ವಚನಗಳನ್ನು ತಿರುಚುವ ಸಾಹಸ ಬೇಡ B.L. ಸಂತೋಷ್: ಎಂ.ಬಿ. ಪಾಟೀಲ್ ನೇರ ಎಚ್ಚರಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ

ರಾಜ್ಯದ ಬಸವ ಅನುಯಾಯಿಗಳನ್ನು ತೀವ್ರವಾಗಿ ಕೆರಳಿಸಿರುವ ವಚನ ದರ್ಶನ ಪುಸ್ತಕ ವಿವಾದ ಈಗ ಮಹತ್ವದ ತಿರುವು ಪಡೆದುಕೊಂಡಿದೆ.

ಇಂದು ವಿಜಯಪುರದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಸಚಿವ ಎಂ.ಬಿ. ಪಾಟೀಲ್ ವಚನ ದರ್ಶನ ಪುಸ್ತಕದ ಮೇಲೆ ಮತ್ತು ಅದರ ಸೂತ್ರಧಾರ ಬಿಜೆಪಿ ನಾಯಕ B L ಸಂತೋಷ್ ಮೇಲೆ ನೇರವಾದ ವಾಗ್ದಾಳಿ ನಡೆಸಿದರು.

“ಬಸವಾದಿ ಶರಣರ ವಚನಗಳು ನಮ್ಮ ಅಸ್ಮಿತೆ. ನಮ್ಮ ಅಸ್ಮಿತೆ ನಮ್ಮ ತಾಯಿ, ಅದನ್ನು ವಚನ ದರ್ಶನ ಪುಸ್ತಕ ತಂದು ತಿರುಚಲು ಹೊರಟಿದ್ದಾರೆ. ವಚನಗಳಿಗೆ ಮನುವಾದ, ಮನುಸ್ಮೃತಿ, ವೇದಗಳನ್ನು ಹಚ್ಚುವ ಕೆಲಸ ಮಾಡಿದ್ದಾರೆ,” ಎಂದು ಕಿಡಿ ಕಾರಿದರು.

ಬಿಜೆಪಿ ಮತ್ತು B.L. ಸಂತೋಷ್ ನಮ್ಮ ಕೆಲವು ಸ್ವಾಮಿಗಳನ್ನು ಬುಟ್ಟಿಗೆ ಹಾಕಿಕೊಂಡು ಇಂತ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದಾರೆ. B.L. ಸಂತೋಷ್ ನಿಮ್ಮ ಅಸ್ಮಿತೆ ನಿಮಗೆ ಪ್ರಮುಖ, ನಮ್ಮ ಅಸ್ಮಿತೆ ನಮಗೂ ಪ್ರಮುಖ. ವೇದ, ಭಗವದ್ಗೀತೆ ನಿಮ್ಮ ಅಸ್ಮಿತೆ. ಅದನ್ನು ಹೇಗೆ ಬೇಕಾದರೂ ಪ್ರಚಾರ ಮಾಡಿ, ಆದರೆ ನಮ್ಮ ಅಸ್ಮಿತೆಗೆ ಕೈ ಹಾಕಿದರೆ ಅದು backfire (ತಿರುಗು ಬಾಣ) ಆಗೊತ್ತೆ ಎಂದು ಎಚ್ಚರಿಸಿದರು.

ನಿಮ್ಮ ಮನುವಾದ, ಮನುಸ್ಮೃತಿಗಳ ಮೇಲೆ ನಾವೂ ಪುಸ್ತಕ ಪ್ರಿಂಟ್ ಮಾಡಿ ಜನರ ಮುಂದೆ ಇಡಬೇಕಾಗುತ್ತದೆ. ನಿಮ್ಮದು ಸುಳ್ಳಿನ ಅಸ್ಮಿತೆಯಾದರೆ ನಮ್ಮದು ಸತ್ಯ, ಎಂದು ಎಚ್ಚರಿಸಿದರು.

ಇಂದಿನ ಸುದ್ದಿ ಘೋಷ್ಠಿಯನ್ನು ವಕ್ಫ್ ಆಸ್ತಿ ವಿಚಾರದ ಮೇಲೆ ಕರೆಯಲಾಗಿತ್ತು. ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಜೊತೆ ನಿಂತಿರುವ ಯಾವ ಸ್ವಾಮಿಯೂ ವಚನ ದರ್ಶನದ ಬಗ್ಗೆ ಚಕಾರ ಎತ್ತಿಲ್ಲ ಎಂದು ಅಸಮಾಧಾನ ಎಂ ಬಿ ಪಾಟೀಲ್ ವ್ಯಕ್ತಪಡಿಸಿದರು. ಎಲೆಕ್ಷನ್ ಮುಗಿದ ಮೇಲೆ ಮೇಲೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಬೆಂಗಳೂರಿನಲ್ಲಿ ಒಂದು ಪ್ರೆಸ್ ಮೀಟ್ ಕರೆಯುವುದಾಗಿ ಹೇಳಿದರು.

ವಚನ ದರ್ಶನದ ವಿರುದ್ಧ ರಾಜ್ಯಾದ್ಯಂತ ಹಲವಾರು ಪ್ರತಿಭಟನೆಗಳು ನಡೆದರೂ ಇಲ್ಲಿಯವರೆಗೂ ಯಾವ ರಾಜಕಾರಣಿಯೂ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು. ಈ ಮೌನ ಮೊದಲ ಬಾರಿಗೆ ಮುರಿದು ವಚನ ದರ್ಶನದ ವಿರುದ್ಧ ಗುಡುಗಿರುವ ಎಂ ಬಿ ಪಾಟೀಲ್ ಅವರ ಹೇಳಿಕೆಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.

ಲಿಂಗಾಯತ ಸಂಸ್ಕೃತಿಯನ್ನು ನಾಶಗೊಳಿಸುವ ಕಾರ್ಯಕ್ಕೆ ನಮ್ಮ ಲಿಂಗಾಯತ ರಾಜಕಾರಣಿಗಳೆ ಕೈ ಜೋಡಿಸುತ್ತಿರುವ ಈ ಸಂದಿಗ್ಧ ಸಂದರ್ಭದಲ್ಲಿ ಸಚಿವ ಪಾಟೀಲರ ಹೇಳಿಕೆ ಮಹತ್ವ ಪಡೆದಿದೆ. ಈಗ ಬಸವಾನುಯಾಯಿ ಲಿಂಗಾಯತರಿಗೆ ಆನೆಯ ಬಲ ಬಂದಂತಾಗಿದೆ, ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜೆ ಎಸ್ ಪಾಟೀಲ್ ಹೇಳಿದರು.

ಬಸವಣ್ಣನವರ ಬಗ್ಗೆ ಮನುವಾದಿಗಳು ಇಷ್ಟೊಂದು ಅಪಪ್ರಚಾರ ಮಾಡ್ತಾ ಇರುವಾಗ ಜನಪ್ರತಿನಿಧಿಯಾಗಿ ಪ್ರಥಮವಾಗಿ ಸಚಿವ ಎಂ.ಬಿ. ಪಾಟೀಲರು ಧ್ವನಿ ಎತ್ತಿದ್ದು, ಪುಸ್ತಕ ವಿರುದ್ಧದ ಹೋರಾಟಕ್ಕೆ ಒಂದು ದೊಡ್ಡ ಬಲ ಬಂದಂತಾಗಿದೆ ಎಂದು ರಾಷ್ಟ್ರೀಯ ಬಸವ ಸೇನಾ ಜಿಲ್ಲಾಧ್ಯಕ್ಷ ಡಾ ರವಿಕುಮಾರ ಬಿರಾದಾರ ಹೇಳಿದ್ದಾರೆ.

Share This Article
7 Comments
  • ಬಸವ ಭಕ್ತ ಸಚಿವರಾದ ಎಂ.ಬಿ.ಪಾಟೀಲರು ಸಂತೋಷ್ ರವರಿಗೆ ಸರಿಯಾಗಿಯೇ ಹೇಳಿದ್ದಾರೆ. ಶತಶತಮಾನಗಳಿಂದಲೂ ವೈಧಿಕ ಮನಸ್ಥಿಯವರು ಜನರನ್ನ ಶೋಷಣೆಯಲ್ಲಿಟ್ಟಿರುವುದಲ್ಲದೆ ಸತ್ಯ ಪ್ರತಿಪಾದನೆ ಮಾಡುವ ವಿಚಾರಗಳನ್ನ ಮತ್ತು ಸತ್ಯ ಪ್ರತಿಪಾದನೆ ಮಾಡುವವರ ವಿರುದ್ಧ ಪಿತೂರಿ ಹಾಗು ಜನರಿಗೆ ಗೊಂದಲ ಮೂಡಿಸಿ ಸುಳ್ಳನ್ನೆ ಸತ್ಯವೆಂದು ಬಿಂಬಿಸುವುದಲ್ಲದೆ. ಸತ್ಯಾಸತ್ಯತೆಯ ತಿಳಿಸುವವರ ವಿರುದ್ಧ ನೇರವಾಗಿ ಚರ್ಚೆಗೆ ಬರದೆ, ಸತ್ಯ ಪ್ರತಿಪಾದನೆ ಮಾಡುವವರ ವಿರುದ್ಧ ಜನರನ್ನೆ ಎತ್ತಿಕಟ್ಟಿ ತಮ್ಮ ಕೆಲಸ ಸಾಧಿಸಿಕೊಳ್ಳುವ ಕೆಲಸ ಮಾಡುತಿದ್ದಾರೆ.
    ಇದರ ಲಿಂಗಾಯತರು ಅರಿತುಕೊಂಡು ಒಳ ಜಾಗೃತಿಯನ್ನ ಮಾಡಬೇಕಿದೆ. ಭಾರತದ ಇತಿಹಾಸದಲ್ಲಿ ಈ ರಾಷ್ಟ್ರವನ್ನ ವಿಶ್ವ ಗುರುವಾಗಿಸಬಲ್ಲ ಸಿದ್ದಾಂತಗಳನ್ನ ಬಸವಣ್ಣನವರು ಮತ್ತು ಬಸವಾದಿಪ್ರಮಥರು ನೀಡಿರುವಷ್ಟು ಮತ್ಯಾರು ನೀಡಿಲ್ಲ.

  • ಸಚಿವ ಎಂ ಬಿ ಪಾಟೀಲ್ ಸಾಹೇಬರಿಗೆ ಕೋಟಿ ಕೋಟಿ ಶರಣು ಶರಣಾರ್ಥಿಗಳು. ಎಂ ಬಿ ಪಾಟೀಲರ ಮನಸ್ಸು ಸದಾಕಾಲ ಬಸವಾದಿ ಶರಣರ ವಿಚಾರಧಾರೆಗಳಿಗೆ ಮಿಡಿಯುತ್ತಿರುತ್ತದೆ.ಇವರಿಗೆ ಬಸವಾದಿ ಶರಣರ ಆಶೀರ್ವಾದ ಸದಾಕಾಲ ಇರಲಿ. ಮತ್ತು ಇವರು ನೂರಾರು ಕಾಲ ಬದುಕಿ ಬಾಳಿ ಬಸವಾದಿ ಶರಣರ ಸೇವೆ ಮಾಡಲಿ.
    ಶರಣು ಶರಣಾರ್ಥಿಗಳು.
    ಶರಣು ಶರಣಾರ್ಥಿಗಳು.

  • ಮಾನ್ಯ ಎಂ.ಬಿ. ಪಾಟೀಲ್ ರವರು ಸಂಘ ಪರಿವಾರವು ವಚನ ದರ್ಶನ ಪುಸ್ತಕದ ಮೂಲಕ ಲಿಂಗಾಯತ ಧರ್ಮವನ್ನು ನಾಶಪಡಿಸಲು ಮಾಡುತ್ತಿರುವ ಹುನ್ನಾರಗಳನ್ನು ನೇರವಾಗಿ ಖಂಡಿಸಿ ಮಾತನಾಡಿರುವುದು ಸ್ವಾಗತಾರ್ಹ. ಧನ್ಯವಾದಗಳು 🙏.

  • ಮಾನ್ಯ ಎಂ. ಬಿ .ಪಾಟೀಲರು ಸತ್ಯವನ್ನು ನುಡಿದಿದ್ದಾರೆ. ಶರಣು ಶರಣಾರ್ಥಿ.

  • ThanQ MB Patil sir. Let’s fight against those who are trying to spoil our Identity. Jai Basava. Jai Lingayat.

  • I welcome our Leader M. B. Patil’s statement against Vachana Darshana and it’s promoter B. L. Shankar. We will not remain this kind of attack by Brahmanya.

Leave a Reply

Your email address will not be published. Required fields are marked *