ಹಿಂದೂ ಹೆಸರಿನಲ್ಲಿ ಲಿಂಗಾಯತರು ಹರಿದು ಹಂಚಿಹೋಗುವುದು ಹೆಚ್ಚಾಗುತ್ತದೆ
1. ಲಿಂಗಾಯತದ ಎಲ್ಲ 101 ಉಪಪಂಗಡದವರೇ ಶೇ. 80% ಕ್ಕೂ ಹೆಚ್ಚಿದ್ದಾರೆ. ಇವರೆಲ್ಲ ಮೀಸಲಾತಿ ಸೌಲಭ್ಯಕ್ಕಾಗಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರು ಲಿಂಗಾಯತರಾಗಿ ಗುರುತಿಸುವಂತೆ ಅಗತ್ಯ ಪ್ರಯತ್ನಗಳನ್ನು ಜಾರಿ ಮಾಡಬೇಕು.
2. ಲಿಂಗಾಯತದ ಎಲ್ಲ 101 ಉಪಪಂಗಡದವರಲ್ಲಿ ಮುಂದುವರೆದ 4-5 ಪಂಗಡದವರನ್ನು ಬಿಟ್ಟರೆ, ಉಳಿದ ಯಾರಲ್ಲೂ ತಾವು “ಲಿಂಗಾಯತ” ಮನಸ್ಥಿತಿಯೇ ಇಲ್ಲ. ಲಿಂಗಾಯತರೆಂದು ಹೇಳಿಕೊಳ್ಳುವುದೇ ಇಲ್ಲ. ಇದಕ್ಕೆ ಲಿಂಗಾಯತದ ತಿಳುವಳಿಕೆ ಕೊರತೆಯೇ ಕಾರಣ. ಇದಕ್ಕೆ ಬೃಹತ್ ಪ್ರಮಾಣದ ಪ್ರಯತ್ನ ಆಗಬೇಕು. ” ಲಿಂಗಾಯತ ತತ್ವದ ಅರಿವು ನೀಡುವ ದೊಡ್ಡ ಆಂದೋಲನವೇ ಆಗಬೇಕು.
3. ಶಿವಾನುಭವಗಳು, ಅರಿವು-ಆಚಾರ-ಅನುಭವ, ಉಪನ್ಯಾಸಗಳು ಮಾತ್ರ ಸಾಲದು. ಲಿಂಗಾಯತರು, ಲಿಂಗಾಯತ ಸಂಘಸಂಸ್ಥೆಗಳು ಮನೆ ಮನೆಗೆ ಹೋಗಿ ಲಿಂಗಾಯತ ಧರ್ಮದ ತಿಳುವಳಿಕೆ ನೀಡಲೇಬೇಕು. ಧರ್ಮ ಪ್ರಸಾರ ಮಾಡಲೇಬೇಕು.
4. ಇಬ್ಬರು ಸಹೋದರಿಯರು ಒಂದು ತಾಲ್ಲೂಕಿನಲ್ಲಿ ನೂರಾರು ಸಾವಿರಾರು ಜನರನ್ನು ಸ್ವಯಂ ಪ್ರೇರಣೆಯಿಂದ ” ಈಶ್ವರೀಯ ವಿಶ್ವವಿದ್ಯಾಲಯದ ಅನುಯಾಯಿಗಳು ಆಗುವಂತೆ ಉತ್ತೇಜಿಸುತ್ತಾರೆ. ಮನೆಮನೆಗೆ ಹೋಗಿ ತಮ್ಮ ಧಾರ್ಮಿಕ ತಿಳುವಳಿಕೆ ನೀಡುತ್ತಾರೆ. ಇಬ್ಬರಿಂದ ಆಗುವ ಕೆಲಸವನ್ನು ನೂರಾರು ಜನರು ಇರುವ ನಮಗೂ ಸಾಧ್ಯವಾಗುತ್ತದೆ. ಧರ್ಮ ಪ್ರಸಾರದ ನಿಟ್ಟಿನಲ್ಲಿ ಈ ರೀತಿ ಕೆಲಸ ಮಾಡಲೇಬೇಕು.
5. ಇಲ್ಲವಾದರೆ ಈಗ ರಾಮ-ಕೃಷ್ಣರ ಹೆಸರಲ್ಲಿ, ಹನುಮಮಾಲೆ ಹೆಸರಿನಲ್ಲಿ, ಅಯ್ಯಪ್ಪ ಸ್ವಾಮಿ ಮಾಲೆ ಹೆಸರಿನಲ್ಲಿ, ಓಂಶಾಂತಿ ಹೆಸರಿನಲ್ಲಿ, ಹಿಂದೂ ಹೆಸರಿನಲ್ಲಿ ಲಿಂಗಾಯತರು ಹರಿದು ಹಂಚಿಹೋಗುವುದು ಹೆಚ್ಚಾಗುತ್ತದೆ.
6. ವಚನದರ್ಶನ ಗ್ರಂಥ, ಶರಣಶಕ್ತಿ ಚಲನಚಿತ್ರ , ವೀಣಾ ಬನ್ನಂಜೆ, ಕನ್ನೇರಿ ಸ್ವಾಮಿ ಇತ್ಯಾದಿ ಲಿಂಗಾಯತ ವಿರೋಧಿ ಶಕ್ತಿಗಳ ಆರ್ಭಟದಲ್ಲಿ ಲಿಂಗಾಯತ ಧರ್ಮ ಸೊರಗುತ್ತ ಹೋಗುವುದರಲ್ಲಿ ಅನುಮಾನವೇ ಇಲ್ಲ. ಬಸವತತ್ವದ ಮತ್ತು ಲಿಂಗಾಯತ ಧರ್ಮದ ಪ್ರಸಾರವನ್ನು ಮನೆಮನೆಗೆ ತಲುಪಿಸುವುದೇ ಇದಕ್ಕೆ ಸರಿಯಾದ ಮದ್ದಾಗಿದೆ.

ಉತ್ತಮವಾದ ಸಲಹೆ ನಿಜಕ್ಕೂ ಈ ವಿಚಾರ ಇಂದು ಕ್ರಿಯಾ ರೂಪಕ್ಕೆ ಬರುವುದು ಅತ್ಯವಶ್ಯಕವಾಗಿದೆ. ಇಂದು ಕೇವಲ ಮಾತುಗಳಾಗದೇ ಕ್ರೈಸ್ತ ಮಿಷನರಿ ತರಹ ಕಾರ್ಯವಾಗಬೇಕು. ಇದ್ದೇ ನಾಲ್ಕಾರು ದೊಡ್ಡ ಲಿಂಗಾಯತ ಸಮುದಾಯದ ಎಲ್ಲಾ ರಾಜಕೀಯ ಮುಖಂಡರು, ಮಠಾಧೀಶರು, ಮಾತಾಜಿ ಗಳು, ಸಂಘ ಸಂಸ್ಥೆಯ
ಮುಖಂಡರು ಒಟ್ಟಾಗಿ ಈ ಕಾರ್ಯ ಮಾಡಿ ಹಿಂದುಳಿದ ಎಲ್ಲಾ ಕಾಯಕ ಸಮುದಾಯದ ಜನರಿಗೆ ಬಸವ ಲಿಂಗಾಯತ ಪ್ರಜ್ಞೆ ಅರಿತು ಆಚರಿಸಿ ಬೆಳೆಸುವುದು
ಇಂದಿನ ಜರೂರ ಕೆಲಸವಾಗಿದೆ. ಇಂಥ ಸಲಹೆ ನೀಡಿದ್ದಕ್ಕೆ
ಧನ್ಯವಾದಗಳು. ಲಿಂಗಾಯತ ಧರ್ಮ ಉಳಿಯಬೇಕಾದರೆ
ಲಿಂಗಾಯತ ಸಮಾಜ ಈ ಕೆಲಸ ಮಾಡಲೇಬೇಕು.