ಬೀದರ
ನಗರದ ಡಾ. ಬಾಬು ಜಗಜೀವನರಾಮ ಸಮುದಾಯ ಭವನದಲ್ಲಿ ಕರ್ನಾಟಕ ಮಾದಿಗ ವೆಲ್ಫೇರ್ ಅಸೋಶಿಷನ್ ವತಿಯಿಂದ ಆಯೋಜಿಸಲಾದ ಶರಣ ಮಾದರ ಚನ್ನಯ್ಯ ೯೭೪ನೇ ಜಯಂತಿ ಉತ್ಸವ ಮತ್ತು ಒಮ್ಮನಸಿನ ಜಾಗ್ರತಿ ಸಮಾವೇಶ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಸಾನಿದ್ಯ ವಹಿಸಿಕೊಂಡ ಬಸವ ಸೇವಾ ಪ್ರತಿಷ್ಠಾನ ಅಕ್ಕ ಗಂಗಾಂಬಿಕೆ ಅವರು ಶರಣ ಮಾದರ ಚನ್ನಯ್ಯ ಅವರ ಮೂರ್ತಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಅನ್ನ ದಾಸೋಹ ಮತ್ತು ನೂತನ ವರ್ಷದ ದಿನದರ್ಷಿಕೆ ಬಿಡುಗಡೆಯಾಯಿತು.
ಅಕ್ಕಾ ಗಂಗಾಂಬಿಕೆ ಅವರು ಮಾತನಾಡುತ್ತ ಒಂದು ಸಾವಿರ ವರ್ಷಗಳ ಹಿಂದೆ ಕಲ್ಯಾಣದಲ್ಲಿ ಹೆಣ್ಣಿಗಾಗಿ, ಮಣ್ಣಿಗಾಗಿ ಕ್ರಾಂತಿ ನಡೆಯಲಿಲ್ಲ, ಇಡೀ ಮಾನವ ಜನಾಂಗದ ಏಳಿಗೆಗೆ ಕ್ರಾಂತಿ ನಡೆಯಿತು. ಇದರ ಬಗ್ಗೆ ಇಂದು ಅರಿವು ಇಲ್ಲದಿರುವುದು ದುರದೃಷ್ಟ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಈಶ್ವರಸಿಂಗ್ ಠಾಕೂರ ಅವರು ಪೂರ್ವಜರ ಇತಿಹಾಸವನ್ನು ಸ್ಮರಿಸಿಕೊಳ್ಳುತ್ತ ಮಾದಿಗ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಶ್ರೀ ಸ್ವಾಮಿದಾಸ ಕೆಂಪೆನೋರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಕಾಂತಸ್ವಾಮಿ, ಮಾದಾರ ಚನ್ನಯ್ಯಾ ಅರಿವು ಪೀಠ, ತಾಯಿ ಚಿತ್ರಮ್ಮಾ, ಶಶಿಕಾಂತ ಪೊಲೀಸ ಪಾಟೀಲ್, ದುರ್ಗಪ್ಪಾ ದೋಡಮನಿ, ಪ್ರಕಾಶ ಹಳ್ಳಿಖೇಡ, ದಯಾನಂದ ವಕೀಲರು, ಶಿವರಾಜ ನೇಲವಳಕರ್, ಅಣ್ಣಾರಾವ ಪುರುಷೋತ್ತಮ, ನೀಲಕಂಠ ಭಂಡೆ, ಕಮಲಹಸನ್ ಬಾವಿಧೊಡ್ಡಿ, ಜೇಮ್ಸ್ ಇಸ್ಲಾಂಪೂರ, ಸೂರ್ಯಕಾಂತ ಬಲ್ಲೂರು, ಧನರಾಜ ಬೇಮುಳಖೇಡಾ, ಘಾಳೆಪ್ಪಾ ಅಂತಿ, ವಿಜಯಕುಮಾರ ಶಾಪೂರಕರ ಹಾಗೂ ತುಕರಾಮ ರಾಘಪೂರೆ ಇನ್ನೀತ್ತರು ಉಪಸ್ಥೀತರಿದ್ದರು.
