ಡಾ. ಮನಮೋಹನ್‌ ಸಿಂಗ್‌ ಬಿಡುಗಡೆ ಮಾಡಿದ್ದ 100 ರೂಪಾಯಿ ಬಸವೇಶ್ವರ ನಾಣ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಕಳೆದ ವಾರ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಬಿಡುಗಡೆ ಮಾಡಿದ್ದ ಬಸವೇಶ್ವರ ನಾಣ್ಯಕ್ಕೆ ಸಂಬಂಧಿಸಿದ ಚಿತ್ರಗಳು ವೈರಲ್ ಆಗಿವೆ.

ಈ ಕಾರ್ಯಕ್ರಮ ನಗರದ ಅರಮನೆ ಮೈದಾನದಲ್ಲಿ ಹದಿನೆಂಟು ವರ್ಷದ ಹಿಂದೆ, ಜೂನ್ 23, 2006, ನಡೆಯಿತು.

ಸಮಾರಂಭದಲ್ಲಿ ಅಂದಿನ ರಾಜ್ಯಪಾಲ ಟಿ.ಎನ್‌.ಚತುರ್ವೇದಿ, ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಅರ್ಥ ಸಚಿವ ಪಿ.ಚಿದಂಬರಂ, ಕೇಂದ್ರ ಗೃಹಸಚಿವ ಶಿವರಾಜ್‌ ಪಾಟೀಲ್‌ ಮುಂತಾದವರು ಪಾಲ್ಗೊಂಡಿದ್ದರು.

ತಮ್ಮ ಭಾಷಣದಲ್ಲಿ ಡಾ. ಮನಮೋಹನ್‌ ಸಿಂಗ್‌ ಅವರು 12ನೇ ಶತಮಾನದ ಈ ಕ್ರಾಂತಿ ಪುರುಷ ಬಸವಣ್ಣನವರ ಆದರ್ಶಗಳಂತೆ ನಡೆಯಲು ಕರೆ ಕೊಟ್ಟಿದ್ದರು.

ಡಾ. ಮನಮೋಹನ್‌ ಸಿಂಗ್‌ ಬಿಡುಗಡೆ ಮಾಡಿದ್ದು 5 ರೂಪಾಯಿ ನಾಣ್ಯ ಎಂದು ತಪ್ಪು ಮಾಹಿತಿ ಹರಡುತ್ತಿದೆ. ಮಾಜಿ ಪ್ರಧಾನಿಯವರು ಲೋಕಾರ್ಪಣೆ ಮಾಡಿದ್ದು 100 ರೂಪಾಯಿಯ ಬಸವೇಶ್ವರ ನಾಣ್ಯ.

Share This Article
2 Comments
  • ಬಹಳ ಉಪಯುಕ್ತ ಮಾಹಿತಿ ಬಸವ ಮೀಡಿಯಾದಿಂದ ತಿಳಿಯಿತು ಇದು ಎಷ್ಟೋ ಜನಕ್ಕೆ ತಿಳಿದಿರಲಿಲ್ಲ. ಧನ್ಯವಾದಗಳು

  • ನಾನು 5ರೂ ನಾಣ್ಯ ನೋಡಿದ್ದೇನೆ.
    ಎಲ್ಲಾ ಮೌಲ್ಯದ ನಾಣ್ಯಗಳನ್ನು
    ಅಂದು ಬಿಡುಗಡೆ ಮಾಡಿರಬೇಕು.

Leave a Reply

Your email address will not be published. Required fields are marked *