ಬಸವಕಲ್ಯಾಣ
ಇಲ್ಲಿನ ಹರಳಯ್ಯನವರ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ರವಿವಾರ ಬೆಳಗ್ಗೆ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ಮಾರ್ಗದರ್ಶನದಲ್ಲಿ ಮಕ್ಕಳ ಕೂಟದ ಮಕ್ಕಳಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಭಕ್ತಿ ಮತ್ತು ಶೃದ್ಧೆಯಿಂದ ನಡೆಯಿತು.
ಅಕ್ಕನ ಬಳಗದ ಸುಲೋಚನಾ ಗುದಗೆ ಇಷ್ಟಲಿಂಗಯೋಗ ಪೂಜೆ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.
ಶಿಕ್ಷಕ ಶಿವಕುಮಾರ ಬಿರಾದಾರ ಮಾತನಾಡಿ ಇಷ್ಟಲಿಂಗ ಪೂಜೆ ಎಲ್ಲರೂ ಮಾಡಿಕೊಳ್ಳಬಹುದು. ಇದರಿಂದ ಏಕಾಗ್ರತೆ ಬರುತ್ತದೆ. ಮನಸ್ಸಿನ ಚಂಚಲತೆ ದೂರವಾಗುತ್ತದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ. ಮನಸ್ಸು ಪರಿವರ್ತನೆಯಾಗುವುದರ ಜೊತೆಗೆ ಹೊಸ ಚೈತನ್ಯ ಸಿಗುತ್ತದೆ ಆದ್ದರಿಂದ ಪ್ರತಿ ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದರು.

ನಗರಸಭೆ ಸದಸ್ಯೆ ನಿರ್ಮಲಾ ಶಿವಣಕರ್, ವಿದ್ಯಾವತಿ ಶೇರಿಕಾರ, ಕವಿತಾ ರಾಜೋಳೆ, ಗಣಪತಿ ಕಾಸ್ತೆ, ಸುಲೋಚನಾ ಪಟ್ನೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ನೂರಾರು ಮಕ್ಕಳು ಪೂಜೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ನಂತರ ಪ್ರಸಾದ ದಾಸೋಹ ನಡೆಯಿತು.
ಶರಣಾರ್ಥಿ