ಹೋರಾಟದ ನಂತರ ಸಾಹಿತ್ಯ ಸಮ್ಮೇಳನದಲ್ಲಿ ಬಸವಣ್ಣನವರ ದೊಡ್ಡ ಪುತ್ಥಳಿ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ

ನಗರದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಗುರು ಬಸವಣ್ಣನವರ ದೊಡ್ಡ ಪುತ್ಥಳಿಯನ್ನು ಪ್ರಧಾನ ವೇದಿಕೆಯ ಮುಖ್ಯ ದ್ವಾರದ ಮುಂದೆ ಸ್ಥಾಪಿಸಲಾಗಿದೆ.

ಸಮ್ಮೇಳನದಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ರಾಷ್ಟ್ರ ಕವಿ ಕುವೆಂಪು ಅವರ ಕಡೆಗಣನೆ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದ ಕನ್ನಡ ಹಾಗೂ ಬಸವ ಸಂಘಟನೆಗಳ ಒತ್ತಡಕ್ಕೆ ಸಾಹಿತ್ಯ ಸಮ್ಮೇಳನದ ಸಮಿತಿ ಮಣಿದಿದೆ.

ಹೋರಾಟದ ನೇತೃತ್ವ ವಹಿಸಿದ್ದ ಓಂಕಾರ ಶರಣರು, ಲಿಂಗಾಯತ ಮಹಾಸಭಾದ ಮಂಜುನಾಥ ಬೆಟ್ಟಹಳ್ಳಿ ಅವರು ಸರಕಾರವನ್ನು ಮತ್ತು ಸಾಹಿತ್ಯ ಸಮ್ಮೇಳನದ ಸಮಿತಿಯನ್ನು ಅಭಿನಂದಿಸಿದ್ದಾರೆ.

ಬಸವಣ್ಣನವರ ಪುತ್ತಳಿ ಸ್ಥಾಪಿಸಿದ್ದರೂ ಸಂಘ ಪರಿವಾರದ ಮಹೇಶ್ ಜೋಶಿಯ ನೇತೃತ್ವದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ವಚನ ಸಾಹಿತ್ವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

Share This Article
3 Comments
    • ಬಸವಾದಿ ಶರಣರ ಮತ್ತು ವಚನ ಸಾಹಿತ್ಯ ವಿಚಾರಗಳನ್ನು ಬದಿಗಿಟ್ಟು ಸಮ್ಮೇಳ ನಡೆಸಲು ಮುಂದಾದ ಮನುವಾದಿಗಳ ಪ್ರಯತ್ನ ಸದ್ಯಕ್ಕೆ ಅಲ್ಪಮಟ್ಟಕ್ಕೆ ವಿಪಲವಾಗಿದೆ. ರಾಜ್ಯಾದಂತ ಬಸವ ಪರ ಸಂಘಟನೆಗಳ ವಿರೋದ ಶಮನಮಾಡಲು ಬಸವ ದ್ವಾರ ಮತ್ತು ದೊಡ್ಡ ಬಸವ ಪ್ರತಿಮೆ ದ್ವಾರದಲ್ಲಿ ಇಡಬೇಕಾಯಿತು. ಇದು ಪೂರ್ವ ನಿಯೋಜಿತ ಆಗಿದ್ದರೆ ಅಧ್ಯಕ್ಷರು ವಿರೋದ ಆರಭದಲ್ಲೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದರು. ಬಸವಾನುಯಾಯಿಗಳು ಮತ್ತು ಬಸವ ಪ್ರಜ್ಞೆ ಉಳ್ಳವರು ಸಮ್ಮೇಳನದ ಮುಂದಿನ ನಡೆಗಳನ್ನು ಬಹಳ ಕುತೂಹಲದಿಂದ ಎದುರುನೋಡುವಂತಾಗಿದೆ.

  • ಬಸವ ಮೀಡಿಯಾ, ಸಂಪಾದಕರಿಗೆ ಮಂಡ್ಯ ಲಿಂಗಾಯಿತ ಮಹಾಸಭಾ ಅಭಿನಂದನೆಗಳು
    ಮಾನ್ಯ ಶರಣರೆ🙏🏽🙏🏽🙏🏽💐 ಮಂಡ್ಯ ನಗರದಲ್ಲಿ ಮೂರು ದಿನಗಳಕಾಲ ನಡೆಯುವ ರಾಜ್ಯಮಟ್ಟದ ಅದ್ದೂರಿ ಕನ್ನಡ ಸಾಹಿತ್ಯ ಪರಿಷತ್,ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಿಕೆಯಲ್ಲಿ ಹಾಗೂ ಫ್ಲೆಕ್ಸ್ ಗಳಲ್ಲಿ ದ್ವಾರ ಮಂಟಪಗಳಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರುಬಸವಣ್ಣ, ಹಾಗೂ ರಾಷ್ಟ್ರಕವಿ ಕುವೆಂಪುರವರನ್ನ ಕೈ ಬಿಡಲಾಗಿ ಕಡೆಗಣಿಸುವ ಕೆಲಸ ಮಾಡಿದರು ಇದನ್ನು ಖಂಡನೆ ಮಾಡಿ ಮಂಡ್ಯ ಜಿಲ್ಲಾ ಲಿಂಗಾಯತ
    ಮಹಾಸಭಾ ಕಾಯಕಯೋಗಿ ಫೌಂಡೇಶನ್ ಮಳವಳ್ಳಿ ಹಲಸಳ್ಳಿ ಮಠದ ಓಂಕಾರ ಪೂಜ್ಯರು, ಪತ್ರಿಕಾಗೋಷ್ಠಿ ಮಾಡಿ ಅಧಿಕಾರಿಗಳಿಗೆ ಆಯೋಜಕರಿಗೆ ಸರ್ಕಾರಕ್ಕೆ ಆಗ್ರಹ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಬಸವ ಮೀಡಿಯಾ ತುಂಬಾ ದೊಡ್ಡ ಸುದ್ದಿಯನ್ನು ಮಾಡಲಾಗಿ ಇದು ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತಕ್ಕೆ ಎಚ್ಚರಿಸುವ ಕೆಲಸವನ್ನು ತಮ್ಮ ಬಸವ ಮೀಡಿಯಾ ದಿಂದ,ಸಹ ದೊಡ್ಡ ಸುದ್ದಿಯಾಗಿ ನಮ್ಮ ಬೇಡಿಕೆಗೆ ಸಿಕ್ಕ, ಜಯವಾಗಲಿರುತ್ತದೆ,ನಾವುಗಳು ಮುಖ್ಯ ದ್ವಾರಕ್ಕೆ ಬಸವಣ್ಣನವರ ಹೆಸರಿಡಬೇಕು ಎಂದು ನಮ್ಮ ಅಗ್ರಹವಾಗಿತ್ತು ಇದರ ಜೊತೆಗೆ 20 ಅಡಿ ಎತ್ತರದ ಬಸವಣ್ಣನವರ ಪುತ್ತಳಿಯನ್ನೇ ತಂದು ಇಟ್ಟು ಸಭಾ ಮಂಟಪದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಿದ್ದಾರೆ, ಮೈಸೂರ್ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಮುಖ್ಯ ದ್ವಾರವನ್ನು ಸಹ ಅಳವಡಿಸಿ, ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಯಕರ ಬಗ್ಗೆ ವಿಚಾರಗೋಷ್ಠಿಯೂ ಸಹ ನಡೆಯಲಿದೆ, ನಿಮ್ಮದೊಡ್ಡ ಸಹಕಾರ ಅದಕ್ಕೆ ತಮಗೆ ಅಭಿನಂದನೆಗಳು ಸರ್🙏🏽🙏🏽💐 ನಿಮ್ಮ ಸಹಕಾರ ನಮಗೆ ಅತ್ಯಗತ್ಯ ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *