ಲಿಂಗಾಯತ ಧರ್ಮದ ವಿಧಿಗಳೊಂದಿಗೆ ಶರಣ ಮಹಾಂತೇಶ ಅಗಡಿ ಅಂತ್ಯ ಸಂಸ್ಕಾರ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಮಂಗಳವಾರ ಲಿಂಗೈಕ್ಯರಾಗಿದ್ದ ಬಸವ ತತ್ವದ ಗಣಾಚಾರಿ ಶರಣ ಮಹಾಂತೇಶ ಅಗಡಿ ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನಡೆಯಿತು.

ಅವರ ಪಾರ್ಥಿವ ಶರೀರದ ದರ್ಶನವನ್ನು ಸಾವಿರಾರು ಜನರು ಮಧ್ಯಾಹ್ನದವರೆಗೆ ದೇವರಾಜ ಅರಸು ಬಡಾವಣೆಯ ಅವರ ಸ್ವಗೃಹದಲ್ಲಿ ಪಡೆದುಕೊಂಡರು.

ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಮುರುಘಾ ಶರಣರು, ಬಸವಪ್ರಭು ಸ್ವಾಮೀಜಿ, ಅವರಗೊಳ್ಳ ಶ್ರೀಗಳು, ಮಾಜಿ ಸಂಸದ ಜಿ.ಎಂ. ಸಿದ್ದೇಶ, ಶಿವಯೋಗಿಸ್ವಾಮಿ, ಸುರೇಶ ಕಾರಿಗನೂರ, ದೇವರಮನಿ ಶಿವಕುಮಾರ ಬಯಲಾದ ಶರಣರ ನಿವಾಸಕ್ಕೆ ತೆರಳಿ ಗೌರವ ಸಲ್ಲಿಸಿದರು.

ಅಗಡಿ ನಿವಾಸದ ಬಳಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಂಡೋಮಟ್ಟಿಯ ಗುರುಬಸವ ಮಹಾಸ್ವಾಮಿಗಳು ಶರೀರ ಶಾಶ್ವತವಲ್ಲ, ನಾವು ಮಾಡಿರುವ ಸೇವೆ ಶಾಶ್ವತ. ಬಸವ ತತ್ವಕ್ಕೆ ಗಣಾಚಾರಿಯಾಗಿ ದುಡಿದು ಆಗಲಿರುವ ಶರಣರನ್ನು ಸಂತೋಷದಿಂದ, ಸಂಭ್ರಮದಿಂದ ಬೀಳ್ಕೊಡೊಣ ಎಂದರು.

ಲಿಂಗಾಯತ, ಬಸವಾದಿ ಶರಣರ ವಚನ ತತ್ವ ವಿಧಿವಿಧಾನಗಳಂತೆ ಲಿಂಗೈಕ್ಯ ಶರಣರ ಅಂತಿಮ ಸಂಸ್ಕಾರಗಳು ನಡೆದವು. ವಚನಮೂರ್ತಿಗಳಾಗಿ ಅನುಭಾವಿಗಳಾದ ಅಶೋಕ ಬರಗುಂಡಿ, ಪಿ. ರುದ್ರಪ್ಪ ಕುರಕುಂದಿ, ಬಸವಂತಪ್ಪ ತೋಟದ, ದಾವಣಗೆರೆ ಬಸವ ಬಳಗ, ಬಸವ ಕಲಾಲೋಕದ ಸದಸ್ಯರು ಅಂತಿಮ ಕಾರ್ಯಗಳನ್ನು ನಡೆಸಿದರು.

ಪಾಂಡೋಮಟ್ಟಿಯ ಗುರುಬಸವ ಮಹಾಸ್ವಾಮಿಗಳು, ಬೈಲೂರು-ಮುಂಡರಗಿಯ ನಿಜಗುಣಾನಂದ ಮಹಾಸ್ವಾಮಿಗಳು, ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮಾಯಕೊಂಡ ಶಾಸಕ ಬಸವಂತಪ್ಪ, ಧಾರವಾಡ ಶಾಸಕ ಅರವಿಂದ ಬೆಲ್ಲದ, ಧಾರವಾಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ರುದ್ರಮುನಿ ಆವರಗೆರೆ, ಬಸವ ಕಲಾಲೋಕದ ಶಶಿಧರ, ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ನ ಮುಖ್ಯಸ್ಥ ಷಡಕ್ಷರಿ, ಓಂಕಾರಪ್ಪ, ಬಸವ ಕೇಂದ್ರದ ಸಿದ್ರಾಮಣ್ಣ ನಡಕಟ್ಟಿ, ಪ್ರಬಣ್ಣ ನಡಕಟ್ಟಿ, ಕೆ.ಎಸ್. ಕೋರಿಶೆಟ್ಟರ, ಶಸಾಪದ ಪರಮೇಶ್ವರಪ್ಪ, ಸುಮಾ ಅಂಗಡಿ, ಶೇಖಣ್ಣ ಕವಳಿಕಾಯಿ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವ ಬಳಗ, ಬಸವಪರ ಸಂಘಟನೆಗಳ ಮುಖ್ಯಸ್ಥರು, ಬಸವಾನುಯಾಯಿಗಳು, ವ್ಯಾಪಾರಸ್ಥರು, ಕುಟುಂಬಸ್ಥರು, ಬಂಧು ಮಿತ್ರರು ಸಾವಿರಾರು ಸಂಖ್ಯೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

Share This Article
4 Comments
  • ಶಿವನ ಸೊಮ್ಮು ಶಿವನಿಗೆ ಸಮರ್ಪಿತ ಎಂಬಂತೆ, ಶರಣ ಅಗದಿ ಅವರ ಲಿಂಗೈಕ್ಯ ಸಮಾರಾಧನೆ ನೇರವೆರಸ್ಸಿದ್ದ ಎಲ್ಲ ಶರಣರಿಗೆ ತುಂಬು ಹೃದಯದ ಅಭಿನಂದನೆಗಳು.
    ಶರಣು ಶರಣಾರ್ಥಿ.

  • “…..ಸಂದ ಸಂಪಿಗೆ ಅರಳ,ತುಂಬಿ ಬಂದುಂಬ ಪರಿ ಸೋಜಿಗ”ಶರಣ ಮಹಾಂತೇಶಣ್ಣನವರು ಮೂಲ ಸ್ವರೂಪ ಆದರು. ಆ ಮೂಲ ಚೈತನ್ಯ ಸ್ವರೂಪರಿಗೆ ಸಾವಿರದ ಶರಣಾರ್ಥಿಗಳು. ಈ ಚೈತನ್ಯ ಅವರ ಕುಟುಂಬದ ನೋವನ್ನು ಕಡಿಮೆಗೊಳಿಸಲೆಂದು ಬಸವ ತಂದೆಯಲ್ಲಿ ಪ್ರಾರ್ಥಿಸುವೆ.

  • ಶರಣ ಮಹಾಂತೇಶ ಅಗಡಿ ಅವರು ಬಸವ ತತ್ವದಡಿಯಲ್ಲಿ‌ ಬದುಕಿ ಆದರ್ಶಗಳನ್ನು ಬದುಕಿದವರು, ಅವರ ಕುಟುಂಬ ಈ ಅಗಲಿಕೆಯ ನೋವಿನಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇವೆ.

Leave a Reply

Your email address will not be published. Required fields are marked *