ಚಾಮರಾಜನಗರ
ತಾಲೂಕಿನ ಮರಿಯಾಲದ ಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠದಲ್ಲಿ ಡಿಸೆಂಬರ್ 15, 16ರಂದು ಅದ್ಧೂರಿಯಾಗಿ ‘ಬಸವೋತ್ಸವ’ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
25 ಪೂಜ್ಯರುಗಳ ಮಂಟಪದ ಲಿಂಗಪೂಜೆ ಮತ್ತು ಪಾದಪೂಜೆ, 25 ವಟುಗಳಿಗೆ ಲಿಂಗದೀಕ್ಷೆ, 25 ಪೂಜ್ಯರುಗಳ ಪಾದಪೂಜೆ ಹಾಗೂ ಬಿಲ್ವಪತ್ರೆ ಸಸಿಗಳಿಗೆ ದೀಕ್ಷೆ, ಬಸವದ್ವಾರ ಉದ್ಘಾಟನೆ, ವಿಶ್ವಗುರು ಬಸವೇಶ್ವರರ ಪುತ್ಥಳಿಯ ಅನಾವರಣ, ಶ್ರೀಮಠದ ಮೂಲ ಗುರುಗಳಾದ ಪೂಜ್ಯ ಮುರುಘರಾಜೇಂದ್ರ ಸ್ವಾಮಿಗಳ ಹಾಗೂ ಶ್ರೀಮಹಾಂತ ಸ್ವಾಮಿಗಳವರ ಪುತ್ಥಳಿ ಅನಾವರಣ.

ಮಹಾಂತ ಮಂಟಪ ಉದ್ಘಾಟನೆ, ಶಿವಶರಣ-ಶರಣೆಯರ ವೇಷಭೂಷಣ, ಗುರುಪರಂಪರೆ ಭಾವಚಿತ್ರ ಮೆರವಣಿಗೆ, ವಿಶ್ವಗುರು ಬಸವೇಶ್ವರ ಹಾಗೂ ವಚನ ಸಾಹಿತ್ಯದ ಮೆರವಣಿಗೆ, ವಿಜ್ಞಾನ ಹಾಗೂ ಸಾಹಿತ್ಯ ವಸ್ತುಪ್ರದರ್ಶನ, ಅಭಿನಂದನಾ ಗ್ರಂಥ ಬಿಡುಗಡೆ, ಕೃಷಿ ಮೇಳ, ರೈತರಿಗೆ ಸಸಿ ವಿತರಣೆ, ಸಾಮೂಹಿಕ ವಚನ ಪಠಣ, 25 ಜೊತೆ ಎತ್ತುಗಳ ಪ್ರದರ್ಶನ, 25 ಕ್ಷೇತ್ರದ ಸಾಧಕರಿಗೆ ಸನ್ಮಾನ, ಬೈಕ್ ರ್ಯಾಲಿ, ಸಾಂಸ್ಕೃತಿಕ ಕಲರವ, ಶಿವಭಜನೆ, ಹಾಸ್ಯೋತ್ಸವ, ವಸ್ತು ಪ್ರದರ್ಶನ, ಶಿವಶರಣರ ನಾಟಕ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
ಸಮಾರಂಭಗಳಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ದಲಿಂಗ ಮಹಾಸ್ವಾಮಿಗಳು, ಭಾಲ್ಕಿಯ ಬಸವಲಿಂಗಪಟ್ಟದ್ದೇವರು, ದೇವನೂರಿನ ಮಹಾಂತಸ್ವಾಮಿಗಳು, ಇಳಕಲ್ಲ ಗುರುಮಹಾಂತ ಮಹಾಸ್ವಾಮಿಗಳು, ಹಾವೇರಿ ಸದಾಶಿವ ಮಹಾಸ್ವಾಮಿಗಳು, ಚಾಮರಾಜನಗರದ ಚನ್ನಬಸವ ಮಹಾಸ್ವಾಮಿಗಳು, ಪಡಗೂರು ಶಿವಲಿಂಗೇಂದ್ರ ಸ್ವಾಮಿಗಳು, ಮಲೆಯೂರು ಭುವನಕೀರ್ತಿ ಭಟ್ಟಾರಕ ಸ್ವಾಮಿಗಳು, ಕನಕಪುರದ ಡಾ. ಚನ್ನಬಸವ ಸ್ವಾಮಿಗಳು, ಮರಿಯಾಲ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳು ಮತ್ತಿತರ ಪೂಜ್ಯರು ಸಾನಿಧ್ಯ, ಸಮ್ಮುಖ, ನೇತೃತ್ವ, ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿರುವರು.

ಶ್ರೀಮಠದ ಭಕ್ತರು, ಲಿಂಗಾಯತ, ವೀರಶೈವ ಸಂಘಟನೆಗಳು, ಜನಪ್ರತಿನಿಧಿಗಳು, ಶರಣ-ಶರಣೆಯರ ಸಂಘಸಂಸ್ಥೆಗಳು, ಮಠದ ಹಿರಿಯ ವಿದ್ಯಾರ್ಥಿಗಳು, ಹರಗುರುಚರಮೂರ್ತಿಗಳು ಭಾಗವಹಿಸುವರು.
ಕಾರ್ಯಕ್ರಮದಲ್ಲಿ ನಿರಂತರ ಪ್ರಸಾದ ದಾಸೋಹ ಇರುತ್ತದೆ ಎಂದು ಮಠಾಧ್ಯಕ್ಷರಾದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಇಂತಹ ಮಠಗಳ ಕಾರ್ಯಕ್ರಮ ಬೇರೆ ಮಠಗಳಿಗೂ ಮಾದರಿಯಾಗಬೇಕಿದೆ. ಮರಿಯಾಲ ಮಠದ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಶ್ರಿಗಳಿಗೆ ಅನಂತ ಶರಣು