಗಾಯತರು ಅಪ್ಪಟ ಲಿಂಗಾಯತ ತತ್ವವನ್ನೆ ಅನುಸರಿಸಿದರೂ ಸವಲತ್ತುಗಳನ್ನು ಪಡೆಯಲು ಮೀಸಲಾತಿ ಮೊರೆ ಹೋಗಿದ್ದಾರೆ.

ಒಳ ಪಂಗಡಗಳು ಸವಲತ್ತುಗಳಿಗಾಗಿ ಆಚೆ ಹೋಗುತ್ತಿರುವುದರಿಂದ ಲಿಂಗಾಯತ ಜನಸಂಖ್ಯೆ ಕ್ಷೀಣಿಸುತ್ತಿದೆ. ಇವರ ತುಡಿತ ಬಳಸಿಕೊಂಡು ಲಿಂಗಾಯತ ಸಮಾಜವನ್ನು ಇನ್ನಷ್ಟು ಒಡೆಯುವ ಕುತಂತ್ರವನ್ನು ಬೇರೆ ಸಮಾಜದ ರಾಜಕಾರಣಿಗಳೂ ಮಾಡುತ್ತಿದ್ದಾರೆ. ಇದನ್ನರಿಯದ ಮೂಢ ಭಕ್ತರು ನಾವಾಗಿದ್ದೇವೆ.

ಬಿ.ಎಸ್.ಯಡಿಯೂರಪ್ಪನವರಿಗೆ ಕುಮಾರಸ್ವಾಮಿಯವರು ಅಧಿಕಾರ ನೀಡಲು ನಿರಾಕರಿಸಿದಾಗ ಯಡಿಯೂರಪ್ಪನವರ ಹಿಂದೆ ಲಿಂಗಾಯತರು ಒಗ್ಗಟ್ಟಾಗಿ ನಿಂತರು. ಇದರಿಂದ 2013ರಲ್ಲಿ ಸರಾಸರಿ 11% ಮತ ಯಡಿಯೂರಪ್ಪನವರ ಕೆಜೆಪಿಗೆ ಬಂದಿತ್ತು. ಯಡಿಯೂರಪ್ಪನವರಿಗೆ ಲಿಂಗಾಯತ ಸಮುದಾಯದವರು ಮತ್ತು ಮಠಾದೀಶರು ನೀಡಿದ ಬೆಂಬಲವನ್ನು ಪಕ್ಷಗಳು ಗಮನಿಸಿದವು.

ಒಬ್ಬ ವ್ಯಕ್ತಿಗೆ ಒಂದು ದೊಡ್ಡ ಸಮುದಾಯ ಈ ಪ್ರಮಾಣದಲ್ಲಿ ಬೆಂಬಲ ನೀಡಿದ್ದು ಒಂದು ಪಕ್ಷಕ್ಕೆ ತಲೆನೋವಾಗಿ ಪರಿಮಿಸಿತು. ಆ ವ್ಯಕ್ತಿಯಿಂದ ಅಧಿಕಾರ ಕಿತ್ತು ಪಕ್ಷದ ಬೇರೆಯವರಿಗೆ ಹಸ್ತಾಂತರ ಮಾಡಲು ಸಾಧ್ಯವಾಗದೆ ಇದ್ದಾಗ ಇಡೀ ಲಿಂಗಾಯತ ಸಮುದಾಯದವನ್ನು ಒಡೆಯುವ ಪ್ರಯತ್ನಕ್ಕೆ ಅದು ಕೈ ಹಾಕಿದೆ.

ಇದೆನ್ನೆಲ್ಲಾ ಗಮನಿಸಿ ಲಿಂಗಾಯತ ಸಂಘಟನೆಗಳು, ಮುಖಂಡರು, ಮಠಾದೀಶರು ಲಿಂಗಾಯತದ ಒಗ್ಗಟ್ಟಿಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಸಮುದಾಯ ರಾಜಕೀಯವಾಗಿ ಕ್ಷೀಣವಾಗುವುದರಲ್ಲಿ ಸಂದೇಹವೇ ಇಲ್ಲ.

Share This Article
6 Comments
    • ಹೌದು ಸರ್…. ಯಡಿಯೂರಪ್ಪನವರು ಲಿಂಗಾಯತ ಧರ್ಮದ ಮಾನ್ಯತೆಗೆ ಸಹಕರಿಸಿದ್ದರೆ ಕೋಟ್ಯಾಂತರ ಬದುಕು ಹಸನವಾಗುವುದರಲ್ಲಿತ್ತು. ಮತ್ತು ಲಿಂಗಾಯತ ಧರ್ಮದ ವಿಚಾರ ವಿಶ್ವ ಮಟ್ಟದಲ್ಲಿ ಬೆಳೆಯಲು ಅವಕಾಶವಾಗುತಿತ್ತು.ಆದರೆ ಯಡಿಯೂರಪ್ಪನವರ ನಿರಾಸಕ್ತಿ ಅಥವಾ ತಿಳಿವಳಿಕೆ ಕೊರತೆಯಿಂದ ಲಿಂಗಾಯತರಿಗೆ ಅನ್ಯಾಯವಾಗಿದ್ದಂತು ಸತ್ಯ

  • ಲಿಂಗಾಯತ ಧಮ೯ವನ್ನು ಹಾಳುಮಾಡಲು ರಾಜಕೀಯ ಮಾಡುತ್ತಿರುವದೆ ಯಡಿಯೂರಪಪ್ಪ ಇದು ನಮ್ಯ ಲಿಂಗಾಯತರಿಗೆ ಅಥ೯ವಾಗುತ್ತಿಲ್ಲ ಯಾಕೆ?

  • ಖಾದಿ-ಕಾವಿಗಳ ಅನ್ಯೆತಿಕ ಸಂಬಂಧ ಲಿಂಗಾಯತ ಸಂವಿಧಾನದ ಮೇಲೆ ಮೈ ಮರೆತು ಮೆರೆದಾಡುತ್ತಿವೆ!

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು