ಬೆಳಗಾವಿ
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ವೀರವೀರಾಗಿಣಿ, ವೈರಾಗ್ಯನಿಧಿ ಅಕ್ಕಮಹಾದೇವಿ ಅವರ ಜಯಂತಿ ಆಚರಿಸಲಾಯಿತು.
ಶರಣೆ ದಾನಮ್ಮಾ ಝಳಕಿ ಅವರು ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡುತ್ತಾ, ಶರಣೆ ಅಕ್ಕಮಹಾದೇವಿ ಅವರು ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಮಹಾದೇವಿ ಎಂಬ ಭಾವಬಂಧನವನ್ನು ಕಳಿಚಿ, ಭಾವ ದಿಗಂಬರಳಾಗಿ ಭೀಕರ ಕಾಡಿನ ಕಾಗ೯ತ್ತಲಿನಲ್ಲಿ, ಬೇಸಿಗೆಯ ಬಿಸಿಲಲ್ಲಿ, ಕೊರೆಯುವ ಚಳಿಯಲ್ಲಿ, ಹುಣ್ಣಿಮೆಯ ಚಂದಿರನ ಬೆಳದಿಂಗಳಲ್ಲಿ ತಮ್ಮ ಆರಾಧ್ಯದೈವ ಚೆನ್ನಮಲ್ಲಿ ಕಾರ್ಜುನನನ್ನು ಅರಸುತ್ತ, ಹಸಿವಾದಡೆ ಭಿಕ್ಷಾನ್ನಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು, ಆತ್ಮಸಂಗಾತಕ್ಕೆ ಚನ್ನಮಲ್ಲಿಕಾಜು೯ನ ಎನಗುಂಟು ಎಂದು ಹೇಳುತ್ತ ಸಾಗಿದ ಶರಣೆ ಮಹಾದೇವಿಯಕ್ಕ ಪಟ್ಟ ಪಾಡನ್ನು ತಿಳಿಸಿದರು.
ಅಜ್ಞಾನದಿಂದ ಸುಜ್ಞಾನದ ಕಡೆ ಸಾಗುವುದು, ಮಾಯೆ ಯಾರನ್ನು ಬಿಟ್ಟಿಲ್ಲಾ ಏಕ್ರಾಗತೆ ಸಾದಿಸಬೇಕು ಎಂದು ಮಾತನಾಡಿದರು.

ಪ್ರಾರಂಭದಲ್ಲಿ ಸುರೇಶ ನರಗುಂದ, ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಬಸವರಾಜ ಗುರನಗೌಡ್ರ, ವಿ ಕೆ ಪಾಟೀಲ, ಆನಂದ ಕಕಿ೯, ಸುನೀಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ, ಜಾನ್ವಿ ಘೋಪ೯ಡೆ, ಬಶೆಟ್ಟಿ ಅನಸೂಯ, ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚಾವಲಗಿ, ವಚನ ವಿಶ್ಲೇಷಣೆ ಮಾಡಿದರು. ಪ್ರಶಾಂತ ಗುತ್ತಿಗೊಳಿ ದಾಸೋಹ ಸೇವೆಗೈದರು. ಸುರೇಶ ನರಗುಂದ ನಿರೂಪಿಸಿದರು. ಸುಜಾತಾ ಮತ್ತಿಕಟ್ಟಿ, ಅನ್ನಪೂರ್ಣ ಕಾಡಣ್ಣವರ, ವಿದ್ಯಾ ಕಕಿ೯, ಸಿದ್ದಪ್ಪ ಸಾರಾಪೂರಿ, ಅನೀಲ ರಘಶೆಟ್ಟಿ, ಬಸವರಾಜ ಗುರನಗೌಡರ, ಶೇಖರ ವಾಲಿಇಟಗಿ, ಬಸವರಾಜ ಮತ್ತಿಕಟ್ಟಿ , ಮಹಾಂತೇಶ ಮೆಣಸಿನಕಾಯಿ, ಜ್ಯೋತಿ ಬದಾಮಿ, ಗುರುಸಿದ್ದಪ್ಪ ರೇವಣ್ಣವರ, ಬಿ. ಪಿ. ಜವಣಿ, ಸೋಮಶೇಖರ ಕತ್ತಿ, ನಾಗನಗೌಡ ಪಾಟೀಲ, ಶಿವಾನಂದ ಲಾಳಸಂಗಿ, ಬಿ. ಬಿ. ಮಠಪತಿ, ಶಿವಾನಂದ ನಾಯಕ, ಬಸವರಾಜ ಇಂಚಲ, ಬಸವರಾಜ ಬಿಜ್ಜರಗಿ, ತಿಗಡಿ ದಂಪತಿಗಳು, ಶಂಕರ ಗುಡಸ, ಪ್ರಸಾದ ಹಿರೇಮಠ, ಸುನಂದಾ ಕೆಂಪಿಗೌಡರ ದಂಪತಿಗಳು, ಉಪಸ್ಥಿತರಿದ್ದರು.
ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ಬಸವ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವಿನಂತಿಸಿದರು. ಎಲ್ಲ ಸಂಘಟನೆ ಸೇರಿ ಯಶಸ್ವಿಗೊಳಿಸೋಣ, ಎಂದರು. ಸುರೇಶ ನರಗುಂದ ವಂದಿಸಿದರು.