ಸೊಲ್ಲಾಪುರ
ಜಗತ್ತಿಗೆ ಮೊದಲಬಾರಿಗೆ ಪ್ರಜಾಭುತ್ವ ನೀಡಿದ, ಸಮತಾ ನಾಯಕ ಮಹಾತ್ಮ ಬಸವಣ್ಣನವರು ಕಟ್ಟಿದ ಲಿಂಗಾಯತ ಧರ್ಮಿಯರ ಕಣಕಣದಲ್ಲಿ ರಾಷ್ಟ್ರಾಭಿಮಾನ ತುಂಬಿದೆ ಎಂದು ವಿಜಯಪುರದ ಚಿಂತಕ ಡಾ.ಜೆ.ಎಸ್. ಪಾಟೀಲ ಹೇಳಿದರು.
ಶನಿವಾರ ಇಲ್ಲಿಯ ಸಿದ್ಧವ್ವಬಾಯಿ ಹತ್ತುರೆ ಸಾಂಸ್ಕೃತಿಕ ಸಭಾಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸೊಲ್ಲಾಪುರ ಜಿಲ್ಲಾ ಘಟಕ ಆಯೋಜಿಸಿದ ಒಂದು ದಿನದ ಲಿಂಗಾಯತ ಅಧ್ಯಯನ ಶಿಬಿರದಲ್ಲಿ ‘ಲಿಂಗಾಯತ ಧರ್ಮದ ಇತಿಹಾಸ, ತತ್ವ-ಸಿದ್ದಾಂತ ಮತ್ತು ಸಂಘಟನೆ ಕುರಿತು ಮಾತನಾಡುತ್ತಿದ್ದರು.
ಹಿಂದು ಧರ್ಮದಲ್ಲಿ ಜಿಡ್ಡುಗಟ್ಟಿದ ಮೌಢ್ಯತೆ, ಕಂದಾಚಾರ, ಅಸಮಾನತೆ ವಿರುದ್ಧ ೧೨ ನೇ ಶತಮಾನದಲ್ಲಿ ಕೆಳವರ್ಗದ ಶ್ರಮಜೀವಿಗಳನ್ನು ಕಟ್ಟಿಕೊಂಡು ಬಸವಣ್ಣನವರು ಪರ್ಯಾಯವಾಗಿ ಸ್ವತಂತ್ರ ಲಿಂಗಾಯತ ಧರ್ಮ ಕಟ್ಟಿದರ ಪರಿಣಾಮವಾಗಿ ಲಕ್ಷ-ಲಕ್ಷ ಜನರು ಬಸವಣ್ಣವರನ್ನು ಅರಿಸಿ ಬಂದು ಲಿಂಗಾಯತ ಧರ್ಮದಲ್ಲಿ ಕೂಡಿದರು. ಕಾಯಕ ಪ್ರಧಾನ ಸಮಾನತೆಯ ತಳಹದಿಯಲ್ಲಿ ನಿಂತ ಲಿಂಗಾಯತ ಧರ್ಮವನ್ನು ಯಾರೂ ಅಲುಗಾಡಿಸಲಾಗದು.

ಲಿಂಗಾಯತರದ್ದು ಗುಡಿ ಸಂಸ್ಕೃತಿ ಅಲ್ಲ. ಒಬ್ಬ ಲಿಂಗಾಯತ ವರ್ಷದಲ್ಲಿ ಗುಡಿ-ಗುಂಡಾರಗಳು ಸುತ್ತುವದು ಬಿಟ್ರೆ ಸಾಕು ಲಕ್ಷ-ಲಕ್ಷಗಳಷ್ಟು ಹಣ ಉಳಿತಾಯವಾಗುತ್ತದೆ. ಧರ್ಮಿಯರು ಶರಣರ ವಚನಗಳು ಓದಿ ಸುಂದರವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮರಾಠಿಯಲ್ಲಿ, ಶರಣ ಸಾಹಿತಿ, ಪತ್ರಕರ್ತ ಚನ್ನವೀರ ಭದ್ರೇಶ್ವರಮಠರು ಮಾತನಾಡಿ, ನಮಗೆ ಬಸವಣ್ಣನವರು ಪೂಜ್ಯರಾಗಿದ್ದು ಅವರು ತೋರಿಸಿಕೊಟ್ಟ ದಾರಿಯಲ್ಲಿ ಇಂದು ಲಿಂಗಾಯತರು ನಡೆದು ಒಗ್ಗಟ್ಟಾಗಿದ್ದಾಗ ಮಾತ್ರ ಅವರು ನಿಜ ಲಿಂಗಾಯತರೆನಿಸಿ ಕೊಳ್ಳುತ್ತಾರೆ ಎಂದರು.
ಸಾನಿಧ್ಯ ವಹಿಸಿದ್ದ ಆಳಂದ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಶ್ರೀಗಳು ಮಹಾರಾಷ್ಟ್ರದ ಕೇಂದ್ರಬಿಂದು ಆಗಿರುವ ಸೊಲ್ಲಾಪುರದಲ್ಲಿ ಜಾಲಿಂಮದ ಮೂಲಕ ನಿರಂತರವಾಗಿ ಕಾರ್ಯಕ್ರಮಗಳು ನಡೆದಿದ್ದು, ಸೊಲ್ಲಾಪುರ ಘಟಕ ವಿಜಯಕುಮಾರ ಹತ್ತುರೆ ಮತ್ತು ಅಧ್ಯಕ್ಷ ಶಿವಾನಂದ ಗೋಗಾವರ ನೇತೃತ್ವದಲ್ಲಿ ಘಟಕ ಉತ್ತಮವಾಗಿ ಕಾರ್ಯ ಮಾಡುತ್ತಿದೆ.
ಸರಕಾರ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಲಿ ಬಿಡಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿದ್ದು ಕರ್ನಾಟಕದ ಜನಗಣತಿ ಮತ್ತು ಮುಂಬರುವ ಕೇಂಧ್ರದ ಜನಸಂಖ್ಯಾ ಗಣತಿಯಲ್ಲಿ ಲಿಂಗಾಯತ ಧರ್ಮವೆಂದೇ ಬರೆಸಬೇಕೆಂದು ಕರೆ ನೀಡಿದರು.

ಸೊಲ್ಲಾಪುರದ ಸರಕಾರಿ ಪ್ರಥಮ ದರ್ಜೆ ಗುತ್ತಿಗೆದಾರ ಪರಮಾನಂದ ಅಲಗೊಂಡ ಪಾಟೀಲರು, ಬಸವಣ್ಣ ಮತ್ತು ಸಿದ್ಧರಾಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸಾಗರ ಸಿಮೇಂಟ್‌ನ ಮಹಾರಾಷ್ಟ್ರ-ಗೋವಾ ರಾಜ್ಯಗಳ ವ್ಯವಸ್ಥಾಪಕ ಎಮ್.ಕೆ. ಫೌಂಡೇಶನ್ ಸಂಸ್ಥಾಪಕ ಮಹಾದೇವ ಕೋಗನೂರೆಯವರು ಅಧ್ಯಕ್ಷತೆ ವಹಿಸಿದ್ದರು.
ಜಾಲಿಂಮದ ಮಹಾರಾಷ್ಟ್ರ ರಾಜ್ಯ ಪ್ರಭಾರಿ ಪ್ರಭುಲಿಂಗ ಮಹಾಗಾವಕರ, ಕಾರ್ಯಾಧ್ಯಕ್ಷ ವಿಜಯಕುಮಾರ ಹತ್ತುರೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಮುಲಗೆ, ಜಿಲ್ಲಾಧ್ಯಕ್ಷ ಶಿವಾನಂದ ಗೋಗಾವ, ಮಹಿಳಾ ಘಟಕದ ಅಧ್ಯಕ್ಷೆ ರಾಜಶ್ರೀ ಥಳಂಗೆ, ಸೊಲ್ಲಾಪುರ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಖಸಗಿ, ಅಧ್ಯಕ್ಷೆ ಅಂಜಲಿ ಶಿರಸಿ, ಸಿಂಧುತಾಯಿ ಕಾಡಾದಿ, ಯುವ ಘಟಕದ ಬಸವರಾಜ ದಿಂಡೂರೆ, ವಿರೇಂದ್ರ ಹಿಂಗಮಿರೆ, ಕಾರ್ಯದರ್ಶಿ ಶಿವಾನಂದ ಮಗೆ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಘಟಕಗಳಿಗೆ ಪದಾಧಿಕಾರಿಗಳು ನೇಮಕ ಮಾಡಿ ನೇಮಕಾತಿ ಪತ್ರ ನೀಡಲಾಯಿತು.
ಜಾಲಿಂಮದ ಖಜಾಂಚಿ ರಾಜೇಂದ್ರ ಹೌದೆ, ಜುಳೆ ಸೊಲ್ಲಾಪುರ ಅಧ್ಯಕ್ಷ ಚನ್ನಬಸಪ್ಪ ಗುರುಭೆಟ್ಟಿ, ಮೀನಾಕ್ಷಿ ಬಾಗಲಕೋಟೆ, ಬಸವರಾಜ ಲೋಹಾರ, ವಿಜಯ ಭಾವೆ, ಜಗದೀಶ ಕುಲಕರ್ಣಿ, ಶಿವಶಂಕರ ಢವಣ, ಅಕ್ಕಲಕೋಟ ಅಧ್ಯಕ್ಷ ಸಚಿನ ಕಾಲಿಬತ್ತಿ, ಶಿವರಾಜ ಕೊಟಗಿ, ಅಮೋಲಮ್ಮ ಮಣೆ, ಡಾ. ಬಸವರಾಜ ನಂದರಗಿ, ಡಾ. ಭೀಮಾಶಂಕರ ಸಿಂದಗಿ, ಲಕ್ಷ್ಮಣ ಚಲಗೇರಿ, ಮಲ್ಲಿಕಾರ್ಜುನ ಮಣೂರೆ, ನಾಗೇಶ ಪಾಟೀಲ, ಭೀಮಾಶಂಕರ ವಾಲೆ, ಮಂಜುನಾಥ ಚಿಂಚೊಳಿ, ಅಂಬಣ್ಣ ಮಡಸನಾಳೆ ಸೇರಿದಂತೆ ಹಲವರು ಇದ್ದರು.