ಬೀದರ್
ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಶ್ರೀಕಾಂತ ಸ್ವಾಮಿ ಅವರ ಪ್ರತಿಕ್ರಿಯೆ.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿದ ಮೇಲೆ ಮೂಲಭೂತವಾದಿಗಳು, ಕೋಮುವಾದಿಗಳು, ಮನುವಾದಿಗಳು, ಪುರೋಹಿತಶಾಹಿಗಳಿಗೆ ಆಘಾತ ಆಗಿದೆ. ಅವರ ಪಾತಾಳ ಅಲುಗಾಡಿದ ಹಾಗೆ ಆಗಿ, ದಿಕ್ಕುತೋಚದ ಸ್ಥಿತಿಗೆ ಒಳಗಾಗಿದ್ದಾರೆ.
ವಚನ ದರ್ಶನ ಆರೆಸ್ಸೆಸ್ ಪೋಷಿತ ಕಲುಷಿತ ಮನಸ್ಸಿನ ಲೇಖಕರು ಬರೆದ ಸಮಾಜ ವಿರೋಧಿ ಕಳಪೆ ಪುಸ್ತಕ ಪ್ರಕಟ ಮಾಡಿ ಲಿಂಗಾಯತರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ.
ಏನಾದರೂ ಮಾಡಿ ಬಸವ ತತ್ವಸಿದ್ದಾಂತ ಹಾಳು ಮಾಡಿ ಮೂರು ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಲಿಂಗಾಯತರನ್ನು ದಾರಿ ತಪ್ಪಿಸುವ ಆಟ ಪ್ರಾರಂಭ ಆಗಿದೆ.
ಈಗಾಗಲೇ ಲಿಂಗಾಯತ ಮಠಾಧಿಪತಿಗಳನ್ನು ರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನಿಸಿ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಅದೇ ತರಹ ವಕ್ಫ್ ಆಸ್ತಿ ಗೊಂದಲದಲ್ಲಿ ಮಠಾಧಿಪತಿಗಳನ್ನು ಆರೆಸ್ಸೆಸ್ ಗೆ ಎಳೆದು ತಂದು ಬಿಜೆಪಿ ಪಕ್ಷದ ರಾಜಕೀಯ ಹೋರಾಟದಲ್ಲಿ ತೊಡಗಿಸಿದ್ದು, ಇವಾಗ ಆರೆಸ್ಸೆಸ್ ಸಭೆಯಲ್ಲಿ ಲಿಂಗಾಯತ ಮಠಾಧಿಪತಿಗಳು ಮತ್ತು ಲಿಂಗಾಯತರನ್ನು ಉತ್ತರಪ್ರದೇಶದ ಪ್ರಯಾಗರಾಜ್ (ಅಲ್ಲಾಹಬಾದ) ಕುಂಭಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವ ಹಾಗೆ ಎಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ.
ಅದರಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಯೋಗಿ ಆದಿತ್ಯನಾಥ್ ಅವರು ವಿಮಾನ, ಟ್ರೈನ್ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.
ಬಸವಾದಿ ಶರಣರ ಮತ್ತು ಲಿಂಗಾಯತ ಧರ್ಮದ್ದು ಕುಂಭಮೇಳ ಪರಂಪರೆ ಅಲ್ಲ ಎನ್ನುವುದನ್ನು ಎಲ್ಲರೂ ಗಮನಿಸಬೇಕು:
ಬಸವಣ್ಣ
ಲಿಂಗ ಜಂಗಮ ಒಂದೆ ಎಂದು ನಂಬಿದ ಬಳಿಕ
ಅವರಂಗನೆಯರು ಲಿಂಗದ ರಾಣಿವಾಸ.
ಅಲ್ಲಿಯೂ ಮೇಳ, ಇಲ್ಲಿಯೂ ಮೇಳ,
ಚೌಡೇಶ್ವರಿಯಲ್ಲಿಯೂ ಮೇಳವೇ
ಮೊಲೆಯುಂಬ ಭಾವ ತಪ್ಪಿ ಅಪ್ಪಿದವರ
ತಲೆಯ ಕೊಂಬ ಕೂಡಲಸಂಗಮದೇವ
ಸಿದ್ಧರಾಮೇಶ್ವರ
ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲ ;
ಗುರುವಿನ ಗದ್ದುಗೆ ಬೇಕಿಲ್ಲ ;
ಗಣಸಮ್ಮೇಳನದ ಪೂಜೆ ಮೊದಲೆ ಬೇಕಿಲ್ಲ ;
ಕಪಿಲಸಿದ್ಧಮಲ್ಲಿಕಾರ್ಜುನಂಗೆ ನಿನಗೆ ಭೇದವಿಲ್ಲೆಂಬುವುದು
ಈಗಳೆ ಬೇಕಿಲ್ಲ, ಕೇಳಾ ಪ್ರಭುವೆ
ಅಲ್ಲಮಪ್ರಭುದೇವರು
ಬಲ್ಲ ಹಿರಿಯರೆನಿಸಿಕೊಂಡು ಎಲ್ಲರನು ಕೂಡಿಕೊಂಡು
ಹಳ್ಳಿ ಹಿರಿಯರು ಪಟ್ಟಣದಲ್ಲಿ ತಿರಿದುಂಡು
ಅಲ್ಲದಾಟವನಾಡಿದಡೆ ತಮ್ಮ ಬಲ್ಲತನಕ್ಕೆ ಭಂಗವಾಯಿತ್ತು.
ಅಶನ, ವ್ಯಸನ, ಹಸಿವು, ತೃಷೆ, ನಿದ್ರೆ ಇಚ್ಛೆಗೆ
ಹರಿದಾಡುವರೆಲ್ಲ ಇನ್ನು ಬಲ್ಲರೆ ಹೇಳಿರೆ !
ಅನಂತ ಮೇಳಾಪದಚ್ಚಗೋಷಿ*ಯ
ಭಂಡರೆಲ್ಲ ಇನ್ನು ಬಲ್ಲರೆ, ಹೇಳಿರೆ !
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಚ್ಛೆಗೆ
ಹರಿದಾಡುವ ಹಂದಿಗಳೆಲ್ಲ
ನಾಯನೊಡನಾಡಿದ ಕಂದನಂತಾಯಿತ್ತು ಗುಹೇಶ್ವರಾ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಅಯ್ಯಾ, ಸೂಳೆಗೆ ಹುಟ್ಟಿದ ಮಕ್ಕಳಿಗೆ,
ಕೊಟ್ಟವರೊಳು ಸಮ್ಮೇಳ, ಕೊಡದವರೊಳು ಕ್ರೋಧ.
ವ್ರತಹೀನರೊಳು ಮೇಳ, ವ್ರತನಾಯಕರೊಳು ಅಮೇಳ.
ಸುಡು ಸುಡು ! ಅವರ ಕೂಡಿದಡೆ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ
ಇವನ್ನು ನಮ್ಮ ಲಿಂಗಾಯತ ಪೂಜ್ಯ ಮಠಾಧಿಪತಿಗಳು, ಸ್ವಾಮಿಗಳು ಅರ್ಥ ಮಾಡಿಕೊಂಡು ಬಸವ ವಿರೋಧಿ ಸಂಘಟನೆಗಳಾದ ಆರೆಸ್ಸೆಸ್ , ಹಿಂದತ್ವವಾದಿ ಸಂಘಟನೆಗಳ ಮಾತಿಗೆ ಮರುಳಾಗದೆ ಕುಂಭಮೇಳ ಬಹಿಷ್ಕರಿಸಬೇಕು ಮತ್ತೆ ಲಿಂಗಾಯತರಿಗೆ ಕುಂಭಮೇಳಕ್ಕೆ ಹೋಗಬಾರದೆಂದು ಆಹ್ವಾನ ಮಾಡಬೇಕು.
ಮತ್ತಷ್ಟು ಓದು
RSS ಗೆ ದಿಕ್ಕಾರ
!!ಗುರ ಬಸವಲಿಂಗ ಶರಣ!!
[ಅ.ಸ.ಷ.]
🌹🌹🌹🌹🌹🌹🌹🌹
ಶರಣ ಬಂಧುಗಳೇ,
ಬಸವಾದಿ ಶರಣ ಪರಂಪರೆಯ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದಲ್ಲಿ ನಿರಾಕಾರ ದೇವನಾಗಲಿ ಯಾ ಆಕಾರ ದೇವನಾಗರಿ ಇಲ್ಲವಾದುದರಿಂದ ಯಾತ್ರೆಯಿದೆಯೆ ಹೊರತು ತೀರ್ಥಯಾತ್ರೆಯಿಲ್ಲ, ತಾನೆ ದೈವತ್ವವನ್ನು ಪಡೆದು ದೇವನಾಗುವ ಕಲೆಯನ್ನು ತಾನೆ ಕರಲಿಂಗನಿಷ್ಟೆಯಿಂದ ಕರಗತ ಮಾಡಿಕೊಳ್ಳಬೇಕೆ ವಿನಹಾ ದೇವರು ಅಂತರಂಗದಲ್ಲಿ ಯಾ ಬಹಿರಂಗದಲ್ಲಿ ಸೃಷ್ಟಿಸಿ ಅವುಗಳಿಗೆ ಅಡ್ಡ ಯಾ ಉದ್ದ ಯಾ ಕುಳಿತು ಹಣೆ ಹಚ್ಚುವುದಲ್ಲ, ಶರಣಾರ್ಥಿ.
ಯಿಂದ
ಪೀಠಾಧಿಪತಿ,
ಅಲ್ಲಮಪ್ರಭು ಅನುಭಾವ ಪೀಠ
ಪಶ್ಚಿಮ ಕರಾವಳಿ ಭಾರತ ದೇಶ
ದೂರ!! ೮೪೩೧೯೩೯೩೮೦
😀😀😀
🙏🌹ಓಂ ಶ್ರೀಗುರುಬಸವ ಲಿಂಗಾಯ ನಮಃ🌹🙏
ಜಂಬೂದ್ವೀಪವನೆಲ್ಲ ತಿರುಗಿದಡೇನು.
ಜಂಬುಕ ಶಂಭುಧ್ಯಾನದಲ್ಲಿ ಸೈವೆರಾಗಪ್ಪುದೆ ?
ಕುಂಭಿನಿಯ ತಿರುಗಿ ಕೋಟಿತೀರ್ಥವ ಮಿಂದಡೇನು ?
ಶಂಭು ! ನಿಮ್ಮಲ್ಲಿ ಸ್ವಯವಾಗದವನು
ಕುಂಭಿನಿಯ ತಿರುಗಿದಡೊಂಬನಂತೆ ಕಾಣಾ! ರಾಮನಾಥ.