ಬೆಳಗಾವಿ
ರವಿವಾರದಂದು ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಾರದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಧಾರವಾಡ ತಪೋವನದ ಅನುಭಾವಿ ಶರಣರಾದ ಸತೀಶ ಸವದಿ ಆವರಿಂದ ಯೋಮಕಾಯ ಅಲ್ಲಮಪ್ರಭುಗಳ ಕುರಿತು ಉಪನ್ಯಾಸ ನಡೆಯಿತು.
ಅನುಭವ ಮಂಟಪದ ದಿವ್ಯವಾದ ರಸಾಯನ ಶಾಲೆಯಲ್ಲಿ ಪ್ರತಿಯೊಂದು ವಿಷಯಗಳು ವೈಜ್ಞಾನಿಕವಾಗಿ ಚರ್ಚಿತವಾಗಿ ವಚನಗಳ ರೂಪವನ್ನು ಪಡೆದು ಹೊರಬರುತ್ತಿದ್ದವು. ಅಂತಹ ದಿವ್ಯ ವೇದಿಕೆಗೆ ಬಯಲನ್ನೇ ತನ್ನ ಬದುಕಾಗಿಸಿದ, ಶೂನ್ಯ ಪೀಠದ ಅಧ್ಯಕ್ಷರಾದ ಅಲ್ಲಮರು ಯೋಗಜೀವಿಗಳು. ಕಾಯವನ್ನು ಧರಿಸಿದ್ದರೂ ಅಕಾಯ ಜೀವಿಗಳೂ ಆಗಿದ್ದರು ಎನ್ನುವುದನ್ನು ಶರಣರ ಬದುಕಿನ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಡುವ ಶೂನ್ಯ ಸಂಪಾದನೆಯ ಹಲವಾರು ಸನ್ನಿವೇಶಗಳನ್ನು ನೆನಪಿಸಿದರು.
ಧಾರವಾಡದ ತಪೋವನದ ಪೂಜ್ಯರು ಶೂನ್ಯ ಸಂಪಾದನೆಯ ಕೃತಿಯನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿದ್ದನ್ನು ಹೇಳಿದರು. ಮತ್ತು ಕೃತಿಯಲ್ಲಿ ಶರಣರನ್ನು ಅಪ್ಪಟ ದೇಶಪ್ರೇಮಿಗಳು ಹಾಗೂ ಪರಿಸರವಾದಿಗಳು ಎಂದು ವರ್ಣಿಸಿರುವ ಸನ್ನಿವೇಶಗಳನ್ನು ನೆನಪಿಸಿಕೊಂಡರು.
ಶರಣರ ಶಿವಯೋಗ ಪರಿಕಲ್ಪನೆ, ಷಟಸ್ಥಲ ಸಾಧನೆ , ಲಿಂಗಾನುಸಂಧಾನ ಇವೆಲ್ಲ ಆದುನಿಕ ವಿಜ್ಞಾನದ ಹಲವಾರು ಸಂಶೋಧನೆಯ ಮೈಲುಗಲ್ಲುಗಳನ್ನು ಮೀರಿಸುವಂತದ್ದು ಎಂದು ಸವದಿ ಹೇಳಿದರು.
ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಸಂಘಟನೆಯ ಅಧ್ಯಕ್ಷರಾದ ಶರಣ ಈರಣ್ಣ ದೆಯನ್ನವರ ಅವರ ನೇತ್ರತ್ವದಲ್ಲಿ ನೆರವೇರಿದವು. ಶರಣ ಸದಾಶಿವ ದೇವರಮನಿ ಅವರ ಮೂಲಕ ಉಪನ್ಯಾಸಕರೊಂದಿಗೆ ಸಂವಾದ ನೆರವೇರಿತು. ಶರಣ ಶಂಕರ ಗುಡಸ ಅವರು ಅಲ್ಲಮಪ್ರಭುಗಳ ಬದುಕಿಗೆ ಸಂಬಂಧಿತ ಹಲವಾರು ಸನ್ನಿವೇಶಗಳನ್ನು ಸ್ಮರಿಸಿಕೊಂಡರು.
ಪ್ರಾರಂಭದಲ್ಲಿ ವಚನ ಪ್ರಾರ್ಥನೆಯನ್ನು ಶರಣೆ ಮಹಾದೇವಿ ಅರಳಿ ಆವರ ನೇತ್ರತ್ವದಲ್ಲಿ ನಡೆಯಿತು. ಕಾರ್ಯಕ್ರಮ ನಿರ್ವಹಣೆಯನ್ನು ಸಂಘಟನೆ ಉಪಾಧ್ಯಕ್ಷ ಶರಣ ಸಂಗಮೇಶ ಅರಳಿ ನೆರವೇರಿಸಿದರು. ಲಿಂಗಾಯತ ಸಂಘಟನೆಯ ವತಿಯಿಂದ ಪ್ರಸಾದ ಸೇವೆ ನೆರವೇರಿತು. ಶರಣರಾದ ಸುರೇಶ ನರಗುಂದ ಮತ್ತು ವಿ. ಕೆ. ಪಾಟೀಲ ಅವರೂ ಕೂಡಾ ಪ್ರಾರಂಭದಲ್ಲಿ ವಚನ ವಿಶ್ಲೇಷಣೆ ಮಾಡಿದರು. ಎ. ಬಿ. ಜೇವಣಿ, ಜಾಹ್ನವಿ ಘೋರ್ಪಡೆ, ಸುವರ್ಣ ಗುಡಸ, ಬಸವರಾಜ ಗುರನಗೌಡ್ರು, ಶ್ರೀದೇವಿ ನರಗುಂದ, ಆನಂದ ಕರ್ಕಿ ಅವರಿಂದ ವಚನ ಗಾಯನ ನೆರವೇರಿತು. ಅಶೋಕ ಇಟಗಿ, ಸುಜಾತಾ ಮತ್ತಿಕಟ್ಟಿ, ಶೋಭಾ ಮುನವಳ್ಳಿ, ಕಮಲಾ ಗಣಾಚಾರಿ, ಮಹಾದೇವಿ ಘಾಟೆ, ಶಾಂತಾ ಕ೦ಬಿ, ಜಯಶ್ರೀ ನಷ್ಟೆ, ತಿಗಡಿ, ಕೆಂಪನ್ನವರ ದಂಪತಿಗಳು, ಬಸವರಾಜ ಬಿಜ್ಜರಗಿ, ಸುದೀಪ ಪಾಟೀಲ, ಬಸವರಾಜ ಮತ್ತಿಕಟ್ಟಿ, ಶೇಖರ ವಾಲಿಇಟಗಿ, ಸುನೀಲ ಸಾಣಿಕೊಪ್ಪ , ಸೋಮಶೇಖರ ಕಟ್ಟಿ , ಒಳಗೊಂಡಂತೆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.