ನಂಜನಗೂಡು:
ಸುಕ್ಷೇತ್ರ ಮಲ್ಲನಮೂಲೆ ಶ್ರೀಗುರುಕಂಬಳೀಶ್ವರ ಮಠದ ಲಿಂಗೈಕ್ಯ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳ ಸಂಸ್ಮರಣೆ ಮತ್ತು ಧಾರ್ಮಿಕ ಸಭೆ ಬುಧವಾರ ಜರುಗಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು, ವಾಟಾಳು ಮಠದ ಡಾ. ಸಿದ್ದಲಿಂಗ ಶಿವಾಚಾರ್ಯರು, ಉಕ್ಕಿನಕಂತೆ ಮಠದ ಸದಾಶಿವ ಮಹಾಸ್ವಾಮಿಗಳು, ಮಾದಳ್ಳಿ ಮಠ, ಕನಕಪುರ ದೇಗುಲಮಠದ ಚನ್ನಬಸವ ಸ್ವಾಮಿಗಳು, ಬೆಟ್ಟದಪುರ ಸಲೀಲಾಖ್ಯಮಠದ ಪೂಜ್ಯರು, ಮಲ್ಲನಮೂಲೆ ಗುರುಕಂಬಳೀಶ್ವರ ಮಠದ ಇಮ್ಮಡಿ ಸಿದ್ಧಲಿಂಗ ಸ್ವಾಮಿಗಳು ಇವರುಗಳೆಲ್ಲ ಸಾನಿಧ್ಯ ವಹಿಸಿದ್ದರು.

ಹರಗುರುಚರಮೂರ್ತಿಗಳು, ವೀರಶೈವ ಲಿಂಗಾಯತ ಸಮಾಜದ ಹಿರಿಯರು, ಮುಖಂಡರು ಹಾಗೂ ಉಪಸ್ಥಿತರಿದ್ದರು.
