ಮಾಗಡಿ
ತಾಲೂಕಿನ ಗಟ್ಟೀಪುರ ಬೆಟ್ಟದ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಗ್ರಾಮೀಣ ಭಾಗದ 110 ಲಿಂಗಾಯತ ಯುವಕ, ಯುವತಿಯರಿಗೆ ಲಿಂಗ ದೀಕ್ಷೆ ನೀಡಲಾಯಿತು.
ಸೋಮವಾರ ನಡೆದ ಕಾರ್ಯಕ್ರಮದ ನಂತರ ಮಾತನಾಡಿದ ಸುತ್ತೂರು ಮಠದ ಧಾರ್ಮಿಕ ದತ್ತಿಯ ವಿಭಾಗದ ಉಸ್ತುವಾರಿ ಸೋಮಶೇಖರ್ ಲಿಂಗಾಯತ ಯುವಕರನ್ನು ಕುಡಿತ, ಬೀಡಿ, ಸಿಗರೇಟ್, ಗಾಂಜಾ ಸೇವನೆ ಸೇರಿ ಅನೇಕ ಚಟಗಳಿಂದ ದೂರವಿರಿಸಲು ಅವರಲ್ಲಿ ಅರಿವು ಮೂಡಿಸಿ ಲಿಂಗ ದೀಕ್ಷೆ ನೀಡಲಾಗುತ್ತಿದೆ ಎಂದರು.
ಯುವಕರಿಗೆ ಲಿಂಗ ದೀಕ್ಷೆ ನೀಡುವುದರಿಂದ ಸಂಸ್ಕಾರದ ಜತೆಗೆ ಧರ್ಮ, ಸಂಸತಿ ಬೆಳೆಯುತ್ತದೆ. “ಲಿಂಗ ದೀಕ್ಷೆ ಪಡೆದವರು ದಿನನಿತ್ಯ ಬೆಳಗ್ಗೆ ಎದ್ದು, ಸ್ನಾನ ಮಾಡಿ ಶುಭ್ರವಾದ ಶಿವವಸ್ತ್ರ ತೊಟ್ಟು, ಅಂಗೈಯಲ್ಲಿ ಇಷ್ಟಲಿಂಗ ಇಟ್ಟುಕೊಂಡು ಪೂಜೆ ಪುರಸ್ಕಾರ ಮಾಡುವುದರಿಂದ ಅವರಲ್ಲಿ ಧಾರ್ಮಿಕ ಶಕ್ತಿ ಅನಾವರಣಗೊಳ್ಳುತ್ತದೆ,” ಎಂದು ಹೇಳಿದರು.
ಸುತ್ತೂರು ಮಠ ಗ್ರಾಮೀಣ ಜನರಿಗೆ ಲಿಂಗ ದೀಕ್ಷೆ ಕೊಡಲು 1 ಕೋಟಿ ರೂ. ಮೀಸಲಿಟ್ಟಿದೆ. ಇದುವರೆಗೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸುಮಾರು 91 ಸಾವಿರ ಮಂದಿಗೆ ಲಿಂಗ ದೀಕ್ಷೆ ನೀಡಲಾಗಿದೆ ಎಂದು ತಿಳಿಸಿದರು.
Om Shree Guru Bsawa