ಅಭಿಯಾನದ 16ನೇ ದಿನದ ಲೈವ್ ಬ್ಲಾಗ್
ಶಿವಮೊಗ್ಗ
ಸಾರ್ವಜನಿಕ ಸಮಾವೇಶ – ಲೈವ್ ವಿಡಿಯೋ
ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಸಮಾವೇಶ ಆರಂಭ.
ಪಾದಯಾತ್ರೆ ವಿಡಿಯೋಗಳು
ಸಾವಿರಾರು ಶರಣ ಶರಣೆಯರ ಪಾದಯಾತ್ರೆ
ಶಿವಶರಣೆ ಅಕ್ಕಮಹಾದೇವಿ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ನಡೆದ ಪಾದಯಾತ್ರೆ.









ಪ್ರಶ್ನೆ: 12ನೇ ಶತಮಾನದ ಅನುಭವ ಮಂಟಪದಲ್ಲಿ ಜನಸಾಮಾನ್ಯರಿಗೆ ಅವಕಾಶ ನೀಡಲಾಗಿತ್ತೆ.
ಉತ್ತರ: ಅಂದು ತಳವರ್ಗದವರನ್ನು ಸಂಪೂರ್ಣ ಉಪೇಕ್ಷೆ ಮಾಡಲಾಗಿತ್ತು. ಅವರನ್ನು ಕಡೆಗಣಿಸಲಾಗಿತ್ತು. ಅವರೆಲ್ಲ ತಲೆ ಎತ್ತಿ ಬಾಳುವಂತಹ ಶರಣರಾಗಲು ಅವಕಾಶ ಕಲ್ಪಿಸಿಕೊಡಲಾಯಿತು. ಅವರು ಶರಣರಾದರು. ಸಾಮಾನ್ಯ ಜನರಿಗೆ ಅನುಭವ ಮಂಟಪದಲ್ಲಿ ಕಲ್ಪಿಸಲಾಗಿತ್ತು.
ಪ್ರಶ್ನೆ: ವಚನ ಸಾಹಿತ್ಯ ಮತ್ತು ಆಧ್ಯಾತ್ಮದ ಸಂಬಂಧ ತಿಳಿಸಿ…
ಉತ್ತರ: ಆಧ್ಯಾತ್ಮ ಬಿಟ್ಟು ವಚನ ಸಾಹಿತ್ಯವಿಲ್ಲ. ಆಧ್ಯಾತ್ಮ ಎಂದರೆ ಪ್ರತಿಕ್ಷಣ ದೇವರ ಅನುಗ್ರಹ ಎಂದು ಭಾವಿಸಿಕೊಳ್ಳುವುದು. ಹಾಗಂತ ಎಲ್ಲವೂ ದೇವರಿಂದಲೇ ಅಲ್ಲ. ನಮ್ಮ ಪರಿಶ್ರಮ ಬಹಳ ಮುಖ್ಯವಾಗುತ್ತದೆ. ಗುರು ಪೂಜೆಯೇ ಎಂದು ತಿಳಿದು ಕೃಷಿಯನ್ನು ಮಾಡಬೇಕು ಅದೇ ಆಧ್ಯಾತ್ಮ. ಗುರು ಲಿಂಗ ಜಂಗಮ ಸೇವೆಯೆಂದು ಎಲ್ಲ ಕಾರ್ಯವನ್ನು ಮಾಡಬೇಕು.
ಪ್ರಶ್ನೆ: ವಚನ ಅರ್ಥ ಆಗ್ತಿವೆ. ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕಷ್ಟ ಯಾಕೆ?
ಹಂದಿಗುಂದ ಶ್ರೀ: ನಡೆ ನುಡಿ ಒಂದಾಗಿ ಅಳವಡಿಸಿಕೊಳ್ಳೋದು ಮುಖ್ಯ. ಕಠಿಣವಾದರೂ ಅಳವಡಿಸಿಕೊಳ್ಳಬೇಕು. ವೈದ್ಯರು ಕೊಡುವ ಔಷಧ ಕಹಿಯಾಗಿದ್ದರು ಅದನ್ನು ಹೇಗೆ ತೆಗೆದುಕೊಳ್ಳುತ್ತೇವೆಯೋ, ಅದರಂತೆ ವಚನ ಅದರಕ್ಕೆ ಕಹಿ ಉದರಕ್ಕೆ ಸಿಹಿ.
ಪ್ರಶ್ನೆ: ವಚನ ಅರ್ಥ ಆಗ್ತಿವೆ. ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕಷ್ಟ ಯಾಕೆ?
ಹಂದಿಗುಂದ ಶ್ರೀ: ನಡೆ ನುಡಿ ಒಂದಾಗಿ ಅಳವಡಿಸಿಕೊಳ್ಳೋದು ಮುಖ್ಯ. ಕಠಿಣವಾದರೂ ಅಳವಡಿಸಿಕೊಳ್ಳಬೇಕು. ವೈದ್ಯರು ಕೊಡುವ ಔಷಧ ಕಹಿಯಾಗಿದ್ದರು ಅದನ್ನು ಹೇಗೆ ತೆಗೆದುಕೊಳ್ಳುತ್ತೇವೆಯೋ ಅದರಂತೆ ವಚನ ಅದರಕ್ಕೆ ಕಹಿ ಉದರಕ್ಕೆ ಸಿಹಿ.
ವಿದ್ಯಾರ್ಥಿಗಳೊಂದಿಗೆ ಸಂವಾದ – ಫೋಟೋ, ವಿಡಿಯೋ




ಲವ ಕುಮಾರಸ್ವಾಮಿ, ಕೇಶವ ಜಿ. ಧನ್ಯವಾದ
ಫೋಟೋ, ವಿಡಿಯೋ, ಮಾಹಿತಿ ಕಳಿಸಿದ ಲವ ಕುಮಾರಸ್ವಾಮಿ, ಕೇಶವ ಜಿ. ಮತ್ತು ಶಿವಮೊಗ್ಗ ಅಭಿಯಾನ ಸಮಿತಿಯ ಸೊಶಿಯಲ್ ಮೀಡಿಯಾ ತಂಡದವರಿಗೆ ಧನ್ಯವಾದ.
ವಚನ ಸಂವಾದ ಮುಕ್ತಾಯ
ಸಂವಾದ ಕಾರ್ಯಕ್ರಮದ ಅಧ್ಯಕ್ಷೀಯ ನುಡಿ ಎಸ್. ರುದ್ರೇಗೌಡ ಅವರಿಂದ. ವಂದನಾರ್ಪಣೆ. ವಚನ ಗಾಯನ.

ಬಂದ ಪ್ರಶ್ನೆಗಳು
ಅನುಭವ ಮಂಟಪ ಜನಸಾಮಾನ್ಯರ ವೇದಿಕೆಯಾಗಿದ್ದು ಹೇಗೆ?
ವಚನಗಳಿಗೂ ಅಧ್ಯಾತ್ಮಕ್ಕೂ ಇರುವ ಸಂಬಂಧವೇನು?
ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ, ಯಾಕೆ?
ಸ್ತ್ರೀ ಸಮಾನತೆಯನ್ನು ಶರಣರು ಹೇಗೆ ಸಾಧಿಸಿದ್ದರು?
ಅನುಭವ ಮಂಟಪವನ್ನು ಮತ್ತೆ ಪುನರ್ನಿರ್ಮಾಣ ಮಾಡುತ್ತಿರುವುದು ಯಾಕೆ?
ವಚನ ಸಾಹಿತ್ಯವೋ, ಜನಪದವೋ?
ಬಸವಣ್ಣನವರು ದೇಹವನ್ನೇ ದೇವಾಲಯವನ್ನು ಪರಿಕಲ್ಪಿಸಿದ ರೀತಿ ಹೇಗೆ?
ವಚನಕ್ಕೂ, ಕೀರ್ತನೆಗೂ ಏನು ವ್ಯತ್ಯಾಸ?
ವಚನಗಳನ್ನು ಓದಿದರೆ ಏನು ಪ್ರಯೋಜನ?
ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಯಾಕೆ ಪಾಲಿಸುತ್ತಿಲ್ಲ? ಶಿವಮೊಗ್ಗದಲ್ಲಿ ಹಿಂದೂ ಮುಸ್ಲಿಂ ಗಲಾಟೆ ಯಾಕೆ?
ಮಕ್ಕಳಲ್ಲಿ ವಚನಗಳ ಬಗ್ಗೆ ಆಸಕ್ತಿ ಮೂಡಿಸುವುದು ಹೇಗೆ?
ಬಸವಣ್ಣ ಬ್ರಾಹ್ಮಣರಾದರೂ ಬ್ರಾಹ್ಮಣರನ್ನು ಯಾಕೆ ಉದ್ಧಾರಮಾಡಲಿಲ್ಲ?
ದಲಿತರು ಲಿಂಗಾಯತರಾದರೆ ಮೂಲ ಲಿಂಗಾಯತರು ಅವರನ್ನು ಒಪ್ಪಿಕೊಳ್ಳುತ್ತಾರೆಯೇ?
ವಚನ ಸಾಹಿತ್ಯದಲ್ಲಿ ಐಕ್ಯ ಸ್ಥಿತಿಯನ್ನು ವ್ಯಾಖ್ಯಾನಿಸುತ್ತೀರಿ?
ಬಸವಣ್ಣನವರಷ್ಟು ಮಿಕ್ಕ ಶರಣರ ವಚನಗಳು ಯಾಕೆ ಪ್ರಸಿದ್ಧವಾಗಿಲ್ಲ?
ಯಾವ ಜಾತಿಯವರಾದರೂ ಲಿಂಗಾಯತರಾಗಬಹುದಾ? ಶರಣರಿಗೆ ಯಾಕೆ ರಾಜಕೀಯ ಬೇಕು?
ಶಿವಮೊಗ್ಗ ಶಿವಶರಣರ ಅಭಿವೃದ್ಧಿ ಪ್ರಕಾರ ರಚನೆಯಾಗಬೇಕು
ಕಾರ್ಯಕ್ರಮದ ಲೈವ್ ವಿಡಿಯೋ
ಆಶಯ ನುಡಿ
ಬಸವ ಕೇಂದ್ರದ ಪೂಜ್ಯ ಬಸವ ಮರುಳಸಿದ್ದ ಶ್ರೀಗಳಿಂದ.

ಕಾರ್ಯಕ್ರಮದ ಉದ್ಘಾಟನೆ, ಸ್ವಾಗತ
ಪೂಜ್ಯರು, ಗಣ್ಯರು ವಿದ್ಯಾರ್ಥಿಗಳೊಂದಿಗೆ ಜ್ಯೋತಿ ಬೆಳಗಿಸಿ ಸಂವಾದ ಕಾರ್ಯಕ್ರಮ ಉದ್ಘಾಟನೆ.







ಸಾಣೇಹಳ್ಳಿ ಕಲಾತಂಡದಿಂದ ವಚನ ಗಾಯನ


ಇಂದಿನ ಕಾರ್ಯಕ್ರಮ
ಸಂವಾದ
ಬೆಳಿಗ್ಗೆ 11ಗಂಟೆಗೆ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ
ಪಾದಯಾತ್ರೆ
ಸಂಜೆ 4 ರಿಂದ 6 ಗಂಟೆಯವರೆಗೆ ಶಿವಶರಣೆ ಅಕ್ಕಮಹಾದೇವಿ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಪಾದಯಾತ್ರೆ.
ಸಾರ್ವಜನಿಕ ಸಮಾರಂಭ
ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ.
ಪ್ರಸಾದ
ರಾತ್ರಿ 8.30ಕ್ಕೆ ಪ್ರಸಾದ ದಾಸೋಹ ಕುವೆಂಪು ರಂಗಮಂದಿರದಲ್ಲಿ.
ನಾಟಕ
ರಾತ್ರಿ 9 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ, ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.