ಚಿತ್ರದುರ್ಗ
ಶರಣ ಮಾಸದ ನಿಮಿತ್ಯ ‘ಮನ ಮನೆಗೆ ಮಾಚಿದೇವ’ ಎಂಬ ವಿಶೇಷ ಕಾರ್ಯಕ್ರಮ ಜುಲೈ 27ರಿಂದ ಆಗಸ್ಟ್ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.
ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾ ಸಂಸ್ಥಾನಮಠ (ಮಡಿವಾಳ ಗುರುಪೀಠ)ದ ಪೂಜ್ಯ ಡಾ. ಬಸವ ಮಾಚಿದೇವ ಸ್ವಾಮೀಜಿ ಸಾನಿದ್ಯದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿದಿನ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಗರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಶರಣ ಮಡಿವಾಳ ಮಾಚಿದೇವರ ಜೀವನ ಮೌಲ್ಯಗಳ ಉಪನ್ಯಾಸ, ಪೂಜ್ಯರ ಅನುಭಾವ ಮತ್ತು ವಚನ ಗಾಯನ ನಡೆಯುತ್ತದೆ ಎಂದು ಶ್ರೀಮಠದ ಪ್ರಧಾನ ಕಾರ್ಯದರ್ಶಿ ಡಾ. ಸಂಗಮೇಶ ಕಲಹಾಳ ಅವರು ತಿಳಿಸಿದ್ದಾರೆ.
ಸಮುದಾಯದ ಜನರಲ್ಲಿ ಸಂಘಟನೆಯ ಮಹತ್ವ, ಶರಣ ಮಾಚಿದೇವರ ಆದರ್ಶ, ತತ್ವಗಳ ಬಗ್ಗೆ ಜನರಲ್ಲಿ ಜಾಗ್ರತೆ ಮೂಡಿಸುವ ಉದ್ದೇಶದಿಂದ ಪೂಜ್ಯ ಡಾ. ಬಸವ ಮಾಚಿದೇವ ಸ್ವಾಮೀಜಿಯವರು ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ.
ಕಾಲಕಾಲಕ್ಕೆ ಸಮುದಾಯದ ಜನರ ಸ್ಥಿತಿಗತಿಗಳಲ್ಲಿ ಆಗಬಹುದಾದ ಬದಲಾವಣೆಗಳ ಜಿಲ್ಲಾವಾರು ಪುನರಾವಲೋಕನ ನಡೆಸಲಾಗುತ್ತದೆ. ಅಲ್ಲದೇ ಸಮಾಜದವರು ವಿವಿಧ ಭಾಗದಲ್ಲಿ ಇಂದಿಗೂ ಅನುಭವಿಸುವ ಕಷ್ಟಗಳನ್ನು, ಶೋಷಣೆಗಳನ್ನು, ಮೂಢನಂಬಿಕೆಗಳನ್ನು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ ಇದಾಗಿದೆ, ಎಂದು ಕಲಹಾಳ ಹೇಳಿದರು.

Rtd Govt High School Head Master.
SVM College Road Vidyanagar Hungund. Dist : Bagalkote 587118
9449517138/7019726086