ಸಮಾಜದಲ್ಲಿ ಬಸವ ಪ್ರಜ್ಞೆ ಜಾಗೃತಿಗೊಂಡಂತೆ ಪಂಚಪೀಠಗಳ ಪ್ರಭಾವ ಕ್ಷೀಣಿಸುತ್ತಿದೆ.
ವಿಜಯಪುರ
೧೫-೧೬ನೇ ಶತಮಾನದಲ್ಲಿ ವಿಜಯನಗರದ ಪ್ರೌಢದೇವರಾಯನ ಆಳ್ವಿಕೆಯ ಕಾಲದಲ್ಲಿ ಬಹುಸಂಖ್ಯೆಯಲ್ಲಿ ಆಂಧ್ರದಿಂದ ವಲಸೆ ಬಂದ ಆರಾಧ್ಯ ಬ್ರಾಹ್ಮಣರು ಲಿಂಗಾಯತರೊಳಗೆ ಸೇರಿಕೊಂಡರು.
ವಿರಕ್ತ ಪರಂಪರೆಯ ಜೊತೆಗೆ ಪ್ರತಿಸ್ಪರ್ಧಿಸಿ ಇವರು ಶೈವಮೂಲದ ಮಠೀಯ ವ್ಯವಸ್ಥೆ ರೂಢಿಸಿಕೊಂಡರು. ಈ ಪಂಚಪೀಠಗಳ ಹಿನ್ನೆಲೆˌ ಹೇಗೆ ಹುಟ್ಟಿಕೊಂಡವು ಎನ್ನುವ ಕುರಿತು ಸಾಕಷ್ಟು ಸಂಶೋಧನೆಗಳಾಗಿವೆ.
ಹನ್ನೆರಡನೇ ಶತಮಾನದ ಬಸವಣ್ಣನವರ ಸಮಕಾಲೀನರಾಗಿದ್ದ ಹಾಗೂ ಬಸವಣ್ಣನವರನ್ನು ಗುರುವೆಂದು ಸ್ವೀಕರಿಸಿದ ನಾಲ್ಕು ಜನ ಶರಣರ ಹೆಸರುಗಳಿಗೆ ಆಚಾರ್ಯ ಪದ ಸೇರಿಸಿ ಅವರ ಹೆಸರಿನಲ್ಲಿ ನಾಲ್ಕು ಪೀಠ ಸ್ಥಾಪಿಸಿಕೊಂಡರು. ನಂತರ ವಿಶ್ವಾರಾಧ್ಯ ಎಂಬ ಇನ್ನೊಬ್ಬ ಕಾಲ್ಪನಿಕ ಆಚಾರ್ಯನನ್ನು ಸೃಷ್ಟಿಸಿ ಪಂಚಪೀಠಗಳನ್ನು ಕಟ್ಟಿದರು.
ಅನಾಮಿಕ ವ್ಯಕ್ತಿಯ ಹೆಸರಿನಲ್ಲಿ ಸಂಸ್ಕೃತದಲ್ಲಿ ಶಿವಾಗಮಗಳ ಸಾರವನ್ನು ಭಟ್ಟೀ ಇಳಿಸಿ ಸಿದ್ಧಾಂತ ಶಿಖಾಮಣಿ ಎಂಬ ಖೊಟ್ಟಿ ಗ್ರಂಥವನ್ನು ರಚಿಸಿಕೊಂಡರು. ಇವುಗಳೆಲ್ಲ ಹಿರಿಯರಾದ ಸಾಖರೆ ಅವರಿಂದ ಹಿಡಿದು ಡಾ. ಎಂ. ಎಂ. ಕಲಬುರಗಿಯವರವರೆಗೆ ಎಲ್ಲಾ ವಿದ್ವಾಂಸರು ಬಯಲುಗೊಳಿಸಿದ್ದಾರೆ.
ಹಿಂದೂಗಳೋ? ವೀರಶೈವರೋ?
ಬೌದ್ದˌ ಜೈನ ಹಾಗೂ ಸಿಖ್ ಧರ್ಮದೊಳಗಿನ ಪಂಗಡಗಳು ಏನೇ ಭಿನ್ನಾಭಿಪ್ರಾಯಗಳು ಇದ್ದರೂ ತಾವು ಹಿಂದೂಗಳು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಆದರೆ ಲಿಂಗಾಯತದೊಳಗಿನ ವೀರಶೈವ ಪಂಗಡವು ತಾವು ಹಿಂದೂಗಳೆಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಲಿಂಗಾಯತ ಧರ್ಮವನ್ನು ವೈದಿಕ ಹಾಗೂ ಆಗಮಿಕ ತತ್ವಗಳಿಂದ ಕುಲಗೆಡಿಸಿದ್ದಾರೆ.
ಸೋಜಿಗದ ಸಂಗತಿ ಏನೆಂದರೆ ಇವರು ತಮ್ಮದು ವೀರಶೈವ ಧರ್ಮ ಎನ್ನುವುದನ್ನೂ ಬಿಡುವುದಿಲ್ಲ. ಈ ಪಂಚಪೀಠಗಳ ಭಕ್ತರು ತಾವು ಹಿಂದೂಗಳೊ ಅಥವಾ ವೀರಶೈವರೊ ಎನ್ನುವ ಗೊಂದಲದಲ್ಲಿದ್ದಾರೆ.
ಬಸವಣ್ಣನವರನ್ನು ಒಪ್ಪದವರು
ಮೇಲಾಗಿ ಲಿಂಗಾಯತ ಶಬ್ದವನ್ನು ಸಹ ತಮ್ಮ ಅನುಕೂಲಕ್ಕೆ ಬಳಸಿಕೊಂಡರೂ ಈ ಪಂಚಪೀಠಗಳು ಬಸವಣ್ಣನವರ ಭಾವಚಿತ್ರ ಇರುವ ಸಾಮುದಾಯಿಕ ಹಾಗೂ ಖಾಸಗಿ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುತ್ತವೆ.
ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದ್ದಾರೆ ಎಂದು ಸುಳ್ಳು ಹೇಳುವ ಈ ಪಂಚಪೀಠದವರು ಬಸವಣ್ಣನವರನ್ನು ದ್ವೇಷಿಸುತ್ತಿರುವುದೇತಕೆ ಎಂದು ಎಲ್ಲೂ ಸ್ಪಷ್ಟಪಡಿಸಿಲ್ಲ.
ಅಸಲಿಗೆ ಈ ಪಂಚಪೀಠಗಳ ಮುಖ್ಯಸ್ಥರಾಗಿರುವ ಐದು ಜನ ಜಾತಿ ಜಂಗಮರು ಯಾರು ಎನ್ನುವ ಗೊಂದಲ ಲಿಂಗಾಯತ ಸಮಾಜದಲ್ಲಿ ಮೂಡಿದೆ.
ಇವರು ತಮ್ಮನ್ನು ತಾವು ಜಗದ್ಗುರುಗಳುˌ ಆಚಾರ್ಯರು ಎಂದು ಕರೆದುಕೊಳ್ಳುತ್ತಾರೆ. ಆದರೆ ಕೇದಾರ ಪೀಠದ ಮುಖ್ಯಸ್ಥರನ್ನು “ಪ್ರಧಾನ ರಾವಲ್” ಎಂದು ಕರೆಯಲಾಗುತ್ತದೆ. ರಾವಲ್ ಎಂದರೆ ಅರ್ಚಕ ಎಂದರ್ಥ. ಅಂದರೆ ಕೇದಾರ ಪೀಠದ ಮುಖ್ಯಸ್ಥ ಅಲ್ಲಿನ ದೇವಾಲಯದ ಪ್ರಧಾನ ಅರ್ಚಕ. ಇವರು ಕರ್ನಾಟಕಕ್ಕೆ ಬಂದಾಗ ಜಗದ್ಗುರು ಆಗುವುದು ಸೋಜಿಗದ ಸಂಗತಿ.
ಧರ್ಮ ಒಡೆಯುವುದು
ಧರ್ಮ ಒಡೆಯುತ್ತಿದ್ದಾರೆಂದು ಇವರು ಲಿಂಗಾಯತರನ್ನು ದೂಷಿಸುತ್ತಾರೆ. ಆದರೆ ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಈ ಪಂಚಪೀಠಗಳು.
ಮೊದಲನೇಯದಾಗಿ ಇವರು ಲಿಂಗಾಯತ ಧರ್ಮದಲ್ಲಿ ಚಾತುರ್ವರ್ಣ ವ್ಯವಸ್ಥೆ ಮತ್ತು ಗೋತ್ರ ಪದ್ದತಿಯನ್ನು ಅಳವಡಿಸಿದರು. ಆ ಮೂಲಕ ಲಿಂಗಾಯತ ಧರ್ಮದ ಮೂಲ ಆಶಯವಾದ ಸಮಾನತೆಯನ್ನು ನಾಶಗೊಳಿಸಿದರು. ಲಿಂಗಾಯತರಲ್ಲಿ ಜಂಗಮರೇ ಶ್ರೇಷ್ಠರು ಎನ್ನುವ ತಾರತಮ್ಯ ಹುಟ್ಟುಹಾಕುವ ಮೂಲಕ ಲಿಂಗಾಯತ ಧರ್ಮವನ್ನು ಒಡೆದರು.
ಎರಡನೇಯದಾಗಿ ವಿರಕ್ತ ಪರಂಪರೆಯನ್ನೂ ಒಳಗೊಂಡಂತೆ ಲಿಂಗಾಯತ ಮಠಗಳಿಗೆ ಜಂಗಮೇತರರು ಮುಖ್ಯಸ್ಥರಾಗುವುದನ್ನು ಈ ಪಂಚಪೀಠಗಳು ಮೊದಲಿನಿಂದ ವಿರೋಧಿಸಿಕೊಂಡು ಬರುವ ಮೂಲಕ ಧರ್ಮದಲ್ಲಿ ಬಿರುಕನ್ನು ಮೂಡಿಸಿದವು.
ಮೂರನೇಯದಾಗಿˌ ಲಿಂಗಾಯತ ಜಂಗಮರಿಗೆ ಬೇಡ ಜಂಗಮ ಪರಿಶಿಷ್ಟರ ಮೀಸಲಾತಿಗಾಗಿ ಅಂದಿನ ಪ್ರಧಾನಿ ವಾಜಪೇಯಿಯವರಿಗೆ ಪತ್ರ ಬರೆಯುವ ಮೂಲಕ ಈ ಪಂಚಪೀಠಗಳು ಲಿಂಗಾಯತ ಧರ್ಮವನ್ನು ಇನ್ನಿಲ್ಲದಂತೆ ಒಡೆದರು.
ಲಿಂಗಾಯತರು ಅಲ್ಪಸಂಖ್ಯಾತರ ಸೌಲಭ್ಯದ ಬೇಡಿಕೆ ಇಟ್ಟಾಗಲೆಲ್ಲ ಧರ್ಮ ಒಡೆದರು ಎಂದು ಬೊಬ್ಬೆಹಾಕುವ ಈ ಪಂಚಪೀಠದ ಜಾತಿ ಜಂಗಮರು ಬೇಡ ಜಂಗಮ ಪರಿಶಿಷ್ಟರ ಬೇಡಿಕೆಯನ್ನು ಖಂಡಿಸುವುದಿಲ್ಲ ಬದಲಾಗಿ ಆಂತರಿಕವಾಗಿ ಬೆಂಬಲಿಸುತ್ತಾರೆ.
ಕ್ಷೀಣಿಸುತ್ತಿರುವ ಪ್ರಭಾವ
ಸಮಾಜದಲ್ಲಿ ಬಸವ ಪ್ರಜ್ಞೆ ಜಾಗೃತಿಗೊಂಡಂತೆ ಇವರ ಪ್ರಭಾವ ಕ್ಷೀಣಿಸುತ್ತಿದೆ.
೧೯೮೦ರ ವರೆಗೆ ಲಿಂಗಾಯತ ಸಮಾಜದ ಮೇಲೆ ವೀರಶೈವ ಪಂಚಪೀಠಗಳು ಹೊಂದಿದ್ದ ಹಿಡಿತವು ಕ್ರಮೇಣ ಸಡಿಲಗೊಂಡಿದೆ. ಬಸವಾದಿ ಶರಣರ ಸಾಮಾಜಿಕ ಆಂದೋಲನದ ಉತ್ಪನ್ನವೇ ಲಿಂಗಾಯತ ಧರ್ಮ ಎನ್ನುವ ಸಂಗತಿ ಹೆಚ್ಚು ಹೆಚ್ಚು ಜನಪ್ರೀಯವಾಗುತ್ತಿದೆ.
ಮೊದಲು ಪಂಚಪೀಠದ ಆಚಾರ್ಯರನ್ನು ಭಕ್ತರ ಮನೆಗೆ ಪಾದಪೂಜೆಗೆ ಕರೆಸಲು ಬೆಲೆ ಬಾಳುವ ಕಾಣಿಕೆ ನೀಡಿ ಬಹಳಷ್ಟು ಗೋಗರೆಯಬೇಕಿತ್ತು. ಲಿಂಗಾಯತರಲ್ಲಿ ಬಸವಪ್ರಜ್ಞೆ ಜಾಗೃತಗೊಳ್ಳುತ್ತಿದ್ದಂತೆ ಇವರ ಆಟವೂ ನಿಲ್ಲತೊಡಗಿತು.
ಈಗ ಇವರು ತಾವೇ ಭಕ್ತರ ಮನೆಗೆ ಬರುವ ಪರಿಸ್ಥಿತಿ ಬಂದೊದಗಿದೆ. ಅಡ್ಡಪಲ್ಲಕ್ಕಿ ಉತ್ಸವಗಳ ಹಾವಳಿ ಕ್ರಮೇಣ ನಿಲ್ಲುತ್ತಿದೆ. ಇದರಿಂದ ಇವರು ಭಯಭೀತರಾಗಿದ್ದಾರೆ. ಬಸವಣ್ಣˌ ಶರಣರುˌ ಲಿಂಗಾಯತ ಎನ್ನುವ ಶಬ್ದ ಕಿವಿಗೆ ಬಿದ್ದರೆ ಸಾಕು ಆತಂಕದಿಂದ ಬಡಬಡಿಸುತ್ತಾರೆ.
ಲಿಂಗಾಯತಕ್ಕೆ ವೀರಶೈವ ಎನ್ನುವ ಪದವು ಮಗ್ಗಲು ಮುಳ್ಳು ಎನ್ನುವ ಪ್ರಜ್ಞೆ ಈಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿಯುತ್ತಿದೆ. ವೀರಶೈವ ಮಹಾಸಭಾ ಕೂಡ ಈಗ ಸರಿಯಾದ ಹಾದಿಯಲ್ಲಿ ನಡೆಯಲು ಪ್ರಯತ್ನಿಸುತ್ತಿದೆ. ಸಾವಕಾಶವಾಗಿ ಈ ಪಂಚಪೀಠದವರನ್ನು ಪಕ್ಕಕ್ಕೆ ಸರಿಸುತ್ತಿದೆ ಎನ್ನುವ ಆತಂಕ ಅವರಲ್ಲಿ ಆರಂಭಗೊಂಡಿದೆ.
ಪಂಚಪೀಠಗಳ ಜಾತಿ ಜಂಗಮರ ಪ್ರತಿಪಾದನೆಗೆ ವಿರೋಧವಾಗಿ ಮಹಾಸಭಾ ಲಿಂಗಾಯತರು ಹಿಂದೂಗಳಲ್ಲ ಎನ್ನುವ ನಿರ್ಣಯ ಕೈಕೊಂಡಿದ್ದು ಇವರ ಅಸ್ತಿತ್ವವನ್ನೆ ಅಲುಗಾಡಿಸಿದೆ. ಕಳೆದ ವರ್ಷ ದಾವಣಗೆಯ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧಿವೇಶನದಿಂದ ರಂಭಾಪುರಿ ಸ್ವಾಮಿ ದೂರ ಉಳಿದದ್ದು ಅದೇ ಕಾರಣದಿಂದ.
ಮೊನ್ನೆ ವಚನ ದರ್ಶನ: ಮಿಥ್ಯ Vs ಸತ್ಯˌ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲಿಂಗಾಯತ ಹಾಗೂ ವೀರಶೈವ ಮಹಾಸಭಾಗಳು ಒಂದಾಗಿದ್ದು ಈ ಪಂಚಪೀಠದ ಜಾತಿ ಜಂಗಮರನ್ನು ಇನ್ನಷ್ಟು ಆತಂಕಕ್ಕೆ ದೂಡಿದಂತೂ ಸತ್ಯ. ಅದಕ್ಕೆ ಸಾಕ್ಷಿ ಮೊನ್ನೆ ರಂಭಾಪುರಿ ಮತ್ತು ಕೇದಾರದ ಪ್ರಧಾನ ಅರ್ಚಕರು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆ.
ವೀರಶೈವ ಪಂಚಪೀಠದ ಎಲ್ಲಾ ಅನುಯಾಯಿ ವೀರಶೈವರು ಮುಂದಿನ ದಿನಗಳಲ್ಲಿ ಲಿಂಗಾಯತದೊಳಗೆ ಇರಬೇಕಾದರೆ ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿ ತಾವು ಲಿಂಗಾಯತ ಧರ್ಮದ ಸೇವಕರಾದ ಶರಣ ಜಂಗಮರು ಹಾಗೂ ಈ ಧರ್ಮದ ಪ್ರಚಾರಕರು ಎನ್ನುವುದನ್ನು ಮನಗಂಡು ಬದುಕುವುದು ಅನಿವಾರ್ಯವಾಗಿದೆ.
ಅಭಿನಂದನೆಗಳು. ಬಸವೇಶ್ವರರು ಈ ನಾಡಿನ ಆಸ್ತಿ. ಅವರ ಕಾಲದಲ್ಲಿ ವೀರಶೈವ ಲಿಂಗಾಯತ ಭೇದ ವಿದ್ದಿಲ್ಲ. ಎಲ್ಲರೂ ಅವರ ಭಕ್ತರು.ಯಾವುದೂ ಅತಿರೇಕ ವಾಗಬಾರದೆನ್ನುವುದೇ ಎಲ್ಲರ ಭಾವನೆ. ಈ ಧರ್ಮ ಯಾರೊಬ್ಬರ ಸ್ವತ್ತೂ ಅಲ್ಲ, ಮುನ್ನೆಲೆಗೆ ಬಂದಾಕ್ಷಣ ನಿಮ್ಮ ಚಿಂತನೆಯನ್ನು ಎಲ್ಲರೂ ಒಪ್ಪುತ್ತಾರೆ ಎಂಬ ಭ್ರಮೆ ಬೇಡ. ತಟಸ್ಥ ಜನರು ಇನ್ನು ಹೆಚ್ಚು ಇದ್ದಾರೆ.ಕಾರಣ ಈ ಒಳ ಜಗಳದ ಲಾಭ ಬೇರೆಯವರಿಗೆ.
ನನ್ನಂಥವರಿಗೆ ಇದು ನನ್ನ ಜನರ ಮೇಲೆ ಆದ ದಬ್ಬಾಳಿಕೆ. ಮತೀಯ ಮತ್ತನ್ನು ಕುಡಿಸಿದ್ದಾರೆ.
ಎಲ್ಲ ಲಿಂಗಾಯತರು ಓದಲೇಬೇಕಾದ ಲೇಖನ… ಹರಿತವಾದ, ನಿಖರವಾದ, ಸತ್ಯ ಬರವಣಿಗೆ. 👌
Because of Basavanna awareness, I am confuses of my existence only. We have been grown up doing puja, visiting temples etc. Noone initiated us for Istalinga dharane. As a result I have idol worship practice followed currently. How should we undo it all?
Actually Veerashaiva way of Puja is correct way of Puja. Idol worship is the best and correct way of Puja to worship Lord Shiva. Linga in any form should not be worn on the body. Only Rudrakshi has to be worn on the body while performing Idol worship of Lord Mahadev and then should be removed after Puja.