ಮಂಗಳೂರು
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರನ್ನು ನಗರದಲ್ಲಿ ನಡೆಯುತ್ತಿರುವ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ.
ವಚನ ಸಾಹಿತ್ಯ ಸಮ್ಮೇಳನ-2025 ಜನವರಿ 4ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಮತ್ತು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ತಿಳಿಸಿದ್ದಾರೆ.

ಮಂಗಳೂರು ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭ ಇತ್ತೀಚೆಗೆ ಶ್ರೀಕೃಷ್ಣ ಸಂಕೀರ್ಣಸಲ್ಲಿರುವ ಮಹಿಳಾ ಮಂಡಳಿಯ ಸ್ವಾಗತ ಸಮಿತಿಯ ಕಛೇರಿಯಾದ ಕಲ್ಕೂರ ಪ್ರತಿಷ್ಠಾನದಲ್ಲಿ ಜರುಗಿತು.
ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೊಮಯ ಲಾಂಛನ ಅನಾವರಣಗೊಳಿಸಿ ಮಾತನಾಡಿದರು. “ವಚನ ಸಾಹಿತ್ಯಕ್ಕೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ. ಇಂತಹ ಸಮ್ಮೇಳನಗಳನ್ನು ಮಾಡುವುದರಿಂದ ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಹಾಗೂ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಟ್ಟಂತಾಗುತ್ತದೆ. ತಾವು ಮಾಡಲು ಹೊರಟಿರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ.” ಎಂದು ಶುಭ ಹಾರೈಸಿದರು.
ಕಲ್ಕೂರ ಪ್ರತಿಷ್ಠ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್, ಮಾಜಿ ಕಾರ್ಪೊರೇಟರ್ ರಾಧಾಕೃಷ್ಣ ಲಾಂಛನ ನಿರ್ಮಿಸಿದ ಸಂತ ಅಲೋಶಿಯಸ್ ಕಾಲೇಜಿನ ಕಲಾ ಶಿಕ್ಷಕ ಜಾನ್ ಚಂದ್ರನ್, ಮಂಗಳೂರು ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ , ನಿವೃತ್ತ ಉಪನ್ಯಾಸಕಿ ಮೀನಾಕ್ಷಿ ರಾಮಚಂದ್ರ, ನಿವೃತ್ತ ಶಿಕ್ಷಕಿ ರತ್ನಾವತಿ ಬೈಕಾಡಿ, ಜಯಶ್ರೀ, ಪೂರ್ಣಿಮಾ ರಾವ್ ಪೇಜಾವರ, ಸುಮಾ ಪ್ರಸಾದ್, ಆಶಾ ಜಯದೇವ್, ಶಕುಂತಲಾ, ಚಂದ್ರಕಲಾ, ಭಾಗ್ಯಶ್ರೀ, ಅರುಣ್ ಮಾನ್ವಿ, ಬಸವರಾಜ್, ವಸಂತ್, ಮಲ್ಲಿಕಾರ್ಜುನ ಬಸವನಗುಡಿ, ಪ್ರಜ್ವಲ್ ಮಾನ್ವಿ ಉಪಸ್ಥಿತರಿದ್ದರು.
ಭಾರತ ದೇಶದ ಪಶ್ಚಿಮ ಕರಾವಳಿ ಪ್ರದೇಶವು ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಲಸೆ ಬಂದ ಸ್ಥಳವಾಗಿದ್ದು ಈ ಭಾಗದಲ್ಲಿ ಅನುಭಾವ ಸಂಗಮದವರು ಸುಮಾರು ಮೂವತ್ತು ವರ್ಷಗಳಿಂದ ಲಿಂಗ ಧರ್ಮದ ತತ್ವಗಳನ್ನು ಪ್ರಸಾರ ಮಾಡುತ್ತಿದ್ದು ಸುಂದರಿ ಕಾರ್ಯಕ್ರಮವು ಸಾಂಗವಾಗಿ ನೆರವೆರಲಿ ಎಂದು ಪ್ರಾರ್ಥಿಸಿದ್ದೆವೆ, ಶರಣಾರ್ಥಿ.
ಯಿಂದ
ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ
ಪೀಠಾಧಿಪತಿಗಳು
ಅಲ್ಲಮಪ್ರಭು ಅನುಭಾವ ಪೀಠ
ಪಶ್ಚಿಮ ಕರಾವಳಿ ಭಾರತ ದೇಶ.
ಬಹಳ ಉತ್ತಮ ಕೆಲಸ .ಕರಾವಳಿಯ ಭಾಗದಲ್ಲಿ ಶರಣರ ವಚನ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಸಂತೋಷದ ವಿಷಯ .ಕಾರ್ಯಕ್ರಮ ಅಯೋಜಕರಿಗೆ ಅನಂತ ಕೋಟಿ ಶರಣು
Best wishes.
ಕರಾವಳಿಯಲ್ಲಿ ವಚನಾನುಭವದ ಕಲರವ. ನಿಮ್ಮೆಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮಕ್ಕೆ ಶುಭಾಕೋರುತ್ತೇನೆ ಮತ್ತು ಯಶಸ್ವಿಯಾಗಿ ನೆರವೇರಲಿ ಎಂದು ಆಶಿಸುತ್ತೇನೆ. ಶುಭಾಷಯಗಳು 🌹🙏
ವಚನ ಕಾರ್ಯಕ್ರಮ ಉತ್ತಮ ವಾದ ಸಂದೇಶ ವನ್ನುಸಮಾಜಕ್ಕೆ
ನೀಡುತ್ತದೆ ಮುಂದುವರಿಸಿ ಧನ್ಯವಾದಗಳು 🌹🙏🏿
ಕರಾವಳಿಯಲ್ಲಿ ಬಸವ ಪ್ರಭೆ ಹರಡಲಿ ಬೆಳಗಲಿ