ಲಿಂಗಾಯತ ಸಂಘಟನೆ ಕಾರ್ಯಕ್ರಮದಲ್ಲಿ ಪ್ರಾಣಾಯಾಮದ ಪರಿಚಯ

ಬೆಳಗಾವಿ

ಪ್ರಾಣಾಯಾಮದಿಂದ ರಕ್ತ ಪರಿಚಲನೆ ಸುಧಾರಣೆ ಆಗುತ್ತದೆ. ಹಾಗೂ ರಕ್ತದಲ್ಲಿ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ. ಹೃದಯ ರಕ್ತನಾಳಗಳು ಬಲಗೊಂಡು ಆರೋಗ್ಯ ವೃದ್ಧಿಯಾಗುತ್ತ, ಅಧಿಕ ರಕ್ತದೊತ್ತಡ ನಿಯಂತ್ರಣವಾಗುತ್ತದೆ ಎಂದು ಯೋಗಗುರು ಸಿದ್ದಪ್ಪ ಸಾರಪುರಿ ಹೇಳಿದರು.

ಲಿಂಗಾಯತ ಸಂಘಟನೆ ವತಿಯಿಂದ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ವಾರದ ಪ್ರಾಥ೯ನೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಪ್ರಾಣಾಯಾಮ’ ಕುರಿತು ಉಪನ್ಯಾಸ ನೀಡಿದರು.

ಪ್ರಾಣಾಯಾಮ ಎಂದರೆ ಉಸಿರಾಟದ ನಿಯಂತ್ರಣ ಎಂಬುದಾಗಿದೆ. ಕಪಾಲ್ ಭಾತಿ ಎರಡು ಮೂಗಿನ ಹೊಳೆಗಳಿಂದ ಗಾಳಿಯನ್ನು ಉಸಿರಾಡಿ ಸ್ವಲ್ಪ ಶಕ್ತಿಯುತ ಕ್ರಿಯೆಯೊಂದಿಗೆ ಗಾಳಿಯನ್ನು ಬಿಡಿಸಿ, ಮತ್ತೆ ಮತ್ತೆ ಉಸಿರಾಡಿ ದೇಹದಿಂದ ಹೊರಬರುವ ಗಾಳಿಯನ್ನು ಅನುಭವಿಸಲು ನಿಮ್ಮ ಹೊಟ್ಟೆಯ ಮೇಲೆ ನಿಮ್ಮ ಕೈಯನ್ನು ಹಾಕಬಹುದು.

ಕಪಾಲ್ ಎಂದರೆ ತಲೆಬುರುಡೆ ಮತ್ತು ಭಾತಿ ಎಂದರೆ ಹೊಳೆಯುವುದು ಅಥವಾ ಪ್ರಕಾಶಮಾನವಾಗುವುದು ಎಂದರ್ಥ. ಈ ಅಭ್ಯಾಸವು ಮುಂಭಾಗದ ಮೆದುಳನ್ನು ಶುದ್ಧೀಕರಿಸಲು ಮತ್ತು ಆಲೋಚನೆಯ ಸ್ಪಷ್ಟತೆಯನ್ನು ತರಲು ವಿನ್ಯಾಸಗೊಳಿಸಲಾಗಿದೆ. ನಿರ್ವಿಶೀಕರಣ ಉಸಿರಾಟದ ಕಾರ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಎಂದು ಸಾರಪುರಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಮನೋಹರ ಪುಡಕಲಕಟ್ಟಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಈರಣ್ಣ ದೇಯನ್ನವರ ವಹಿಸಿದ್ದರು.

ಮಹಾದೇವಿ ಅರಳಿ ಪ್ರಾರ್ಥನೆ ನಡೆಸಿಕೊಟ್ಟರು. ಆರಂಭದಲ್ಲಿ ಬಸವರಾಜ ಬಿಜ್ಜರಗಿ, ವಿ.ಕೆ. ಪಾಟೀಲ, ಅಕ್ಕಮಹಾದೇವಿ ತೆಗ್ಗಿ, ಬಿ.ಪಿ. ಜೆವಣಿ, ಅಕ್ಕಮಹಾದೇವಿ ಅರಳಿ ವಚನ ವಿಶ್ಲೇಷಣೆ ಮಾಡಿದರು.

ರಮೇಶ ಕಳಸಣ್ಣವರ, ಸತೀಶ ಪಾಟೀಲ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ವಿಜಯ ಹುದಲಿಮಠ, ಸುನೀಲ ಸಾಣೇಕೊಪ್ಪ, ಮಾತನಾಡಿದರು.

ಇದೇ ಸಂದರ್ಭದಲ್ಲಿ ಮನೋಹರ ಪುಡಕಲಕಟ್ಟಿ, ಶಿವಕುಮಾರ ಅರಳಿ ಅವರನ್ನು ಸತ್ಕರಿಸಲಾಯಿತು.

ಸೋಮಶೇಖರ ಕಟ್ಟಿ, ಶಿವಾನಂದ ನಾಯಕ, ಅನೀಲ ರಘಶೆಟ್ಟಿ, ಬಸವರಾಜ ಮತ್ತಿಕಟ್ಟಿ, ವಿರುಪಾಕ್ಷ ದೊಡ್ಡಮನಿ, ಜ್ಯೋತಿ ಬಾದಾಮಿ, ಸುಜಾತ ಮತ್ತಿಕಟ್ಟಿ, ಸುದೀಪ್ ಪಾಟೀಲ, ಮಂಹಾತೇಶ ಮೆಣಸಿನಕಾಯಿ, ಶೇಖರ ವಾಲಿಇಟಗಿ, ಬಾಬಣ್ಣ ತಿಗಡಿ, ಗಂಗಪ್ಪ ಉಣಕಲ್ಲ, ಶರಣ-ಶರಣೆಯರು ಉಪಸ್ಥಿತರಿದ್ದರು.

ಸಂಗಮೇಶ ಅರಳಿ ಅವರು ಕಾಯ೯ಕ್ರಮ ನಿರ್ವಹಿಸಿದರು. ದಾಸೋಹ ಸೇವೆ ಶಿವಕುಮಾರ ಅರಳಿ ಅವರದಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *