ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ…

ಬಸವ ರುದ್ರೇಶ
ಬಸವ ರುದ್ರೇಶ

ನಂಜನಗೂಡು

ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟೆ ಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.

-ನಿಜಶರಣ ಅಂಬಿಗರ ಚೌಡಯ್ಯ

ಸನಾತನ ಗಡಗಡ ನಡುಗುವುದು ಇಂತಹ ವಚನಗಳನ್ನು ಕೇಳಿದಾಗಲೇ…

ಅಂಗದ ಮೇಲೆ ಲಿಂಗವ ಧರಿಸಿ, ತನು ಮನ ಭಾವದಿಂದ ಕಾಯಕವ ಮಾಡಿ, ಜಂಗಮ ದಾಸೋಹವ ಮಾಡುವ, ಕರದಲ್ಲಿ ಇಷ್ಟಲಿಂಗವಾಗಿ, ಮನದಲ್ಲಿ ಪ್ರಾಣಲಿಂಗವಾಗಿ, ಭಾವಲಿಂಗವಾಗಿ ಪೂಜಿಸಿಕೊಳ್ಳುವ ಲಿಂಗಾಯತನಿಗೆ ಮತ್ತೆಲ್ಲೂ ದೇವನ ಹುಡುಕುವ ಪ್ರಮೇಯವಿಲ್ಲ.

ಅಂಗೈಯೊಳಗಣ ಲಿಂಗವ ಪೂಜಿಸುತ್ತ ನಿತ್ಯ ಸತ್ಯವಾದ ಪರಶಿವನ ಕೂಡುವ ಕೂಟವೇ ದೇವನೊಲುಮೆ. ಆದ್ದರಿಂದ ಲಿಂಗ ಶ್ರೇಷ್ಠರಾದ ನಾವುಗಳು ಕಂಡ ಕಂಡುದನ್ನೆಲ್ಲಾ ದೇವರು, ಪೂಜಾರಿ ಕೊಡುವ ನೀರನ್ನೇ ತೀರ್ಥ ಎಂದು ತಿಳಿದು ನಮ್ಮತನವನ್ನು ಮರೆಯಬಾರದು.

ಧರಿಸಿಕೊಂಡಿರುವ ಲಿಂಗಕ್ಕೆ ನಿಷ್ಠೆಯಿದ ಇರಬೇಕು. ಅದನ್ನು ನೋಡುತ್ತಾ ನೋಡುತ್ತಾ ಅದರೊಳಗೆ ಸಮರಸವಾದಾಗ ದೇವನ ಇರುವಿಕೆ ಅರಿವಾಗುವುದು, ದೇವನ ವ್ಯಾಪ್ತಿ ಇರುವಿಕೆ ಜಾಗೃತವಾಗುವುದು. ಇದುವೇ ಲಿಂಗಾಯತ…!

ಲಿಂಗಾಯತ ಸ್ವತಂತ್ರ, ಸನಾತನವಾದವ ತೊಡೆದು, ನಿತ್ಯ ನೂತನವಾದಂತ ಲಿಂಗಾಯತ ಸ್ಥಾಪಿತವಾದಾಗಲೇ ಸನಾತನ ನಡುಗಿತ್ತು.

ಲಿಂಗಾಯತ ಧರ್ಮದ ಮೇಲೆ ದಾಳಿ ಇಂದಿನದಲ್ಲ, ಪುರೋಹಿತಶಾಹಿಗಳ, ಲಿಂಗ ಕಟ್ಟಿಕೊಂಡ ಎಡಬಿಡಂಗಿ ಆಚಾರ್ಯರ, ವಿರಕ್ತರ, ಪಟ್ಟದವರ, ಅಯ್ಯನವರುಗಳು, ಲಿಂಗದರಿವಿಲ್ಲದ ನಮ್ಮೊಳಗೇ ಇರುವ ಅಂಧಭಕ್ತರು, ಧರ್ಮ ನಿಷ್ಠೆಯಿಲ್ಲದ ರಾಜಕೀಯ ಧುರೀಣರು, ನಿರಂತರ ದಾಳಿ ಮಾಡುತ್ತಲೇ ಇದ್ದಾರೆ. ಆದ್ರೂ ಸಹ ನಿಷ್ಠೆ ನಿಜವುಳ್ಳ ಗುರು ಲಿಂಗ ಜಂಗಮರು ಧರ್ಮ ತತ್ವಗಳನ್ನು ಜನಮಾನಸದಲ್ಲಿ ಬಿತ್ತುತ್ತಾ ಬರುತ್ತಿದ್ದಾರೆ..

ಕನ್ನೇರಿ ಶ್ರೀಗಳಂತವರು ಇವು ಕೋಣನ ಮೈಯ ಮೇಲಣ ಸೊಳ್ಳೆಗಳಿದ್ದಂತೆ..!

ಲಿಂಗನಿಷ್ಠರಾದ ಬಸವ ಸದ್ಭಕ್ತರು, ಬಸವ ತತ್ವದಡಿ ಗಟ್ಟಿಯಾಗಬೇಕು, ವಚನ ಅಧ್ಯಯನ ಮಾಡಬೇಕು, ಲಿಂಗ ಪೂಜೆ ಮಾಡಿಕೊಳ್ಳಬೇಕು, ಕಾಯಕದಲ್ಲಿ ನಿಷ್ಠರಾಗಬೇಕು.

ಭಯ ಬಿಟ್ಟು ಮೆಟ್ಟಿನಿಂತರೆ, ಸನಾತನ ನಡುಗಿ ಪುಡಿ ಪುಡಿಯಾಗುವುದು.

Share This Article
1 Comment
  • ಲಿಂಗಾಯತರು ಎಚ್ಚರವಾಗಿ ಎಂಬ ಸಂದೇಶ
    ಎಂಬುದನ್ನು ನಮ್ಮ ನಿಜ ಶರಣ ಅಂಬಿಗರ ಚೌಡಯ್ಯನವರ
    ಮಾತುಗಳಲ್ಲಿ ಚೆನ್ನಾಗಿ ವಿವರಿಸಿದ್ದಿರಿ. ಧನ್ಯವಾದಗಳು

Leave a Reply

Your email address will not be published. Required fields are marked *